ನವದೆಹಲಿ:ಟೀಮ್​ ಇಂಡಿಯಾದ ಮಾಜಿ ನಾಯಕ ಎಂ.ಎಸ್​. ಧೋನಿ ಅವರು ತಮ್ಮ ಅಬ್ಬರದ ಬ್ಯಾಟಿಂಗ್​ ಮತ್ತು ನಾಯಕತ್ವದಿಂದ ಮಾತ್ರವಲ್ಲ, ಕ್ಯಾಮೆರಾಗಳ ಮುಂದೆ ಹಾಸ್ಯ ಚಟಾಕಿ ಹಾರಿಸುವುದರಲ್ಲೂ ಎಲ್ಲರ ಗಮನ ಸೆಳೆದಿದ್ದಾರೆ. ತಮಗೆ ಎದುರಾಗುವ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೇ ಅಲ್ಲೊಂದು ಹಾಸ್ಯ ಚಟಾಕಿ ಹಾರಿಸುವುದೇ ಧೋನಿ ಅವರ ವಿಶೇಷತೆ.
ಇದೀಗ ಧೋನಿಯವರು ಸಂಬಂಧ (ರಿಲೇಶನ್​ಶಿಪ್ಸ್​)ಗಳ ಬಗ್ಗೆ ಮಾಡಿರುವ ಇತ್ತೀಚಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ವಿಡಿಯೋದಲ್ಲಿ ಜನರ ಗುಂಪನ್ನು ಉದ್ದೇಶಿಸಿ ಮಾತನಾಡಿರುವ ಧೋನಿ, ಸಂಬಂಧಗಳ ಬಗ್ಗೆ ಕೆಲವು ಮೌಲ್ಯಯುತ ಸಲಹೆಗಳನ್ನು ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ಬ್ಯಾಚುಲರ್​ಗಳನ್ನು ಗುರಿಯಾಗಿಸಿಕೊಂಡು ಧೋನಿ ಮಾತನಾಡಿದ್ದಾರೆ. ಅನೇಕ ಸಂಬಂಧಗಳಲ್ಲಿ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ. ಗರ್ಲ್​ಫ್ರೆಂಡ್​ಗಳನ್ನು ಹೊಂದಿರುವ ಬ್ಯಾಚುಲರ್​ಗಳಿಗೆ ಈ ಉತ್ತರವನ್ನು ಹೇಳುವ ಮೂಲಕ ನಾನು ಸಾಮಾನ್ಯ ತಪ್ಪುಗ್ರಹಿಕೆಯನ್ನು ತೆರವುಗೊಳಿಸಲು ಬಯಸುತ್ತೇನೆ. ಅದೇನೆಂದರ ನಿಮ್ಮ ನಿಮ್ಮ ಗರ್ಲ್​ಫ್ರೆಂಡ್​ ಇತರರಿಗಿಂತ ತುಂಬಾ ವಿಭಿನ್ನ ಎಂದು ನಿಮ್ಮಷ್ಟಕ್ಕೆ ನೀವು ಭಾವಿಸಿಕೊಳ್ಳಬೇಡಿ ಎಂದು ಧೋನಿ ಸಲಹೆ ನೀಡಿದರು.
ಧೋನಿ ಅವರು ಈ ಹೇಳಿಕೆಯನ್ನು ನೀಡುತ್ತಿದ್ದಂತೆ ಅಲ್ಲಿ ನೆರದಿದ್ದ ಜನರು ಜೋರಾಗಿ ನಕ್ಕಿರುವುದು ವೈರಲ್​ ವಿಡಿಯೋದಲ್ಲಿದೆ. ಈ ಹಿಂದೆಯೂ ಧೋನಿ ಅವರು ನಗೆ ಚಟಾಕಿಗಳನ್ನು ಹಾರಿಸಿದ್ದಾರೆ. ಕೂಲ್​ ಕ್ಯಾಪ್ಟನ್​ ಎಂದೇ ಖ್ಯಾತರಾಗಿರುವ ಧೋನಿ ಮಾತನಾಡುವುದೇ ತುಂಬಾ ವಿರಳ. ಒಂದೊಮ್ಮೆ ಮಾತನಾಡಿದರೂ ಅಲ್ಲಿ ಹಾಸ್ಯಮಯ ಮಾತುಗಳೇ ತುಂಬಿರುತ್ತವೆ.
🤣🤣@msdhonipic.twitter.com/D2Sg4WIUXt
— Raghu (@meerkali7781)October 26, 2023

ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ಹೆಗ್ಗಳಿಕೆ ಹೊಂದಿರುವ ಧೋನಿ, ಕ್ರಿಕೆಟ್​ ಲೋಕದಲ್ಲಿ ನಾಯಕತ್ವ ವಿಚಾರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. 2010ರ ಜುಲೈ ತಿಂಗಳಲ್ಲಿ ತಮ್ಮ ಗೆಳತಿ ಸಾಕ್ಷಿ ಅವರನ್ನು ಧೋನಿ ವಿವಾಹವಾದರು. 13 ವರ್ಷಗಳ ವೈವಾಹಿಕ ಜೀವನ ಪೂರ್ಣಗೊಳಿಸಿರುವ ದಂಪತಿಗೆ ಝೀವಾ ಹೆಸರಿನ ಮುದ್ದಾದ ಹೆಣ್ಣು ಮಗಳಿದ್ದಾಳೆ.(ಏಜೆನ್ಸೀಸ್​)
ಗ್ಯಾಂಗ್‌ಸ್ಟರ್ ಯೋಗೇಶ್ ಕಡಿಯನ್​ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿಮಾಡಿದ ಇಂಟರ್‌ಪೋಲ್

ಹುಲಿ ಉಗುರು ಲಾಕೆಟ್​​​ ಪ್ರಕರಣ; ಜೈಲು ಸೇರಿದ್ದ ಬಿಗ್​ ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​​​​ಗೆ ಜಾಮೀನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 3 =
Remember me
