

ಮುಂಬೈ:ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) 20 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳವನ್ನು ಸಾಧಿಸಿದ ಮೊದಲ ಭಾರತೀಯ ಕಂಪನಿಯಾಗಿದೆ . ಇಂಟ್ರಾ-ಡೇ ವಹಿವಾಟಿನಲ್ಲಿ ಕಂಪನಿಯ ಷೇರುಗಳು 2,957.80 ರೂ. ಇದ್ದು, 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು.
ಇದನ್ನೂ ಓದಿ:ಚೀನಾ ಅನಾವರಣಗೊಳಿಸಿದೆ 600 ಕಿಮೀ ವೇಗದ ಮ್ಯಾಗ್ಲೆವ್ ರೈಲು! ಇದು ವಿಮಾನದಂತೆ ಗಾಳಿಯಲ್ಲಿ ತೇಲಬಲ್ಲದು!!
ಬುಧವಾರ, ಷೇರುಗಳು 2911.40ರೂ.ನಲ್ಲಿ ಪ್ರಾರಂಭವಾದ ನಂತರ 2924.55 ರಲ್ಲಿ ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ. ಇಂಟ್ರಾ-ಡೇ ಸೆಷನ್‌ನಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯವು 20,01,279.72 ಕೋಟಿ ರೂ.ಗೆ ಏರಿತು. ಅಂತ್ಯದ ವೇಳೆಗೆ, ಮಾರುಕಟ್ಟೆ ಬಂಡವಾಳವು 19,81,635.72 ಕೋಟಿ ರೂ.ಗಳಷ್ಟಿತ್ತು.
ಇನ್ನು ಎನ್​ಎಸ್​ಇನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳು ಸುಮಾರು 1.89 ಪ್ರತಿಶತದಷ್ಟು ಏರಿಕೆಯಾಗಿ 2,958 ರೂ.ನ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು. ನಂತರ ಬ್ಲೂ-ಚಿಪ್ ಸ್ಟಾಕ್ ಶೇಕಡಾ 0.74 ರಷ್ಟು ಏರಿಕೆಯಾಗಿ 2,926.20 ರೂ.ಗೆ ಕೊನೆಗೊಂಡಿತು.
ಕಳೆದ ಎರಡು ವಾರಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳ ಮಾರುಕಟ್ಟೆ ಮೌಲ್ಯ ಸುಮಾರು 1 ಲಕ್ಷ ಕೋಟಿ ರೂ.ಗಳಷ್ಟು ಏರಿಕೆಯಾಗಿದೆ. ಅತ್ಯಂತ ಮೌಲ್ಯಯುತ ಸಂಸ್ಥೆಗಳ ಶ್ರೇಯಾಂಕದಲ್ಲಿ ಟಿಸಿಎಸ್​, ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಭಾರತೀಯ ಜೀವ ವಿಮಾ ನಿಗಮ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಭಾರತಿ ಏರ್‌ಟೆಲ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಐಟಿಸಿ ನಂತರದ ಟಾಪ್-10 ಸ್ಥಾನದಲ್ಲಿ ಮುಂದುವರಿದಿವೆ.
ಕಳೆದ ತಿಂಗಳು, ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳಿಗೆ ಭಾರಿ ಬೇಡಿಕೆ ಬಂದಿದ್ದು, ಶೇಕಡಾ 7 ಕ್ಕಿಂತ ಹೆಚ್ಚು ಏರಿಕೆ ಕಂಡಿದ್ದವು. ಅದರ ಮಾರುಕಟ್ಟೆ ಮೌಲ್ಯವು 19.56 ಲಕ್ಷ ಕೋಟಿ ರೂ. ದಾಟಿತ್ತು.
ಬಿಡೆನ್ ಗಡಿ ಅಧಿಕಾರಿ ಮೇಲೆ ದೋಷಾರೋಪಣೆ: ಅಮೆರಿಕಾದ 150 ವರ್ಷದಲ್ಲಿ ಇಂತಹ ಘಟನೆ ಇದೇ ಮೊದಲು!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − 6 =
Remember me
