ಮುಂಬೈ:ಅಂಬಾನಿ ಪುತ್ರ ಅನಂತ್ ಹಾಗೂ ರಾಧಿಕಾ ವಿವಾಹ ನಡೆದಿದೆ. ನಿಶ್ಚಿತಾರ್ಥದ ಸಮಯದಿಂದ ಮದುವೆಯವರೆಗೂ ಸುಮಾರು ಏಳು ತಿಂಗಳಲ್ಲಿ ಅನೇಕ ಕಾರ್ಯಕ್ರಮಗಳು ನಡೆದವು. ಆದರೆ ಸಂಗೀತ ಕಾರ್ಯಕ್ರಮ ಆರಂಭವಾದಾಗಿನಿಂದ ಅತಿಥಿಗಳ ದಂಡೇ ಶುರುವಾಗಿದೆ. ದೇಶ-ವಿದೇಶಗಳ ಅನೇಕ ಗಣ್ಯರು ಆಗಮಿಸಿದ್ದಾರೆ. ಆದರೆ ಅವರನ್ನು ಸ್ವಾಗತಿಸಲು ಅಂಬಾನಿ ಕುಟುಂಬ ವ್ಯವಸ್ಥೆ ಮಾಡಿತ್ತು.
ಅನಂತ್-ರಾಧಿಕಾ ಮದುವೆ ಸಮಾರಂಭಕ್ಕೆ ಅತಿಥಿಗಳನ್ನು ಸೆಳೆಯಲು ಮುಕೇಶ್ ಅಂಬಾನಿ ಭರ್ಜರಿ ಪ್ಲಾನ್ ಮಾಡಿರುವುದು ಗೊತ್ತೇ ಇದೆ. ಅತಿಥಿಗಳನ್ನು ಕರೆತರಲು ಮೂರು ಫಾಲ್ಕನ್-2000 ಜೆಟ್‌ಗಳನ್ನು ಕಾಯ್ದಿರಿಸಲಾಗಿತ್ತು. ಅಲ್ಲದೆ, ಅತಿಥಿಗಳನ್ನು ಮುಂಬೈಗೆ ಸಾಗಿಸಲು 100 ಖಾಸಗಿ ಜೆಟ್‌ಗಳನ್ನು ಸಹ ಕಾಯ್ದಿರಿಸಲಾಗಿತ್ತು.
ಪ್ರಯಾಣದ ಅನುಕೂಲಕ್ಕಾಗಿ 100 ಕ್ಕೂ ಹೆಚ್ಚು ಖಾಸಗಿ ವಿಮಾನಗಳನ್ನು ಕಾಯ್ದಿರಿಸಲಾಗಿತ್ತು. ಈ ವಿಮಾನವನ್ನು ಬುಕ್ ಮಾಡಲು ಅಂಬಾನಿ ಕುಟುಂಬ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದೆ.  ಈ ಆಚರಣೆಗಳಿಗಾಗಿ 320 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಖರ್ಚು ಮಾಡುತ್ತಿದೆ ಎಂದು ಹೇಳಿದೆ.ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ವಿವಾಹ ಸಮಾರಂಭದ ಕಾರಣ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ಜುಲೈ 12 ರಿಂದ ಜುಲೈ 15 ರವರೆಗೆ, ಸಮಾರಂಭ ನಡೆಯುವ ಸ್ಥಳದ ಸಮೀಪವಿರುವ ರಸ್ತೆಗಳು ಮದುವೆಗೆ ಮಾತ್ರ ಸಂಚಾರಕ್ಕೆ ಮುಕ್ತವಾಗಿವೆ. ಮಧ್ಯಾಹ್ನ 1 ರಿಂದ ಮಧ್ಯರಾತ್ರಿಯವರೆಗೆ ಸಾಮಾನ್ಯ ಸಂಚಾರಕ್ಕಾಗಿ ರಸ್ತೆಯನ್ನು ಮುಚ್ಚಲಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 1 =
Remember me
