ನವದೆಹಲಿ:ರಾಜಸ್ಥಾನದ ಬಿಕನೇರ್​ನಲ್ಲಿ 18 ತಿಂಗಳ ಮಗುವಿಗೆ ಅಪಾಯಕಾರಿ ಕಪ್ಪು ಶಿಲೀಂದ್ರ (ಬ್ಲ್ಯಾಕ್ ಫಂಗಸ್) ಸೋಂಕು ತಗುಲಿದೆ. ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ ಕಂಡುಬಂದ ಮೊದಲ ಪ್ರಕರಣ ಇದಾಗಿದೆ.
ಕರೊನಾ ಪ್ರಕರಣಗಳ ಜತೆಗೆ ಭಾರತದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಕೋವಿಡ್​ನಿಂದ ಗುಣವಾದವರಲ್ಲಿ ಬ್ಲ್ಯಾಕ್ ಫಂಗಸ್ ಕಂಡುಬರುತ್ತಿದ್ದು, ವೈದ್ಯಲೋಕಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.
ಮ್ಯೂಕೋರ್ಮೈಕೋಸಿಸ್ ಎಂದು ಕರೆಯಲ್ಪಡುವ ಮೌಲ್ಡ್​ಗಳ ಗುಂಪಿನಿಂದ ಬ್ಲ್ಯಾಕ್​ ಫಂಗಸ್​ ಉಂಟಾಗುತ್ತದೆ. ಮೂಗಿನಿಂದ ಹರಡುವ ಈ ಫಂಗಸ್​ ಕಣ್ಣುಗಳು ಸೇರಿದಂತೆ ದೇಹದ ಇತರೆ ಭಾಗಗಳಿಗೂ ಹರಡುತ್ತದೆ.
ಕರೊನಾ, ಮದುಮೇಹ, ಕಿಡ್ನಿ ಸಮಸ್ಯೆ, ಲಿವರ್​ ಅಥವಾ ಹೃದಯ ಸಂಬಂಧಿ ಮತ್ತು ವಯೋಸಹಜ ಆರೋಗ್ಯ ಸಮಸ್ಯೆ ಹಾಗೂ ಸಂಧಿವಾತದಂತಹ ಸ್ವಯಂ-ಪ್ರತಿರಕ್ಷಣಾ ಕಾಯಿಲೆಗಳಿಗೆ ಔಷಧಗಳನ್ನು ಹೊಂದಿರುವ ಮತ್ತು ಇಮ್ಯುನಿಟಿ ಕಡಿಮೆ ಇರುವವರಲ್ಲಿ ಈ ಬ್ಲ್ಯಾಕ್​ ಫಂಗಸ್​ ಕಂಡುಬರುತ್ತದೆ.
ಇಂತಹ ರೋಗಿಗಳಿಗೆ ಪ್ರತಿರಕ್ಷೆಯ ಸ್ಟೀರಾಯ್ಡ್​ಗಳನ್ನು ನೀಡಿದ ಬಳಿಕ ಇಮ್ಯುನಿಟಿ ಮತ್ತಷ್ಟು ದುರ್ಬಲಗೊಳ್ಳುತ್ತದೆ. ಇದು ಶಿಲೀಂಧ್ರವನ್ನು ಹರಡಲು ಮತ್ತು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ. ಫಂಗಸ್​ ಕಣ್ಣಿಗೆ ಹರಡಿದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ.
ಇದೀಗ 18 ತಿಂಗಳ ಮಗುವಿನಲ್ಲಿ ಬ್ಲ್ಯಾಕ್​ ಫಂಗಸ್​ ಕಂಡುಬಂದಿರುವುದು ಆಘಾತದ ಜತೆಗೆ ಆತಂಕವನ್ನು ಉಂಟುಮಾಡಿದೆ. ಮಗುವಿಗೆ ಚಿಕಿತ್ಸೆ ಮುಂದುವರಿದಿದೆ.(ಏಜೆನ್ಸೀಸ್​)
PNB Scam: ದೇಶಬಿಟ್ಟು ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಬಂಧನ

ಹಳ್ಳಿಗಳ ಕಡೆಗೆ ಸಚಿವರ ನಡಿಗೆ: ಬಿಜೆಪಿ ಆಡಳಿತ ರಾಜ್ಯಗಳ ಸಚಿವರಿಗೆ ಸೂಚನೆ, ನಮೋ ಸರ್ಕಾರಕ್ಕೆ ಏಳು ವರ್ಷ

ಹಳ್ಳಿಗಳ ಕಡೆಗೆ ಸಚಿವರ ನಡಿಗೆ: ಬಿಜೆಪಿ ಆಡಳಿತ ರಾಜ್ಯಗಳ ಸಚಿವರಿಗೆ ಸೂಚನೆ, ನಮೋ ಸರ್ಕಾರಕ್ಕೆ ಏಳು ವರ್ಷ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − two =
Remember me
