ಮುಂಬೈ:ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರೂ ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯ ಸುದ್ದಿಯೇ ಟ್ರೆಂಡಿಂಗ್ ಆಗಿದೆ. ಜುಲೈ 12ರ ಶುಕ್ರವಾರದಂದು ಅನಂತ್ ಅಂಬಾನಿ ಅವರ ವಿವಾಹ ಸಮಾರಂಭ ನೆರವೇರಿತು. ಈ ಮದುವೆಗೆ ಬಾಲಿವುಡ್, ಟಾಲಿವುಡ್, ಸ್ಯಾಂಡಲ್​ವುಡ್​ ಹಾಗೂ ಕಾಲಿವುಡ್ ಸೆಲೆಬ್ರಿಟಿಗಳ ಜತೆಗೆ ಹಾಲಿವುಡ್ ಸೆಲೆಬ್ರಿಟಿಗಳು, ಕ್ರೀಡೆ, ರಾಜಕೀಯ ನಾಯಕರು ಕೂಡ ಆಗಮಿಸಿದ್ದರು.
ಮದುವೆ ಮಂಟಪದ ಅಲಂಕಾರ, ವಧು-ವರರು ಹಾಗೂ ಅಂಬಾನಿ ಕುಟುಂಬದ ಸದಸ್ಯರು ತೊಟ್ಟಿರುವ ಬಟ್ಟೆ, ಆಭರಣಗಳ ವಿವರ, ವೆಚ್ಚದ ಜತೆಗೆ ಅತಿಥಿಗಳಿಗೆ ನೀಡಿದ ಉಡುಗೊರೆ, ವೆರೈಟಿ ಭೋಜನಗಳು ಸೇರಿದಂತೆ ಎಲ್ಲವೂ ಅದ್ಧೂರಿಯಾಗಿಯೇ ಇತ್ತು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿದೆ. ಇದೆಲ್ಲದರ ನಡುವೆ ಅನಂತ್​-ರಾಧಿಕಾ ಮದುವೆಗೆ ಸಂಬಂಧಿಸಿದ ಭಾವನಾತ್ಮಕ ವಿಡಿಯೋವೊಂದು ಇದೀಗ ವೈರಲ್​ ಆಗಿದೆ.
ವೈರಲ್​ ವಿಡಿಯೋದಲ್ಲಿ ಮುಕೇಶ್​ ಅಂಬಾನಿ ಅವರು ತುಂಬಾ ಭಾವುಕರಾಗಿ ಕಾಣಿಸಿಕೊಂಡಿದ್ದಾರೆ. ಕಣ್ಣೀರು ಹಾಕುವುದನ್ನು ವಿಡಿಯೋದಲ್ಲಿ ಕಾಣಬಹುದು. ಮದುವೆ ಸಮಾರಂಭದ ನಂತರ ಅಂಬಾನಿ ಕುಟುಂಬವು ತಮ್ಮ ಸೊಸೆಯನ್ನು ಯಾಮ್ ಲಿಯಾಗೆ ಸ್ವಾಗತಿಸಿತು. ಈ ಸಂದರ್ಭದಲ್ಲಿ ನವ ದಂಪತಿದೆ ಆಶೀರ್ವಚನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೆಲವು ಸೆಲೆಬ್ರಿಟಿಗಳೂ ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಹರಿದಾಡುತ್ತಿದ್ದು, ಸೊಸೆಯನ್ನು ನೋಡಿ ಅಂಬಾನಿ ಭಾವುಕರಾದ ದೃಶ್ಯ ವಿಡಿಯೋದಲ್ಲಿದೆ.

A post shared by Boss Women Sayings (@bosswomensayings)

ಸೊಸೆಯ ಬೀಳ್ಕೊಡುಗೆ ಸಮಾರಂಭದಲ್ಲಿ ಅತ್ತೆ ನೀತಾ ಅಂಬಾನಿ ಮತ್ತು ಮಾವ ಮುಕೇಶ್​ ಅಂಬಾನಿ ಭಾವುಕರಾಗಿ ಕಾಣುತ್ತಿದ್ದರು. ಈ ವಿಡಿಯೋ ಇದೀಗ ಎಲ್ಲರ ಗಮನ ಸೆಳೆದಿದೆ. ಇನ್ನು ಕಳೆದ ವರ್ಷ ಅನಂತ್​-ರಾಧಿಕಾ ನಿಶ್ಚಿತಾರ್ಥದ ಕಾರ್ಯಕ್ರಮದಿಂದ ಹಿಡಿದ 2024 ಜುಲೈ 14ರವರೆಗೆ ಮದುವೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳು ನಡೆದವು. ಕಳೆದ ಮಾರ್ಚ್ ತಿಂಗಳಿನಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವೂ ನಡೆಯಿತು.
ಜುಲೈ 5 ರಂದು ಮುಂಬೈನಲ್ಲಿ ಅನಂತ್​-ರಾಧಿಕಾ ವಿವಾಹ ಸಮಾರಂಭವು ಪ್ರಾರಂಭವಾಯಿತು ಮತ್ತು ಜುಲೈ 12 ರಂದು ಇಬ್ಬರು ಮದುವೆಯಾದರು.(ಏಜೆನ್ಸೀಸ್​)
ತನ್ನ ಅದ್ಧೂರಿ ವಿವಾಹದಲ್ಲಿ ಅನಂತ್​ ಅಂಬಾನಿ ಧರಿಸಿದ ವಾಚ್ ಬೆಲೆ ಕೇಳಿದರೆ ನೀವು ಬೆರಗಾಗೋದು ಖಚಿತ​!

ಅನಂತ್​​​-ರಾಧಿಕಾ ಹೈಪ್ರೊಫೈಲ್ ವಿವಾಹ; ಪೊಲೀಸರ ಅತಿಥಿಗಳಾದ್ರೂ ಆಹ್ವಾನಿಸದೆ ಬಂದ ಈ ಇಬ್ಬರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − four =
Remember me
