ಮುಂಬೈ:ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಯಾವಾಗಲೂ ತಮ್ಮ ಲುಕ್​​​​​ಗಾಗಿ ಸುದ್ದಿಯಲ್ಲಿರುತ್ತಾರೆ. ಮಾಹಿ ಪ್ರತಿದಿನ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಇದೀಗ ಧೋನಿ ತಮ್ಮ ಹೊಸ ಹೇರ್ ಸ್ಟೈಲ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಹೌದು, ಮಾಹಿ ಕಪ್ಪು ಟೀ ಶರ್ಟ್ ಮತ್ತು ಕನ್ನಡಕದಲ್ಲಿ ಅದ್ಭುತವಾಗಿ ಕಾಣಿಸುತ್ತಾರೆ.
ಧೋನಿಯ ಹೊಸ ಹೇರ್ ಸ್ಟೈಲ್ ವೈರಲ್ಎಂಎಸ್ ಧೋನಿ ಅವರ ಹೊಸ ಹೇರ್ ಸ್ಟೈಲ್‌ನ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಸದ್ಯ ವೈರಲ್ ಆಗಿರುವ ಫೋಟೋಗಳಲ್ಲಿ ಧೋನಿ ಕಪ್ಪು ಟೀ ಶರ್ಟ್ ಮತ್ತು ಕನ್ನಡಕದಲ್ಲಿ ಹೊಸ ಕೇಶವಿನ್ಯಾಸದೊಂದಿಗೆ ಸಖತ್​​​ ಹ್ಯಾಂಡ್​​​​ಸಮ್​​​ ಆಗಿ ಕಾಣಿಸಿಕೊಂಡಿದ್ದಾರೆ. ಧೋನಿ ಮತ್ತೊಮ್ಮೆ ತಮ್ಮ ಕೂದಲನ್ನು ಉದ್ದವಾಗಿ ಬೆಳೆಸಿದ್ದು, ಅವರು ಹಳೆಯ ಹೇರ್​​​ ಸ್ಟೈಲ್​​​​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಲೂ ಕೂಡ ತಮ್ಮ ಉದ್ದನೆಯ ಕೂದಲಿನಿಂದಲೇ ಸುದ್ದಿಯಾಗಿದ್ದರು ಎಂಬುದು ಗಮನಾರ್ಹ. ಫೋಟೋಗಳನ್ನು ನೋಡಿದಾಗ, ಮಹಿ ತನ್ನ ಹಳೆಯ ಹೇರ್ ಸ್ಟೈಲ್‌ಗೆ ಮರಳಲು ಬಯಸುತ್ತಿರುವಂತೆ ತೋರುತ್ತದೆ.
Yesssss!!! it’s our King Mahendra Singh Dhoni@msdhoni👑🏏🔥
Really enjoyed creating this hairstyle with all new texture and colour for Mahi bhai.. Sharing some pics which I clicked before he went to give a shot for an ad film 🎥pic.twitter.com/NJHcJzaao5
— Aalim Hakim (@AalimHakim)October 3, 2023

ಐಪಿಎಲ್ 2023 ರ ನಂತರ ಧೋನಿ ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು . ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಸೀಸನ್‌ನಲ್ಲಿ ಮಹಿ ನೋವಿನಿಂದ ಆಡುತ್ತಿರುವುದು ಕಂಡುಬಂದಿದೆ. ಇತ್ತೀಚೆಗೆ ಧೋನಿ ರಾಂಚಿಯಲ್ಲಿ ಕಾಣಿಸಿಕೊಂಡರು, ಅಲ್ಲಿ ಅವರು ತಮ್ಮ ಐಷಾರಾಮಿ ಕಾರಿನಲ್ಲಿ ತಿರುಗುತ್ತಿದ್ದರು. ಧೋನಿ ಕೂಡ ವಿಂಬಲ್ಡನ್ ಪಂದ್ಯ ವೀಕ್ಷಿಸಲು ಅಮೆರಿಕ ತಲುಪಿದ್ದರು. ಅಮೆರಿಕದಲ್ಲಿ ಅಭಿಮಾನಿಗಳೊಂದಿಗೆ ಧೋನಿ ಇರುವ ಹಲವು ಚಿತ್ರಗಳು ವೈರಲ್ ಆಗಿದ್ದವು.
ಐಪಿಎಲ್ 2024ರಲ್ಲಿ ರಾಕ್ ಮಾಡಲಿದ್ದಾರೆ ಧೋನಿಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಚಾಂಪಿಯನ್ ಮಾಡಿದ ನಂತರ, ಧೋನಿ ಅವರು ಮುಂದಿನ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್‌ನ 17 ನೇ ಸೀಸನ್​​​​​ನಲ್ಲಿ ಆಡುವುದಾಗಿ ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ್ದರು. ಎಲ್ಲ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ 2024 ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಸೀಸನ್​​​​ ನಂತರ ಧೋನಿ ಐಪಿಎಲ್‌ಗೆ ವಿದಾಯ ಹೇಳಬಹುದು ಎಂದು ನಂಬಲಾಗಿದೆ.
ದೇವಭೂಮಿ ಉತ್ತರಾಖಂಡ, ಎನ್​​ಸಿಆರ್​​​​​​​​ನಲ್ಲಿ​​​​ ಪ್ರಬಲ ಭೂಕಂಪನಕ್ಕೆ ನಡುಗಿದ ಕಟ್ಟಡಗಳು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eleven + sixteen =
Remember me
