ನವದೆಹಲಿ:ಟೀಮ್​ ಇಂಡಿಯಾ ಮಾಜಿ ನಾಯಕ ಹಾಗೂ ಐಪಿಎಲ್​ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​ ತಂಡದ ನಾಯಕ ಎಂಎಸ್​ ಧೋನಿ ಶುಕ್ರವಾರ ತಮ್ಮ 42ನೇ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು. ರಾಂಚಿಯ ಮನೆಯ ಅಂಗಳದಲ್ಲಿ ನೆಚ್ಚಿನ ನಾಯಿಗಳ ಎದುರು ಕೇಕ್​ ಕತ್ತರಿಸಿದ ಧೋನಿ, ಬಳಿಕ ಅದರ ಪೀಸ್​ಗಳನ್ನು ನಾಯಿಗಳಿಗೆ ತಿನ್ನಿಸಿದರು. ಇದರ ವಿಡಿಯೋವನ್ನು ಧೋನಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವ ಧೋನಿ, ಶನಿವಾರ ಮೂಲಕ ಅಪರೂಪಕ್ಕೆಂಬಂತೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿದರು. ವಿಶಿಷ್ಟವಾಗಿ ಬರ್ತ್​ಡೇ ಆಚರಿಸಿರುವ ವಿಡಿಯೋವನ್ನು ಹಂಚಿಕೊಂಡಿರುವ ಧೋನಿ, ಜನ್ಮದಿನದಂದು ಶುಭಾಶಯ ತಿಳಿಸಿದ ಅಭಿಮಾನಿಗಳು ಮತ್ತು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಧೋನಿ ಪೋಸ್ಟ್​ ಮಾಡಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
Thala's birthday gift 🎥💛#CelebratingThala#WhistlePodu🦁@msdhonipic.twitter.com/ElFnwf6PoS
— Chennai Super Kings (@ChennaiIPL)July 8, 2023

ಭಾರತಕ್ಕೆ 2007ರಲ್ಲಿ ಟಿ20 ಮತ್ತು 2011ರಲ್ಲಿ ಏಕದಿನ ವಿಶ್ವಕಪ್​ ಗೆದ್ದುಕೊಟ್ಟಿರುವ ನಾಯಕರಾಗಿರುವ ಧೋನಿ, 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದು, ಸದ್ಯ ಐಪಿಎಲ್​ನಲ್ಲಿ ಮಾತ್ರ ಆಡುತ್ತಿದ್ದಾರೆ. ಈ ವರ್ಷವೇ ಅವರು ಐಪಿಎಲ್​ನಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಇನ್ನೊಂದು ವರ್ಷ ಐಪಿಎಲ್​ ಆಡುವ ಮೂಲಕ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಲು ಬಯಸಿರುವುದಾಗಿ ಧೋನಿ, ಕಳೆದ ಆವೃತ್ತಿಯ ಪ್ರಶಸ್ತಿ ಗೆಲುವಿನ ಬಳಿಕ ಹೇಳಿದ್ದರು.
ಭಾರತ-ವಿಂಡೀಸ್​ ಕ್ರಿಕೆಟ್​ ಸರಣಿಯನ್ನು ಯಾವ ಆ್ಯಪ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು ಗೊತ್ತೇ?

ಭಾರತ-ವೆಸ್ಟ್​ ಇಂಡೀಸ್​ ಕ್ರಿಕೆಟ್​ ಸರಣಿಗೆ ಕರ್ನಾಟಕದ ಅಗರಬತ್ತಿ ಕಂಪನಿ ಪ್ರಾಯೋಜಕತ್ವ

ವಿಂಬಲ್ಡನ್​ನಲ್ಲಿ ಒಳಉಡುಪಿನ ನಿಯಮ ಸಡಿಲ; ಟೆನಿಸ್ ಆಟಗಾರ್ತಿಯರು ಈಗ ನಿರಾಳ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eleven =
Remember me
