ಮುಂಬೈ:ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್​ ಸಮೂಹವು ಅನೇಕ ಕಂಪನಿಗಳನ್ನು ಹೊಂದಿದೆ, ಈ ಪೈಕಿ ಡೆನ್ ನೆಟ್‌ವರ್ಕ್ಸ್ ಲಿಮಿಟೆಡ್ (Den Networks Ltd.) ಒಂದಾಗಿದೆ. ಈಗ ಈ ಕಂಪನಿಯ ಷೇರು ಬೆಲೆ ರೂ 50 ಕ್ಕಿಂತ ಕುಸಿತ ಕಂಡಿದೆ. ಈ ಹಿಂದೆ 250 ರೂಪಾಯಿಗೂ ಅಧಿಕ ಬೆಲೆ ಇದ್ದ ಈ ಷೇರು ಈಗ ಕುಸಿತ ಕಂಡಿರುವುದು ಹೂಡಿಕೆಗೆ ಉತ್ತಮ ಅವಕಾಶವನ್ನು ಸೃಷ್ಟಿಸಿದೆ.
ಕಳೆದ ಗುರುವಾರ ಈ ಷೇರಿನ ಬೆಲೆ 47.05 ರೂ. ತಲುಪಿತು. ಹಿಂದಿನ ದಿನಕ್ಕೆ ಹೋಲಿಸಿದರೆ ಈ ಸ್ಟಾಕ್ 3.78% ನಷ್ಟು ಕುಸಿತವನ್ನು ದಾಖಲಿಸಿದೆ. ಇಂಟ್ರಾ ಡೇ ವಹಿವಾಟಿನ ವೇಳೆ ಈ ಷೇರಿನ ಬೆಲೆ 46.65 ರೂ.ಗೆ ಕುಸಿದಿತ್ತು. ಜನವರಿ 2024 ರಲ್ಲಿ ಈ ಷೇರಿನ ಬೆಲೆ 69.40 ರೂ. ಇತ್ತು. ಇದು ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ಆಗಿದೆ. ಮಾರ್ಚ್ 2023 ರಲ್ಲಿ, ಈ ಷೇರಿನ ಬೆಲೆ ರೂ 25.56 ಕ್ಕೆ ಇಳಿದಿತ್ತು.
ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 254.40 ರೂಪಾಯಿ ಇದೆ. ಸಾರ್ವಕಾಲಿಕ ಕನಿಷ್ಠ ಬೆಲೆ 25.20 ರೂಪಾಯಿ ಇದೆ. ಕಳೆದ ಒಂದು ತಿಂಗಳಲ್ಲಿ ಈ ಷೇರು ಬೆಲೆ ಶೇಕಡಾ 14ರಷ್ಟು ಕುಸಿದಿದೆ.
ಡೆನ್​ ನೆಟ್‌ವರ್ಕ್ಸ್ ಲಿಮಿಟೆಡ್‌ನಲ್ಲಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಪಾಲನ್ನು ಹೊಂದಿದೆ. ಕಂಪನಿಯ ಪ್ರವರ್ತಕರು ವಂದನಾ ಮಂಚಂದ, ಕವಿತಾ ಮಂಚಂದ, ಸಮೀರ್ ಮತ್ತು ಸಂಜೀವ್ ಮಂಚಂಡ. ಅವರು 2,17,52,620 ಷೇರುಗಳನ್ನು ಅಥವಾ ಶೇಕಡಾ 4.56 ಷೇರು ಹೊಂದಿದ್ದಾರೆ. ಇದಲ್ಲದೆ, ರಿಲಯನ್ಸ್ ಇಂಡಸ್ಟ್ರೀಸ್ ಇನ್ವೆಸ್ಟ್‌ಮೆಂಟ್ಸ್ & ಹೋಲ್ಡಿಂಗ್ಸ್ ಲಿಮಿಟೆಡ್, ರಿಲಯನ್ಸ್ ವೆಂಚರ್ಸ್ ಲಿಮಿಟೆಡ್ ಮತ್ತು ನೆಟ್‌ವರ್ಕ್ 18 ಮೀಡಿಯಾ ಮತ್ತು ಇನ್ವೆಸ್ಟ್‌ಮೆಂಟ್ ಲಿಮಿಟೆಡ್ ಸಹ ಕಂಪನಿಯಲ್ಲಿ ಪಾಲನ್ನು ಹೊಂದಿವೆ.
ಇದೇ ರೀತಿ, ಜಿಯೋ ಟೆಲಿವಿಷನ್ ಡಿಸ್ಟ್ರಿಬ್ಯೂಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್, ಜಿಯೋ ಫ್ಯೂಚರಿಸ್ಟಿಕ್ ಡಿಜಿಟಲ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಜಿಯೋ ಡಿಜಿಟಲ್ ಡಿಸ್ಟ್ರಿಬ್ಯೂಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಕೂಡ ಈ ಕಂಪನಿಯಲ್ಲಿ ಪಾಲನ್ನು ಹೊಂದಿವೆ. ಪ್ರವರ್ತಕರ ಒಟ್ಟು ಪಾಲು 74.90 ಪ್ರತಿಶತ ಆಗುತ್ತದೆ.
ಕೇಬಲ್ ಟೆಲಿವಿಷನ್ ವಿತರಣಾ ಕಂಪನಿಯಾಗಿರುವ ಡೆನ್​ ನೆಟ್​ವರ್ಕ್ಸ್ ಲಿಮಿಟೆಡ್ ಕಳೆದ ಜನವರಿಯಲ್ಲಿ ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿತ್ತು. ಈ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ ಶೇ. 3ರಷ್ಟು ಕುಸಿದು 47.85 ಕೋಟಿ ರೂ. ಆಗಿತ್ತು. ಕಂಪನಿಯು ವರ್ಷದ ಹಿಂದೆ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 49.32 ಕೋಟಿ ರೂ.ಗಳ ಲಾಭ ಗಳಿಸಿತ್ತು. ಡಿಸೆಂಬರ್ ತ್ರೈಮಾಸಿಕದಲ್ಲಿ ಈ ಕಂಪನಿಯ ಒಟ್ಟು ಆದಾಯವು ಶೇಕಡಾ 1.4 ರಷ್ಟು ಕುಸಿದು 272.93 ಕೋಟಿ ರೂಪಾಯಿಗಳಿಗೆ ತಲುಪಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 276.90 ಕೋಟಿ ರೂ. ಆದಾಯ ಇತ್ತು.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 10 =
Remember me
