ಮುಂಬೈ:ಏಷ್ಯಾ ಖಂಡದಲ್ಲಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ದೊರೆತಿದೆ.ಜಾಗತಿಕ ಮಾಧ್ಯಮ ಕಂಪನಿಯಾದ ಫೋರ್ಬ್ಸ್ ಪ್ರಕಾರ, ಭಾರತದ ಉದ್ಯಮಿ ಮುಖೇಶ್ ಅಂಬಾನಿ ಅವರು ಏಷ್ಯಾದ ಕುಬೇರರಾಗಿ ಹೊರಹೊಮ್ಮಿದ್ದಾರೆ. ಏಷ್ಯಾದ ಟಾಪ್​ ಟೆನ್​ ಶ್ರೀಮಂತರ ಪಟ್ಟಿಯಲ್ಲಿ ಮೂವರು ಭಾರತೀಯರಿದ್ದಾರೆ.
ಜನವರಿ 2024 ರ ಹೊತ್ತಿಗೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮುಖೇಶ್ ಅಂಬಾನಿ ಅವರು 96.4 ಶತಕೋಟಿ ಡಾಲರ್​ ಮೌಲ್ಯದ ಆಸ್ತಿ ಹೊಂದಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಅವರು 2008 ರಲ್ಲಿ ಮುಂಬೈ ಇಂಡಿಯನ್ಸ್ ಮಾಲೀಕತ್ವದೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಗೆ ಪ್ರವೇಶಿಸಿದ್ದರು. ರಿಲಯನ್ಸ್‌ನ ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಸೇವೆಯಾದ ಜಿಯೋ ಈಗಾಗಲೇ ಅಂದಾಜು 45 ಕೋಟಿ ಚಂದಾದಾರರನ್ನು ಸೆಳೆದಿದೆ, ಜಿಯೋ ಫೈನಾನ್ಷಿಯಲ್ ಸರ್ವೀಸಸ್‌ ವಿಸ್ತರಣೆಯಾಗುತ್ತಿದೆ. ಬ್ಲ್ಯಾಕ್‌ರಾಕ್ ಮತ್ತು ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಜುಲೈ 2023 ರಲ್ಲಿ ಜಿಯೋ ಬ್ಲ್ಯಾಕ್‌ರಾಕ್ ಜಂಟಿ ಉದ್ಯಮ ರಚಿಸುವ ಒಪ್ಪಂದ ಘೋಷಿಸಿವೆ.
ಎರಡನೇ ಸ್ಥಾನದಲ್ಲಿರುವ ಗೌತಮ್ ಅದಾನಿ ಅವರು ಅದಾನಿ ಗ್ರೂಪ್‌ನ ಮುಖ್ಯಸ್ಥರಾಗಿದ್ದಾರೆ, ಬಂದರುಗಳು, ವಿಮಾನ ನಿಲ್ದಾಣಗಳು, ಇಂಧನ ವಲಯದಲ್ಲಿ ವ್ಯಾಪಿಸಿರುವ 32 ಬಿಲಿಯನ್ ಡಾಲರ್​ ಉದ್ಯಮವಾಗಿದೆ ಅದಾನಿ ಗ್ರೂಪ್. 1988 ರಲ್ಲಿ ಈ ವ್ಯಾಪಾರ ಸಂಸ್ಥೆ ಪ್ರಾರಂಭವಾಯಿತು. ಭಾರತದ ಪ್ರಮುಖ ವಿಮಾನ ನಿಲ್ದಾಣ ನಿರ್ವಾಹಕರಾಗಿ ಮತ್ತು ಗುಜರಾತ್‌ನ ಮಹತ್ವದ ಮುಂದ್ರಾ ಬಂದರಿನ ನಿಯಂತ್ರಕವಾಗಿ ಅದಾನಿ ಗ್ರೂಪ್​ ಬೆಳೆಯಿತು. ಇದಲ್ಲದೆ, 2022 ರಲ್ಲಿ ಹೊಲ್ಸಿಮ್ ಸ್ವಾಧೀನವು ಅವರನ್ನು ಭಾರತದ ಎರಡನೇ ಅತಿದೊಡ್ಡ ಸಿಮೆಂಟ್ ಉತ್ಪಾದಕರ ಸ್ಥಾನಕ್ಕೆ ಏರಿಸಿದೆ.
1) ಮುಖೇಶ್ ಅಂಬಾನಿ (ಭಾರತ), 100.2 ಬಿಲಿಯನ್​ ಡಾಲರ್​ ಅಸ್ತಿ.2) ಗೌತಮ್ ಅದಾನಿ (ಭಾರತ) 79.9 ಬಿಲಿಯನ್​ ಡಾಲರ್​ ಅಸ್ತಿ.3) ಝಾಂಗ್ ಶಾನ್ಶನ್ (ಚೀನಾ) 62.4 ಬಿಲಿಯನ್​ ಡಾಲರ್​ ಅಸ್ತಿ.4) ಕಾಲಿನ್ ಝೆಂಗ್ ಹುವಾಂಗ್ (ಚೀನಾ) 53.0 ಬಿಲಿಯನ್​ ಡಾಲರ್​ ಅಸ್ತಿ.5) ಜಾಂಗ್ ಯಿಮಿಂಗ್ (ಚೀನಾ) 43.4 ಬಿಲಿಯನ್​ ಡಾಲರ್​ ಅಸ್ತಿ.6) ಪ್ರಜೋಗೊ ಪಂಗೆಸ್ಟು (ಇಂಡೋನೇಷ್ಯಾ) 43.3 ಬಿಲಿಯನ್​ ಡಾಲರ್​ ಅಸ್ತಿ.7) ತದಾಶಿ ಯಾನೈ ಮತ್ತು ಕುಟುಂಬ (ಜಪಾನ್) 37.5 ಬಿಲಿಯನ್​ ಡಾಲರ್​ ಅಸ್ತಿ8) ಲಿ ಕಾ-ಶಿಂಗ್ (ಹಾಂಗ್ ಕಾಂಗ್) 35.7 ಬಿಲಿಯನ್​ ಡಾಲರ್​ ಅಸ್ತಿ.9) ಶಿವ ನಾಡರ್ (ಭಾರತ) 33.6 ಬಿಲಿಯನ್​ ಡಾಲರ್​ ಅಸ್ತಿ.10) ಮಾ ಹುವಾಟೆಂಗ್ (ಚೀನಾ) 30.9 ಬಿಲಿಯನ್​ ಡಾಲರ್​ ಅಸ್ತಿ

ಒಂದೇ ವರ್ಷದಲ್ಲಿ ಶೇಕಡಾ 320 ರಿಟರ್ನ್; ನವೀಕರಿಸಬಹುದಾದ ಇಂಧನ ಕಂಪನಿ ಷೇರು ನೀಡಬಹುದು ಭರ್ಜರಿ ಲಾಭ

ವಿದ್ಯಾರ್ಥಿ ಜತೆ ಶಾಲಾ ಮೈದಾನದಲ್ಲೇ ಲೈಂಗಿಕ ಕ್ರಿಯೆ: ಅಮೆರಿಕ ಶಿಕ್ಷಕಿಯ ಬಂಧನ

ಜನವರಿ 31ರಿಂದ ಬಜೆಟ್ ಅಧಿವೇಶನ: ಮಹಿಳಾ ರೈತರಿಗೆ ದೊಡ್ಡ ಘೋಷಣೆ ಸಾಧ್ಯತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − two =
Remember me
