ಮುಂಬೈ:ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸ ಅಂಟಿಲಿಯಾ ಬಳಿ ಕಳೆದ ತಿಂಗಳು ಸ್ಪೋಟಕ ತುಂಬಿದ ಕಾರ್​ ಒಂದು ಪತ್ತೆಯಾಗಿದ್ದ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ಎನ್​ಐಎ ಗೆ ವಹಿಸಿದೆ.
ಈ ಕುರಿತು ಸೋಮವಾರ ಆದೇಶ ಹೊರಡಿಸಿರುವ ಗೃಹ ಸಚಿವಾಲಯ, ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಆಂಟಿ ಟೆರರಿಮ್ ಸ್ಕ್ವಾಡ್​ನಿಂದ (ಎಟಿಎಸ್) ಎನ್​ಐಎ ಗೆ ವಹಿಸಲಾಗುತ್ತಿದೆ ಎಂದು ತಿಳಿಸಿದೆ.
ಫೆ 25 ರಂದು ಮುಕೇಶ್ ಅಂಬಾನಿ ನಿವಾಸದ ಎದುರು ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಸ್ಕಾರ್ಪಿಯೋ ಕಾರ್​ ಒಂದು ಪತ್ತೆಯಾಗಿ ಸಾಕಷ್ಟು ಆತಂಕ ಮೂಡಿಸಿತ್ತು. ವ್ಯಾಪಕ ತನಿಖೆ ನಡೆಸಿದ್ದ ಪೊಲೀಸರು ಕಾರ್​ ಮಾಲೀಕನನ್ನು ಪತ್ತೆ ಹಚ್ಚಿದ್ದರು. ಕಾರ್​ ಮಾಲೀಕ ಎಂದು ಹೇಳಲಾದ ಮನ್​ಸುಕ್ ಹಿರೇನ್ ಎಂಬಾತ ಬಂಧನಕ್ಕೂ ಮುಂಚೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ.
ಇದನ್ನೂ ಓದಿ:ಉತ್ತರ ಕರ್ನಾಟಕದ ಶಾಸಕರು ಗೋವಾದಲ್ಲಿ ಹನಿಟ್ರ್ಯಾಪ್​ಗೆ ಒಳಗಾಗುವ ಸಾಧ್ಯತೆ
ಇನ್ನು ಘಟನೆ ಬೆಳಕಿಗೆ ಬಂದ ಎರಡು ದಿನದ ನಂತರ ಅನಾಮಿಕರ ಹೆಸರಿನಲ್ಲಿ, ಇದು ಟ್ರೈಲರ್ ಮಾತ್ರ ಎಂದು ಬೆದರಿಕೆ ಪತ್ರ ಕಾರ್​ನಲ್ಲಿ ಸಿಕ್ಕಿತ್ತು. ಹೀಗಾಗಿ ತನಿಖೆ ಕೈಗೆತ್ತಿಕೊಂಡಿದ್ದ ಎಟಿಎಸ್ ಉಗ್ರಗಾಮಿ ಸಂಘಟನೆಗಳ ಮೇಲೆ ಅನುಮಾನ ವ್ಯಕ್ತಪಡಿಸಿತ್ತು. ಇಷ್ಟೇ ಅಲ್ಲದೇ ಜೈಷೇ ಉಲ್ ಹಿಂದ್ ಎನ್ನುವ ಸಂಘಟನೆ ಘಟನೆ ಹೊಣೆ ಹೊತ್ತಿಕೊಂಡಿರುವುದಾಗಿ ವರದಿಯಾಗಿತ್ತು. ಆದರೆ, ನಂತರ ಆ ಸಂಘಟನೆ ಅದನ್ನು ನಿರಾಕರಿಸಿತ್ತು.
ಅವರ ತಲೆ; ನೈತಿಕತೆ ಅಂತೆ ನೈತಿಕತೆ… ಯಡಿಯೂರಪ್ಪ ಗರಂ

ದೂರು ನೀಡಲು ಹೋದ ಮಹಿಳೆಯ ರೇಪ್ ! ಪೊಲೀಸ್​ ಕಾಂಪೌಂಡಲ್ಲೇ ಅಪರಾಧ ?!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − 4 =
Remember me
