ಬೆಂಗಳೂರು:ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರೂ ಅವರ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ಪ್ರಸ್ತುತ ಧೋನಿ ಐಪಿಎಲ್ ನಲ್ಲಿ ಮಾತ್ರ ಆಡುತ್ತಿದ್ದಾರೆ . ಇದೀಗ ಧೋನಿ ಐಪಿಎಲ್‌ಗೂ ನಿವೃತ್ತಿ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ. ಆದರೆ ಧೋನಿ ಅಭಿಮಾನಿಗಳು ಅವರು ಎಂದಿಗೂ ನಿವೃತ್ತಿಯಾಗಬಾರದು ಎಂದು ಬಯಸುತ್ತಾರೆ. ಇತ್ತೀಚೆಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ನಂತರ ಚೆನ್ನೈ ಐಪಿಎಲ್ 2024 ರಿಂದ ನಿರ್ಗಮಿಸಿರುವುದು ಗೊತ್ತೇ ಇದೆ.
ಇದನ್ನೂ ಓದಿ:ಲೋಕಸಭೆ ಚುನಾವಣೆ 6ನೇ ಹಂತ: ಮಧ್ಯಾಹ್ನ 3 ಗಂಟೆಯವರೆಗೆ ಶೇ. 49.2 ಮತದಾನ – ಬಂಗಾಳದಲ್ಲಿ ಅಧಿಕ
ಈ ಪಂದ್ಯದ ನಂತರ ಧೋನಿ ಬೆಂಗಳೂರಿನಿಂದ ತವರು ರಾಂಚಿಗೆ ತೆರಳಿದರು. ಆದರೆ ಆ ಪ್ರಯಾಣದಲ್ಲಿ ಧೋನಿ ಸಾಮಾನ್ಯ ಪ್ರಯಾಣಿಕರಂತೆ ವಿಮಾನದ ಎಕಾನಮಿ ಕ್ಲಾಸ್ ನಲ್ಲಿ ಪ್ರಯಾಣಿಸಿದ್ದಾರೆ.
ಧೋನಿ ತನ್ನ ಲಗೇಜನ್ನು ಎತ್ತಿಕೊಂಡು ಸೀಟಿನ ಮೇಲೆ ಕುಳಿತಿದ್ದಾರೆ. ಆಗ ಎಕಾನಮಿ ಕ್ಲಾಸ್ ನಲ್ಲಿದ್ದ ಧೋನಿಯನ್ನು ನೋಡಿದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಅವರ ನಮ್ರತೆಯನ್ನು ಕಂಡು ಶ್ಲಾಘಿಸಿದ್ದಾರೆ.
ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವಿಟ್ಟರ್ ಹ್ಯಾಂಡಲ್ @ChakriDhoni17 (ಧೋನಿ ಇನ್ ಎಕಾನಮಿ ಕ್ಲಾಸ್) ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಈ ವಿಡಿಯೋಗೆ ಲಕ್ಷಗಟ್ಟಲೆ ಲೈಕ್‌ಗಳು ಬಂದಿವೆ. ಧೋನಿಯ ಸರಳತೆ ಅನೇಕರನ್ನು ಆಸ್ಚರ್ಯಚಕಿತರನ್ನಾಗಿಸಿದೆ. “ತುಂಬಾ ಶ್ರೇಷ್ಠ ವ್ಯಕ್ತಿತ್ವ. ಅವರು ಯಾವಾಗಲೂ ಸರಳರು”, “ಅವರು ತುಂಬಾ ವಿಭಿನ್ನ ವ್ಯಕ್ತಿ”, `ಆ ವಿಮಾನದಲ್ಲಿದ್ದವರೆಲ್ಲರೂ ತುಂಬಾ ಅದೃಷ್ಟವಂತರು”, “ಧೋನಿ ಪಕ್ಕದಲ್ಲಿ ಕುಳಿತವರು ತುಂಬಾ ಅದೃಷ್ಟವಂತರು”, “ಅದಕ್ಕಾಗಿಯೇ ಎಲ್ಲರಿಗೂ ಇಷ್ಟ ಧೋನಿ” ಎಂದು ನೆಟಿಜನ್‌ಗಳು ಕಾಮೆಂಟ್ ಮಾಡಿದ್ದಾರೆ.
‘ಮೊದಲು ನಿಮ್ಮ ದೇಶವನ್ನು ಸ್ವಚ್ಛಗೊಳಿಸಿ’: ಪಾಕ್​ ಮಂತ್ರಿಗೆ ಕೇಜ್ರಿವಾಲ್ ಹೀಗೆನ್ನಲು ಕಾರಣವಿದೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 5 =
Remember me
