ನವದೆಹಲಿ:ಮುಖೇಶ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಜಿಯೋ ಕಡಿಮೆ ಬೆಲೆಯ 4 ಜಿ ಫೋನೊಂದನ್ನು ಅಮೆಜಾನ್​ನಲ್ಲಿ ಬಿಡುಗಡೆ ಮಾಡಿದೆ. ಈ ಫೋನ್​ ಅನ್ನು ಜಿಯೋ ಭಾರತ್ ಜೆ1 ಎಂದು ಹೆಸರಿಸಲಾಗಿದೆ.
ಜಿಯೋ ಭಾರತ್ ಜೆ1  ಫೋನ್​ 2.8 ಇಂಚಿನ ಸ್ಕ್ರೀನ್ ಹೊಂದಿದ್ದು, ಈ ಫೋನ್​ನಲ್ಲಿ ಎಚ್.ಡಿ ಕಾಲಿಂಗ್, ಜಿಯೋ ಮನಿ ಆ್ಯಪ್ ಮೂಲಕ ಯುಪಿಐ ಹಣ ವರ್ಗಾವಣೆ ಮತ್ತು ಜಿಯೋ ಸಿನೆಮಾ ಒಟಿಟಿ ಫ್ಲಾಟ್​ಪಾರ್ಮ್​ಫೀಚರ್​ಗಳನ್ನು ಬಳಸಬಹುದಾಗಿದೆ.
ಜಿಯೋ ಭಾರತ್ ಜೆ1 ಫೋನ್​ನ ಬೆಲೆ ಪ್ರೀ ಪೇಯ್ಡ್ ರಿಚಾರ್ಜ್​ಗಿಂತ ಕಡಿಮೆ ಇದೆ. ರೂ.1799 ಮುಖಬೆಲೆ ಹೊಂದಿರುವ ಈ ಫೋನ್ ಸದ್ಯ ಅಮೆಜಾನ್​ನಲ್ಲಿ ಮಾತ್ರ ಲಭ್ಯವಿದ್ದು ರಿಲಯನ್ಸ್ ವೆಬ್ಸೈಟ್​ನಲ್ಲಿ ಬಿಡುಗಡೆಯಾಗಿಲ್ಲ.
4 ಜಿ ಫೋನ್ ಆಗಿದ್ದು ಟಚ್​ಸ್ಕ್ರೀನ್ ಫೀಚರ್ ಹೊಂದಿರುವುದಿಲ್ಲ. 0.3 ಎಂ.ಪಿ ಕ್ಯಾಮೆರಾ , ಎಫ್.ಎಂ ರೇಡಿಯೋ, ಇಯರ್ ಫೋನ್ ಜಾಕ್, 2500 ಎಂಎಎಚ್ ಬ್ಯಾಟರಿ ಸೌಲಭ್ಯ ಮತ್ತು 128 ಜಿಬಿ ವಿಸ್ತರಿಸುವಷ್ಟು ಸ್ಟೋರೆಜ್ ಅವಕಾಶ ಹೊಂದಿದೆ.
23 ಭಾರತೀಯ ಭಾಷೆಗಳ ಆಯ್ಕೆಯಿದೆ. ಜೀಯೋ ಆ್ಯಪ್​ಗಳು ಫೋನ್​ನಲ್ಲಿ ಇನ್​ಬಿಲ್ಟ್ ಆಗಿರಲಿದೆ.  ಕೇವಲ ಜಿಯೋ ಸಿಮ್ ಅನ್ನು ಮಾತ್ರ ಈ ಫೋನ್​ನಲ್ಲಿ ಬಳಸಬಹುದಾಗಿದೆ. ಇದಕ್ಕೆ ಸರಿಹೊಂದುವಂತೆ ರೂ.123 ಗಳ ರಿಚಾರ್ಜ್​ ಪ್ಲಾನ್ ಬಿಡುಗಡೆ ಮಾಡಿರುವ ಜಿಯೋ, 28 ದಿನಗಳಿಗೆ ಅನ್ಲಿಮಿಟೆಡ್ ಕಾಲ್​ ಮತ್ತು 14 ಜಿಬಿ ಡೇಟಾ ನೀಡಿದೆ. ಈ ಹಿಂದೆ ಜಿಯೋ ಭಾರತ್ ಬಿ2 ಮತ್ತು ಭಾರತ್ ಕೆ1 ಕಾರ್ಭನ್ 4 ಜಿ ಹೆಸರಿನ ಫೋನ್​ಗಳನ್ನು ಬಿಡುಗಡೆ ಮಾಡಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
