ಮುಂಬೈ:ರಿಲಾಯನ್ಸ್​ ಇಂಡಸ್ಟ್ರೀಸ್​ ಚೇರಮನ್​ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ ಈಗ ವಿಶ್ವದಲ್ಲಿಯೇ ನಾಲ್ಕನೇ ಅತಿ ದೊಡ್ಡ ಶ್ರೀಮಂತ. ಜಗತ್ತಿನ 167 ದೇಶಗಳಿಗಿಂತಲೂ ಇವರ ಸಂಪತ್ತು ಹೆಚ್ಚಾಗಿದೆ. ಈ ಸಂಪತ್ತಿನ ವಾರಸ್ದಾರರು ಅಥವಾ ರಿಲಾಯನ್ಸ್​ ಇಂಡಸ್ಟ್ರೀಸ್​ನ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಕುತೂಹಲಕಾರಿ.
ತಂದೆ ಧೀರುಬಾಯ್​ ಅಂಬಾನಿ ಸ್ಥಾಪಿಸಿದ್ದ ಸಾಮ್ರಾಜ್ಯಕ್ಕಾಗಿ ಸಹೋದರರಾದ ಮುಖೇಶ್​ ಅಂಬಾನಿ ಹಾಗೂ ಅನಿಲ್​ ಅಂಬಾನಿ ನಡುವೆ ಉಂಟಾಗಿದ್ದ ಕಲಹ ಕೊನೆಗೆ ಆಸ್ತಿ ವಿಭಜನೆಯಲ್ಲಿ ಕೊನೆಗೊಂಡಿತ್ತು. ಇದೇ ಆತಂಕವೀಗ ಮುಖೇಶ್​ ಅಂಬಾನಿಗೂ ಎದುರಾಗಿರಲಿಕ್ಕೂ ಸಾಕು.
ಇದನ್ನೂ ಓದಿ:ರಿಲಾಯನ್ಸ್​ ಪ್ರತಿಷ್ಠಾನ ಮುನ್ನಡೆಸ್ತಾರಾ ಮಗಳು ಇಶಾ ಅಂಬಾನಿ?
ಈ ಕಾರಣಕ್ಕಾಗಿಯೇ ಉತ್ತರಾಧಿಕಾರಿ ಯೋಜನೆಯನ್ನು ಮುಖೇಶ್​ ಅಂಬಾನಿ ರೂಪಿಸುತ್ತಿದ್ದಾರೆ. ಇದಕ್ಕಾಗಿ ಕೌಟುಂಬಿಕ ಮಂಡಳಿಯೊಂದನ್ನು ರಚಿಸುತ್ತಿದ್ದಾರೆ ಎಂದು ಹೇಳಲಾಗಿದೆ. ತೈಲೋದ್ಯಮ, ಟೆಲಿಕಾಂ ಹಾಗೂ ರಿಟೇಲ್​ ಮೊದಲಾದ ಕ್ಷೇತ್ರಗಳನ್ನು ಒಳಗೊಂಡಿರುವ ಉದ್ಯಮ ಸಾಮ್ರಾಜ್ಯದ ನಿರ್ವಹಣೆಗೆ ಸಾಮೂಹಿಕ ಆಡಳಿತ ರಚನೆಯ ಸ್ವರೂಪವನ್ನು ಇದು ನಿರ್ಧರಿಸಲಿದೆ ಎಂದು ಹೇಳಲಾಗಿದೆ.
ಕೌಟುಂಬಿಕ ಮಂಡಳಿಯಲ್ಲಿ ಕುಟುಂಬದ ಸದಸ್ಯರಿಗೆ ಸಮಾನ ಪ್ರಾತಿನಿಧ್ಯವಿರಲಿದೆ. ಕುಟುಂಬದ ವಯಸ್ಕರು ಹಾಗೂ ಮೂವರು ಮಕ್ಕಳು ಇದರಲ್ಲಿರಲಿದ್ದಾರೆ. ಕುಟುಂಬದ ಹೊರಗಿನವರು ಮಹಾಪೋಷಕರಾಗಿರಲಿದ್ದಾರೆ ಎಂದು ತಿಳಿದು ಬಂದಿದೆ.
ರಿಲಾಯನ್ಸ್​ ಇಂಡಸ್ಟ್ರೀಸ್​ನ ನಿರ್ಧಾರಗಳಲ್ಲಿ ಈ ಮಂಡಳಿ ಪ್ರಮುಖ ಪಾತ್ರ ವಹಿಸಲಿದೆ. ಜತೆಗೆ ಕುಟುಂಬ ಹಾಗೂ ವಹಿವಾಟುಗಳ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಿದೆ. ಯಾವುದೇ ಬಿಕ್ಕಟ್ಟು, ಕಲಹ ಎದುರಾದರೂ ಅದನ್ನು ಬಗೆಹರಿಸಲಿದೆ ಎಂದು ಹೇಳಲಾಗಿದೆ.ಮುಖೇಶ್​ ಅಂಬಾನಿಗೆ ಈಗ 63 ವರ್ಷವಾಗಿದ್ದು, ಮುಂದಿನ ವರ್ಷದ ಅಂತ್ಯಕ್ಕೆ ಈ ಉತ್ತರಾಧಿಕಾರಿ ಯೋಜನೆಯ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಮಹಾಕ್ರಾಂತಿಗೆ ಸಜ್ಜಾಗಿದೆ ರಿಲಯನ್ಸ್​ ರಿಟೇಲ್​; ಅಮೆಜಾನ್​, ವಾಲ್​ಮಾರ್ಟ್​ ದೈತ್ಯರಿಗೆ ಶುರುವಾಯ್ತು ಭೀತಿ
ಮುಖೇಶ್​ ಅಂಬಾನಿಗೆ ಮೂವರು ಮಕ್ಕಳಿದ್ದು, ಈಗಾಗಲೇ ಆಕಾಶ್​ ಹಾಗೂ ಇಶಾ ಅಂಬಾನಿ ರಿಲಾಯನ್ಸ್​ ಜಿಯೋ ಹಾಗೂ ರಿಲಾಯನ್ಸ್​ ರಿಟೇಲ್​ನಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತೊಬ್ಬ ಮಗ ಅನಂತ್​ ಜಿಯೋ ಫ್ಲಾಟ್​ಫಾರ್ಮ್​ಗೆ ಸಹ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಇನ್ನೊಂದೆಡೆ, ರಿಲಾಯನ್ಸ್​ ಪ್ರತಿಷ್ಠಾನವನ್ನು ಮುನ್ನಡೆಸುವಲ್ಲಿ ತಾಯಿ ನೀತಾ ಅಂಬಾನಿಗೆ ಇಶಾ ನೆರವಾಗುತ್ತಿದ್ದಾರೆ.ರಿಲಾಯನ್ಸ್​ನ ಇಂಧನ, ರಿಟೇಲ್​ ಹಾಗೂ ಡಿಜಿಟಲ್ ಕ್ಷೇತ್ರವನ್ನು ಒಬ್ಬೊಬ್ಬರು ನೋಡಕೊಳ್ಳುವ ಅಥವಾ ಹಂಚಿಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.
ಭಾರತೀಯರಿಗೆ ಶುಭಸುದ್ದಿ; ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್​ ಮಾನವರ ಬಳಕೆಗೆ ಸುರಕ್ಷಿತ; ಆರಂಭಿಕ ಯಶಸ್ಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 7 =
Remember me
