ನವದೆಹಲಿ:ಲಾಕ್​ಡೌನ್​ ದೇಶದ ಆರ್ಥಿಕತೆಗೆ ಮತ್ತು ಬಡ ಜನರಿಗೆ ತಂದಿಟ್ಟ ಸಂಕಷ್ಟದ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ಆದರೆ ಈ ಲಾಕ್​ಡೌನ್​ ಸಿರಿವಂತರ ಪಾಲಿಗೆ ಉತ್ತಮ ಕಾಲವಾಗಿತ್ತು ಎನ್ನುವುದಕ್ಕೆ ಅವರ ಆದಾಯದ ಅಂಕಿ ಅಂಶವೇ ಸಾಕ್ಷಿ. ಭಾರತದ ನಂಬರ್​ 1 ಶ್ರೀಮಂತ ಎನಿಸಿಕೊಂಡಿರುವ ಮುಕೇಶ್​ ಅಂಬಾನಿ ಈ ಲಾಕ್​ಡೌನ್​ ಸಮಯದಲ್ಲಿ ಗಂಟೆಗೆ ಎಷ್ಟು ಆದಾಯ ಗಳಿಸಿದ್ದಾರೆ ಎನ್ನುವುದನ್ನು ತಿಳಿದರೆ ನೀವು ಶಾಕ್​ ಆಗುತ್ತೀರ.
ಇದನ್ನೂ ಓದಿ:ಹೆತ್ತಮಕ್ಕಳನ್ನೇ ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆಗೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ
ಮುಕೇಶ್​ ಅಂಬಾನಿ ಲಾಕ್​ಡೌನ್​ ಸಮಯದಲ್ಲಿ ಗಂಟೆಗೆ 90 ಕೋಟಿ ರೂಪಾಯಿ ಗಳಿಸಿದ್ದಾರೆ. ಅಂದರೆ ನಿಮಿಷಕ್ಕೆ 1.5 ಕೋಟಿ ಲೆಕ್ಕ. ಲಾಕ್​ಡೌನ್​ನಲ್ಲಿ ದೇಶದಲ್ಲಿ ಅತಿ ಹೆಚ್ಚು ಗಳಿಕೆ ಪಡೆದವರ ಸಾಲಿನಲ್ಲಿ ಇವರು ಮೊದಲು ನಿಂತಿದ್ದಾರೆ. ಅಂದ ಹಾಗೆ ಅಂಬಾನಿ ಮಾತ್ರವಲ್ಲ, ದೇಶದ ಶ್ರೀಮಂತರ ಪಟ್ಟಿಯಲ್ಲಿ ಮೊದಲ 100 ಸ್ಥಾನದಲ್ಲಿರುವ ಎಲ್ಲ ಶ್ರೀಮಂತರೂ ಲಾಕ್​ಡೌನ್​ ಸಮಯದಲ್ಲಿ ಭಾರಿ ಆದಾಯ ಗಳಿಸಿದ್ದಾರೆ ಎಂದು ಆಕ್ಸ್​ಫ್ಯಾಮ್​ ಸಂಸ್ಥೆಯ ವರದಿ ತಿಳಿಸಿದೆ. ಹಾಗೆಯೇ ಕೋಟ್ಯಧಿಪತಿಗಳು ಹೆಚ್ಚಿಸಿಕೊಂಡ ಸಂಪತ್ತಲ್ಲಿ ಭಾರತ ವಿಶ್ವದಲ್ಲೇ ಆರನೇ ಸ್ಥಾನದಲ್ಲಿದೆ.
ಈ ನೂರು ಶ್ರೀಮಂತರ ಸಂಪತ್ತು ಲಾಕ್​ಡೌನ್​ ಸಮಯದಲ್ಲಿ ಶೇ. 35 ಏರಿಕೆ ಕಂಡಿದೆ. ವಿತ್ತೀಯ ದೃಷ್ಟಿಯಿಂದ, ಅವರ ಸಂಪತ್ತು 12,97,822 ಕೋಟಿ ರೂ. ಏರಿಕೆಯಾಗಿದೆ. ಈ ಮೊತ್ತವು 13.8 ಕೋಟಿ ಬಡ ಭಾರತೀಯರಿಗೆ 94,045 ರೂ.ಗಳ ಚೆಕ್ ನೀಡಲು ಸಾಕಾಗುತ್ತದೆ. ಈ ನೂರರಲ್ಲಿ 11 ಅಗ್ರ ಶ್ರೀಮಂತರ ಆದಾಯವನ್ನು ಬಳಸಿಕೊಂಡರೆ ಮುಂದಿನ 10 ವರ್ಷಗಳವರೆಗೆ ನರೇಗಾ ಕೆಲಸ ಮಾಡುವವರಿಗೆ ಸಂಬಳ ಕೊಡಲು ಸಾಕಾಗುತ್ತದೆ. 11 ಅಗ್ರ ಕೋಟ್ಯಧಿಪತಿಗಳು ಹೆಚ್ಚಿಸಿಕೊಂಡ ಸಂಪತ್ತಿನ ಮೇಲೆ ಕೇವಲ ಶೇ. 1 ತೆರಿಗೆ ವಿಧಿಸಿದರೆ, ಈಗಿನ ಜನೌಷಧ ಕೇಂದ್ರಗಳನ್ನು 140 ಪಟ್ಟು ಹೆಚ್ಚಿಸಬಹುದಾಗಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:100, 10, 5 ರೂಪಾಯಿಯ ಹಳೆ ನೋಟುಗಳು ಚಲಾವಣೆ ಆಗಲ್ವಾ? ಆರ್​ಬಿಐ ಹೇಳಿದ್ದೇನು?
ಆಕ್ಸ್​ಫ್ಯಾಮ್​ನ ವರದಿಯ ಪ್ರಕಾರ, ಕರೊನಾ ವೈರಸ್​ನಿಂದಾಗಿ ನೂರು ವರ್ಷಗಳಲ್ಲಿ ವಿಶ್ವದ ಅತ್ಯಂತ ಕೆಟ್ಟ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು 2020ರಲ್ಲಿ ಕಂಡುಬಂದಿದೆ. ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಬಿಕ್ಕಟ್ಟನ್ನು 1930 ರ ಮಹಾ ಆರ್ಥಿಕ ಕುಸಿತದೊಂದಿಗೆ ಹೋಲಿಸಬಹುದಾಗಿದೆ.
2020ರ ಏಪ್ರಿಲ್​ನಲ್ಲಿ ಪ್ರತಿ ಗಂಟೆಗೆ 1,70,000 ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದಲ್ಲಿ ಸುಮಾರು 12.2 ಕೋಟಿ ಜನರು 2020ರಲ್ಲಿ ನಿರುದ್ಯೋಗಿಗಳಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. (ಏಜೆನ್ಸೀಸ್​)
ಕಬ್ಬಿನ ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!

ಮನೆಯಲ್ಲಿನ ಲೈವ್​ ಸೆಕ್ಸ್​ನ್ನು ಸಿಸಿಟಿವಿಯಿಂದಲೇ ಕದ್ದು ನೋಡುತ್ತಿದ್ದ ಖತರ್ನಾಕ್​​ ಟೆಕ್ನಿಷಿಯನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 18 =
Remember me
