ಮುಂಬೈ:ಉದ್ಯಮಿ ಮುಖೇಶ್ ಅಂಬಾನಿ ರಿಲಯನ್ಸ್‌ ಸಂಸ್ಥೆಯ ತಮ್ಮ ಉತ್ತರಾಧಿಕಾರವನ್ನು ಮಕ್ಕಳಿಗೆ ಹಸ್ತಾಂತರ ಮಾಡಿದ್ದಾರೆ. ಹಿರಿಯ ಪುತ್ರ ಆಕಾಶ್ ಮತ್ತು ಪುತ್ರಿ ಇಶಾ ಅವರಿಗೆ ದೂರಸಂಪರ್ಕ ಮತ್ತು ರಿಟೇಲ್​ ನಾಯಕತ್ವ ಮತ್ತು ಕಿರಿಯ ಪುತ್ರ ಅನಂತ್‌ಗೆ ನೂತನ ಇಂಧನ ಘಟಕದ ನಾಯಕತ್ವವನ್ನು ನೀಡಿರುವುದಾಗಿ ಘೋಷಿಸಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 45ನೇ ವಾರ್ಷಿಕ ಷೇರುದಾರರ ಸಭೆಯಲ್ಲಿ ಅಂಬಾನಿ ತಮ್ಮ ಮಗಳು ಇಶಾ ಅವರನ್ನು ರಿಟೇಲ್​ ಘಟಕದ ಅಧ್ಯಕ್ಷೆಯಾಗಿ ನೇಮಕ ಮಾಡಿದ್ದಾರೆ.ಈ ಹಿಂದೆ ಅಂಬಾನಿ ಅವಳಿ ಪುತ್ರರಲ್ಲಿ ಒಬ್ಬರಾದ ಆಕಾಶ್ ಅವರನ್ನು ಮಾತ್ರ ಕಂಪನಿಯ ಕಾರ್ಯಕಾರಿ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ಈಗ ತಮ್ಮ ಉಳಿದಿಬ್ಬರು ಮಕ್ಕಳಿಗೆ ಸಂಸ್ಥೆಯ ಪ್ರಮುಖ ಜವಾಬ್ದಾರಿಗಳನ್ನು ನೀಡಿಲಾಗಿದೆ ಎಂದು ಮುಖೇಶ್ ತಿಳಿಸಿದ್ದಾರೆ.
ಜೂನ್‌ನಲ್ಲಿ, 30 ವರ್ಷದ ಆಕಾಶ್ ಅವರನ್ನು ಜಿಯೋ ಪ್ಲಾಟ್‌ಫಾರ್ಮ್‌ಗಳ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಜಿಯೋ ಇನ್ಫೋಕಾಮ್ ಟೆಲಿಕಾಂ ಪರವಾನಗಿಗಳನ್ನು ಹೊಂದಿರುವ ಸಂಸ್ಥೆಯಾಗಿದ್ದು, ಮುಖೇಶ್ ಅಂಬಾನಿ ಜಿಯೋ ಪ್ಲಾಟ್‌ಫಾರ್ಮ್‌ಗಳ ಅಧ್ಯಕ್ಷರಾಗಿ ಈಗಲೂ ಮುಂದುವರೆದಿದ್ದಾರೆ. ಜಾಗತಿಕ ತಂತ್ರಜ್ಞಾನ ದೈತ್ಯರಾದ ಗೂಗಲ್ ಮತ್ತು ಫೇಸ್‌ಬುಕ್ ಮಾಲೀಕ ಮೆಟಾ ಇದಕ್ಕೆ ಹೂಡಿಕೆ ಮಾಡಿದ್ದಾರೆ.
ತಿಂಡಿ ವಿಷಯಕ್ಕೆ ಜಗಳ: ಹೆತ್ತ ತಾಯಿ, ಪತ್ನಿ ಹಾಗೂ ಮೂವರು ಮಕ್ಕಳ ಹತ್ಯೆಗೈದ ಪಾಪಿ

ರಾಜ್ಯದಲ್ಲಿ 4 ದಿನ ಸುರಿಯಲಿದೆ ಧಾರಾಕಾರ ಮಳೆ: ನಾಳೆ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
