ನವದೆಹಲಿ:ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಇದೀಗ ವಿಶ್ವದ ]ೕಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಇತ್ತೀಚೆಗಷ್ಟೇ ಐದನೇ ಸ್ಥಾನಕ್ಕೇರಿದ್ದ ಅವರು, ಯುರೋಪ್​ನ ]ೕಮಂತ ಬರ್ನಾರ್ಡ್ ಅರ್ನಾಲ್ಟ್​ರನ್ನು ಹಿಂದಿಕ್ಕಿದ್ದಾರೆ.
ವಿಶ್ವದ ಬಹುತೇಕ ದೇಶಗಳಲ್ಲಿ ಲಾಕ್​ಡೌನ್ ಹೇರಲಾಗಿದ್ದು, ಅನೇಕರ ಶ್ರೀಮಂತರ ಆಸ್ತಿ ಮೌಲ್ಯ ಇಳಿಕೆಯಾಗಿದೆ. ಆದರೆ ಮುಕೇಶ್ ಅಂಬಾನಿಯ ಆಸ್ತಿ ಹೆಚ್ಚುತ್ತಲೇ ಸಾಗಿದೆ. ಜನವವರಿ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ಅವರು 10 ಸ್ಥಾನಗಳ ಬಡ್ತಿ ಪಡೆದುಕೊಂಡಿದ್ದಾರೆ ಎಂದು ಬ್ಲೂಮ್​ಗ್ ಸಂಸ್ಥೆ ತಿಳಿಸಿದೆ. ಈ ಅವಧಿಯಲ್ಲಿ ಅಂಬಾನಿಯವರ ಆಸ್ತಿ ಮೌಲ್ಯ 22 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಪ್ರಸ್ತುತ ಅವರ ಆಸ್ತಿ ಮೌಲ್ಯ 80.6 ಬಿಲಿಯನ್ ಡಾಲರ್. ಜನವರಿ ತಿಂಗಳ ನಂತರ ರಿಲಯನ್ಸ್ ಸಂಸ್ಥೆಯ ಷೇರುಗಳಲ್ಲಿ ಶೇ. 145 ಏರಿಕೆ ಕಂಡುಬಂದಿದೆ. ಗೂಗಲ್, ಫೇಸ್​ಬುಕ್​ನಂತಹ ಪ್ರಸಿದ್ಧ ಸಂಸ್ಥೆಗಳು ರಿಲಯನ್ಸ್ ಜಿಯೋನಲ್ಲಿ ಹೂಡಿಕೆ ಮಾಡಿವೆ. ಆ ಕಾರಣ ಅಂಬಾನಿ ಆಸ್ತಿ ಮೌಲ್ಯವೂ ಹೆಚ್ಚಾಗಿದೆ.
ವಿಶ್ವದ ಟಾಪ್ ಆರು ಶ್ರೀಮಂತರಿವರು
ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಜೆಫ್ ಬೆಜೋಸ್ ಅವರ ಆಸ್ತಿ ಮೌಲ್ಯ 187 ಬಿಲಿಯನ್ ಡಾಲರ್​ನಷ್ಟಿದೆ. ಎರಡನೇ ಸ್ಥಾನದಲ್ಲಿ ಬಿಲ್ ಗೇಟ್ಸ್ (121 ಬಿಲಿಯನ್ ಡಾಲರ್) ಮತ್ತು ಮೂರನೇ ಸ್ಥಾನದಲ್ಲಿ ಮಾರ್ಕ್ ಜುಕರ್​ಬರ್ಗ್ (102 ಬಿಲಿಯನ್ ಡಾಲರ್) ಇದ್ದಾರೆ. ಅಂಬಾನಿಯವರ ನಂತರದ ಸ್ಥಾನದಲ್ಲಿ ಬರ್ನಾರ್ಡ್ ಅರ್ನಾಲ್ಟ್ (80.2 ಬಿಲಿಯನ್ ಡಾಲರ್), ವಾರೆನ್ ಬುಫೆಟ್ (79.2 ಬಿಲಿಯನ್ ಡಾಲರ್) ಇದ್ದಾರೆ. ಟಾಪ್ ಹತ್ತು ಸ್ಥಾನದೊಳಗೆ ಕಾಣಿಸಿಕೊಂಡಿರುವ ಏಷ್ಯಾದ ಏಕೈಕ ಶ್ರೀಮಂತ ಎನ್ನುವ ಹೆಗ್ಗಳಿಕೆಗೆ ಮುಕೇಶ್ ಪಾತ್ರರಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 17 =
Remember me
