ನವದೆಹಲಿ:ಭಾರತೀಯ ಉದ್ಯಮಿ ಮುಖೇಶ್ ಅಂಬಾನಿ ಸಂಪತ್ತನ್ನು ಅನೇಕ ಮಾಧ್ಯಮಗಳು ಅಂದಾಜು ಮಾಡಿವೆ ಆದರೆ ಅಂಬಾನಿ ಚಾಲಕನ ಸಂಬಳದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಈ ಮಾಹಿತಿಗಾಗಿ ಅನೇಕ ಜನರು ಕುತೂಹಲದಿಂದ ಕಾಯುತ್ತಿದ್ದರು.
ಇದೀಗ ವರದಿಗಳು ಹೊರಬಂದಿದ್ದು 2017ರಲ್ಲಿ ಮುಖೇಶ್ ಅಂಬಾನಿ ಕಾರು ಚಾಲಕನ ಸಂಬಳ ತಿಂಗಳಿಗೆ ಸುಮಾರು 2 ಲಕ್ಷ ರೂ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊವೊಂದು ಈ ವಿಚಾರವನ್ನು ಬಹಿರಂಗ ಮಾಡಿದೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.
ಅಂಬಾನಿ ಚಾಲಕನ ವಾರ್ಷಿಕ ವೇತಮ ಬರೋಬ್ಬರಿ 24 ಲಕ್ಷ ರೂ.ಗಳು! ಹೌದು… ಇದು ಈ ದಿನಗಳಲ್ಲಿ ಅನೇಕ ವೃತ್ತಿಪರರಿಗಿಂತ ಹೆಚ್ಚಾಗಿದೆ. ಆದರೆ 2023ರಲ್ಲಿ ಅವರ ಚಾಲಕ ಎಷ್ಟು ಸಂಪಾದಿಸುತ್ತಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅಂಬಾನಿ ಕುಟುಂಬದ ಚಾಲಕರನ್ನು ಖಾಸಗಿ ಗುತ್ತಿಗೆ ಸಂಸ್ಥೆಯ ಮೂಲಕ ನೇಮಿಸಿಕೊಳ್ಳಲಾಗುತ್ತದೆ. ಕೋಟ್ಯಾಧಿಪತಿ ಕುಟುಂಬದ ಐಷಾರಾಮಿ ಜೀವನಶೈಲಿಯನ್ನು ಉಳಿಸಿಕೊಳ್ಳಲು ಚಾಲನಾ ಸಿಬ್ಬಂದಿ ಕಠಿಣ ತರಬೇತಿಗೆ ಒಳಗಾಗುತ್ತಾರೆ ಎಂದು ವರದಿಯಾಗಿದೆ. ಅಂಬಾನಿಯ ಬುಲೆಟ್ ಪ್ರೂಫ್ ವಾಹನವನ್ನು ನಿರ್ವಹಿಸುವ ಈ ಚಾಲಕರು ವಾಣಿಜ್ಯ ಮತ್ತು ಐಷಾರಾಮಿ ವಾಹನಗಳನ್ನು ನಿರ್ವಹಿಸುವಲ್ಲಿ ಪರಿಣತರಾಗಿದ್ದಾರೆ. ಅದಲ್ಲದೇ ಕಠಿಣ ರಸ್ತೆಗಳು ಮತ್ತು ಅಹಿತಕರ ಸಂದರ್ಭಗಳಲ್ಲಿ ವಾಹನ ಚಲಾವಣೆ ಮಾಡುವಲ್ಲಿ ನಿಪುಣರಾಗಿದ್ದಾರೆ. ಅಡುಗೆಯವರು, ಕಾವಲುಗಾರರು ಮತ್ತು ಹೌಸ್ ಕೀಪಿಂಗ್ ಸಿಬ್ಬಂದಿಯವರೆಗಿನ ಉದ್ಯೋಗಿಗಳಿಗೆ ಭತ್ಯೆ ಮತ್ತು ವಿಮೆಯನ್ನು ನೀಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − six =
Remember me
