ಮುಂಬೈ:ಇಶಾ ಅಂಬಾನಿ ನೇತೃತ್ವದ ಟಿರಾ ಮೂಲಕ ಸೌಂದರ್ಯ ಹಾಗೂ ತ್ವಚೆಯ ಕಾಳಜಿಗೆ ಸಂಬಂಧಿಸಿದ ಉದ್ಯಮಕ್ಕೆ ಈಗಾಗಲೇ ಪ್ರವೇಶಿಸಿದೆ. ಈಗ ಒಳ ಉಡುಪುಗಳ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧಗೊಂಡಿದ್ದು, ಬ್ಲಶ್ ಲೇಸ್ ಎಂಬ ಹೊಸ ಬ್ರ್ಯಾಂಡ್ ಅನ್ನು ಪರಿಚಯಿಸುತ್ತಿದೆ.
ಇದನ್ನೂ ಓದಿ:ನಿಮ್ಮಿಷ್ಟದ ಪಿಜ್ಜಾ ಇನ್ಮುಂದೆ 49 ರೂ.ಗೆ ಸಿಗಲಿದೆ…
ರಿಲಯನ್ಸ್ ರಿಟೇಲ್ ಬ್ಲಶ್ ಲೇಸ್ ಎಂಬ ನೂತನ ಬ್ರ್ಯಾಂಡ್ ಮೂಲಕ ಒಳ ಉಡುಪುಗಳ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಇದರ ಉತ್ಪನ್ನಗಳು ಪ್ರೀಮಿಯಂ ಗುಣಮಟ್ಟದ ವಿನ್ಯಾಸಗಳು ಹಾಗೂ ಅರ್ಹ ಬೆಲೆಗಳನ್ನು ಹೊಂದಿರಲಿವೆ. ಇನ್ನು ಕೆಲವು ಉತ್ಪನ್ನಗಳನ್ನು 85ರೂ.ಗೆ ಮಾರಾಟ ಮಾಡುವ ಮೂಲಕ ಈಗಾಗಲೇ ಒಳ ಉಡುಪು ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಕ್ಲೊವಿಯಾ, ಝಿವಾಮಿ, ಅಮಂಟೆ ಹಾಗೂ ನೈಕಾ ಫ್ಯಾಷನ್ ಬ್ರ್ಯಾಂಡ್ ಗಳಿಗೆ ಪೈಪೋಟಿ ನೀಡಲಿದೆ.
ಇದನ್ನೂ ಓದಿ:ಮಳೆಗಾಲದಲ್ಲಿ ಒದ್ದೆಯಾದ ಶೂ, ಚಪ್ಪಲಿ ಧರಿಸುವುದು ಸೋಂಕಿಗೆ ಕಾರಣವಾಗಬಹುದು; ಈ 3 ವಿಷಯಗಳ ಬಗ್ಗೆ ಕಾಳಜಿ ವಹಿಸಿಇಶಾ ಅಂಬಾನಿ ನೇತೃತ್ವದಲ್ಲಿ ಬ್ಲಶ್ ಲೇಸ್ ಬ್ರ್ಯಾಂಡ್ ದೇಶದ ಕೆಲವು ನಗರಗಳಲ್ಲಿ ಬಿಡುಗಡೆಗೊಳ್ಳಲಿದೆ. ಇನ್ನು ದೇಶಾದ್ಯಂತ ಈ ಬ್ರ್ಯಾಂಡ್ ನ ನೂರಾರು ಮಳಿಗೆಗಳನ್ನು ತೆರೆಯುವ ಗುರಿಯನ್ನು ಕೂಡ ರಿಲಯನ್ಸ್ ರಿಟೇಲ್ ಹೊಂದಿದೆ.
ಇದನ್ನೂ ಓದಿ:ಮಳೆಗಾಲದಲ್ಲಿ ವಿದ್ಯುತ್ ಬಗ್ಗೆ ಇರಲಿ ಎಚ್ಚರಿಕೆ; ಅವಘಡಗಳಿಂದ ರಕ್ಷಿಸಿಕೊಳ್ಳುವುದು ಹೇಗೆ?
ಲ್ಯಾಕ್ಮಿ, ಲೋರೆಲ್, ಮಾರ್ಕ್ಸ್ ಹಾಗೂ ಸ್ಪೆನ್ಸರ್ಸ್, ಕ್ಲೊವಿಯಾ, ಅಮಂಟೆ ಹಾಗೂ ಇತರ ಕಾಸ್ಮೆಟಿಕ್ಸ್ ಹಾಗೂ ಒಳ ಉಡುಪುಗಳ ಬ್ರ್ಯಾಂಡ್ ಗಳ ಜತೆಗೆ ಬ್ಲಶ್ ಲೇಸ್ ದೇಶಾದ್ಯಂತ ಒಪ್ಪಂದ ಮಾಡಿಕೊಳ್ಳಲಿದೆ. ಆ ಮೂಲಕ ಉತ್ಪನ್ನಗಳ ಮೇಲೆ ಹೆಚ್ಚಿನ ಡಿಸ್ಕೌಂಟ್ಸ್ ನೀಡಲಿದೆ. ಹಾಗೆಯೇ ಕೆಲವು ಬ್ರ್ಯಾಂಡ್ ಗಳನ್ನು ಅತೀ ಕಡಿಮೆ ಅಂದರೆ 85ರೂ.ಗೆ ಮಾರಾಟ ಮಾಡಲಿದೆ.
ಕನಸುಗಳ ನಿಯಂತ್ರಣಕ್ಕೆ ತಲೆಯೊಳಗೆ ಚಿಪ್‌; ಯೂಟ್ಯೂಬ್‌ ವಿಡಿಯೋ ನೋಡಿ ಸ್ವಯಂ ಆಪರೇಷನ್‌ ಮಾಡ್ಕೊಂಡ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
