ಬೆಂಗಳೂರು:ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಕೈಗಾರಿಕೋದ್ಯಮಿ ವೀರೇನ್ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚಂಟ್‌ ವಿವಾಹವು ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸೆಲೆಬ್ರೆಟಿಗಳಿಗೆ ಅಂಬಾನಿ ಫ್ಯಾಮಿಲಿಯಿಂದ ಭರ್ಜರಿ ಗಿಫ್ಟ್​​ ಸಿಕ್ಕಿದೆ.
ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಟಾಲಿವುಡ್​​, ಬಾಲಿವುಡ್​​ ಸೆಲೆಬ್ರೆಟಿಗಳ ಜತೆ ಸ್ಯಾಂಡಲ್​ವುಡ್​​ ನಟ ಯಶ್‌- ಪತ್ನಿ ರಾಧಿಕಾ ಪಂಡಿತ್‌ ಸಹ ಭಾಗಿ ಆಗಿದ್ದಾರೆ. ಈ ಕುರಿತಾದ ಕೆಲವು ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.
#YashBossNewLook#Yash19#Toxic#ToxicTheMovie#YashBOSSpic.twitter.com/WbpgKIcyZ6
— AKSHAY S (@AKSHAY_S1)July 13, 2024

ಮುಕೇಶ್ ಅಂಬಾನಿ ತಮ್ಮ ಮಗನ ಮದುವೆಗೆ ಬಂದ ಅತಿಥಿಗಳಿಗೆ ರಿಟರ್ನ್ ಗಿಫ್ಟ್ ನೀಡಿದ್ದಾರೆ. ನಟ ಯಶ್ ಸೇರಿದಂತೆ ಹಲವರಿಗೆ 2 ಕೋಟಿ ರೂ. ಮೌಲ್ಯದ ‘ಅಡೆಮಾರ್ಸ್ ಪಿಗುಯೆಟ್ ರಾಯಲ್ ಓಕ್ ಪರ್ಪೆಚುವಲ್ ಕ್ಯಾಲೆಂಡರ್’ ವಾಚ್‌ಗಳು ಉಡುಗೊರೆಯಾಗಿ ಸಿಕ್ಕಿದೆ ಎನ್ನಲಾಗುತ್ತಿದೆ.
🔥@TheNameIsYashgraced#AnantRadhikaWeddingtoday🔥#YashBOSS#YashBOSSNewLook#ToxicTheMoviepic.twitter.com/ClrWV44vnphttps://t.co/ST80lJE6ov
— Kiran Patil (@KIRANPATIL8055N)July 14, 2024

‘ಅಡೆಮಾರ್ಸ್ ಪಿಗುಯೆಟ್ ರಾಯಲ್ ಓಕ್ ಪರ್ಪೆಚುವಲ್ ಕ್ಯಾಲೆಂಡರ್’ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿದರು, ಇದು ಬ್ರಾಂಡ್ ಮತ್ತು ಐಷಾರಾಮಿ ವಾಚ್‌ಗಳಿಗೆ ಹೆಸರಾಗಿದೆ. ಹಾಗೆ ನೋಡಿದರೆ ಮಾರುಕಟ್ಟೆಯಲ್ಲಿ ಒಂದೊಂದು ವಾಚ್ ಬೆಲೆ ರೂ.2 ಕೋಟಿಗೂ ಅಧಿಕ. ಶಾರುಖ್ ಖಾನ್ ಮತ್ತು ರಣವೀರ್ ಸಿಂಗ್ ಅವರ ಫೋಟೋಗಳು ಮತ್ತು ವೀಡಿಯೊಗಳು ಈಗ ವೈರಲ್ ಆಗುತ್ತಿವೆ.
ಬಾಲಿವುಡ್ ನಟರಾದ ಶಾರುಖ್ ಖಾನ್, ರಣ್‌ವೀರ್ ಸಿಂಗ್ ಸೇರಿದಂತೆ ಹಲವರು ಇದೇ ರೀತಿ ವಾಚ್‌ಗಳನ್ನು ಧರಿಸಿ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ನಟ ಯಶ್ ಕೈಯಲ್ಲೂ ಇದೇ ವಾಚ್ ಇರುವುದನ್ನು ಫೋಟೊಗಳಲ್ಲಿ ನೋಡಬಹುದು.
Yash in Anant Ambani Radhika marriage#Yash#YashBossNewLook#Yash19pic.twitter.com/KyfH3kESJZ
— 𝐆𝐎𝐖𝐓𝐇𝐀𝐌 (@gowthamn070832)July 14, 2024

ಶನಿವಾರ (ಜುಲೈ 13) ಆರತಕ್ಷತೆಯೂ ಅದ್ಧೂರಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಹಾಲಿವುಡ್, ಬಾಲಿವುಡ್, ಟಾಲಿವುಡ್, ಟೀಂ ಇಂಡಿಯಾ ಕ್ರಿಕೆಟಿಗರು, ರಾಜಕಾರಣಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಅನಂತ್ ಅಂಬಾನಿ ಅವರ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ಈ ಮದುವೆ ಸಮಾರಂಭಕ್ಕೆ ಸಾವಿರಾರು ಕೋಟಿ ಖರ್ಚು ಮಾಡಲಾಗಿದೆಯಂತೆ. ಈ ಹಿನ್ನಲೆಯಲ್ಲಿ ಮದುವೆಗೆ ಬಂದ ಅತಿಥಿಗಳಿಗೂ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ ಅನಂತ್ ಅಂಬಾನಿಗೆ ಬಾಲಿವುಡ್ ಚಿತ್ರರಂಗದಲ್ಲಿ ಹಲವು ಸ್ನೇಹಿತರಿದ್ದಾರೆ.
ಅನಂತ್ ಅಂಬಾನಿ ಮದುವೆ: ಸ್ಟಾರ್ ಹೀರೋಗಳಿಗೆ ಉಡುಗೊರೆಯಾಗಿ ಕೋಟ್ಯಂತರ ರೂ. ವಾಚ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
