ಮುಂಬೈ:ಮುಖೇಶ್​ ಅಂಬಾನಿ ಅವರು ದೇಶದ ಅತ್ಯಂತ ಶ್ರೀಮಂತ ಉದ್ಯಮಿಯಲ್ಲಿ ಒಬ್ಬರಾಗಿದ್ದಾರೆ. ಆಶ್ಚರ್ಯಕರವಾದ ಸಂಗತಿ ಎಂದರೆ ಈ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವಿಶೇಷವಾದ ಸವಲತ್ತಿನ ಜತೆ ಒಳ್ಳೆಯ ಸಂಬಳವನ್ನು ಅಂಬಾನಿ ಕುಟುಂಬ ನೀಡುತ್ತಿದೆ. ಅಂಬಾನಿ ಕುಟುಂಬ ಡ್ರೈವರ್‌ನಿಂದ ಅಡುಗೆ ಮಾಡುವ ಬಾಣಸಿಗನ ಸಂಬಳ ಎಷ್ಟು ಎಂದು ತಿಳಿಯೋಣ…
ತಮ್ಮ ಮನೆಗಳಲ್ಲಿ ಕೆಲಸ ಮಾಡುವ ಸೇವಕರು ಭಾರಿ ಸಂಬಳ ಪಡೆಯುವುದು ಮಾತ್ರವಲ್ಲದೆ ಕಾರ್ಪೊರೇಟ್ ಉದ್ಯೋಗಿಗಳಂತೆ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ನೀವು ಅಂಬಾನಿ ಮನೆಯಲ್ಲಿ ಬಾಣಸಿಗರಾಗಿ ಕೆಲಸ ಮಾಡಲು ಬಯಸಿದರೆ, ನೀವು ಪ್ರಮಾಣಪತ್ರ, ಡಿಪ್ಲೊಮಾ ಅಥವಾ ಪದವಿಯನ್ನು ಹೊಂದಿರಬೇಕು.
ಮುಖೇಶ್ ಅಂಬಾನಿ ಮನೆಯಲ್ಲಿ 500ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಸೇವಕರು ಉತ್ತಮ ಸಂಬಳವನ್ನು ಪಡೆಯುತ್ತಾರೆ. ಮನೆಯಲ್ಲಿ ಅಡುಗೆಯವರಿಂದ ಹಿಡಿದು ಚಾಲಕನವರೆಗೆ ಸಂಬಳ ಚೆನ್ನಾಗಿದೆ. ಅಂಬಾನಿ ಮನೆಯಲ್ಲಿ ಕೆಲಸ ಮಾಡುವವರು ಅದೃಷ್ಟವಂತರು. ಯಾಕೆಂದರೆ ಅಂಬಾನಿ ಮನೆಯಲ್ಲಿ ಕೆಲಸಗಾರರಿಗೂ ಲಕ್ಷಗಟ್ಟಲೆ ಸಂಬಳ.
ಮುಕೇಶ್ ಅಂಬಾನಿ ತಮ್ಮ ಸಿಬ್ಬಂದಿಗೆ ವಿಮೆ ಮತ್ತು ಶಿಕ್ಷಣ ಭತ್ಯೆಯೊಂದಿಗೆ ಸಂಬಳವನ್ನು ಪಾವತಿಸುತ್ತಾರೆ. ಮುಕೇಶ್ ಅಂಬಾನಿ ಸಿಬ್ಬಂದಿಯ ಕೆಲವು ಮಕ್ಕಳೂ ಅಮೆರಿಕದಲ್ಲಿ ಓದುತ್ತಿರುವುದು ದೊಡ್ಡ ವಿಷಯ. ಆದರೆ, ಮುಕೇಶ್ ಅಂಬಾನಿಗೆ ಬಾಣಸಿಗನಾಗುವುದು ಅಥವಾ ಚಾಲಕನಾಗುವುದು ಸುಲಭದ ಮಾತಾಗಿರಲಿಲ್ಲ. ಇದಕ್ಕಾಗಿ ಅವರು ಹಲವಾರು ಪರೀಕ್ಷೆಗಳನ್ನು ನಡೆಸುತ್ತಾರೆ. ಒಮ್ಮೆ ನೀವು ಆ ಎಲ್ಲಾ ಮಾನದಂಡಗಳನ್ನು ದಾಟಿದ ನಂತರ ನೀವು ಅಲ್ಲಿ ಕೆಲಸ ಮಾಡಲು ಅವಕಾಶವನ್ನು ಪಡೆಯುತ್ತೀರಿ. ಅಂಬಾನಿ ಮನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಮುಖೇಶ್ ಅಂಬಾನಿ ಬಾಣಸಿಗರ ತಿಂಗಳ ವೇತನ 2 ಲಕ್ಷ ರೂ.  ಅಂಬಾನಿ ಸಸ್ಯಾಹಾರಿ. ಅವರು ಸರಳ ಆಹಾರವನ್ನು ಇಷ್ಟಪಡುತ್ತಾರೆ. ಕೇವಲ ಬಾಣಸಿಗ ಮಾತ್ರವಲ್ಲ, ಆಂಟಿಲಿಯಾದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿಯೂ ಬಹುತೇಕ ಒಂದೇ ರೀತಿಯ ಸಂಬಳವನ್ನು ಪಡೆಯುತ್ತಾರೆ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 12 =
Remember me
