ಮುಂಬೈ:ಭಾರತದ ಹಿರಿಯ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಗಳು ಕೇವಲ ನಾಲ್ಕು ದಿನಗಳಲ್ಲಿ ಹೂಡಿಕೆದಾರರಿಗೆ 45,000 ಕೋಟಿ ರೂ. ಲಾಭ ಮಾಡಿಕೊಟ್ಟಿವೆ. ಮುಖೇಶ್ ಅಂಬಾನಿ ಅವರ ಪ್ರಮುಖ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾರುಕಟ್ಟೆ ಮೌಲ್ಯ 20.13 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಷೇರುಪೇಟೆಯ ಕಾರ್ಯಚಟುವಟಿಕೆಯಲ್ಲಿನ ಏರಿಳಿತದ ನಡುವೆ, ಕಳೆದ ನಾಲ್ಕು ದಿನಗಳಿಂದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಗಳ ಬೆಲೆ ಏರುಪ್ರವೃತ್ತಿಯಲ್ಲಿದೆ.
ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಕಂಪನಿ ಆರ್‌ಐಎಲ್ ಮಾರುಕಟ್ಟೆ ಮೌಲ್ಯ ಕೇವಲ 4 ದಿನಗಳಲ್ಲಿ 45,000 ಕೋಟಿ ರೂ. ಹೆಚ್ಚಳ ಕಂಡಿದೆ. ಕಳೆದ ವಾರ ಷೇರು ಮಾರುಕಟ್ಟೆಯ ಕಾರ್ಯಚಟುವಟಿಕೆಯಲ್ಲಿನ ಏರಿಕೆಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಹೆಚ್ಚಿನ ಲಾಭ ಗಳಿಸಿದೆ.
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಏಳು ಪ್ರಮುಖ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ನಾಲ್ಕು ದಿನಗಳ 67,260 ಕೋಟಿ ರೂ. ಏರಿಕೆಯಾಗಿದೆ. ಕಳೆದ ವಾರ, ಬಿಎಸ್‌ಇ ಸೂಚ್ಯಂಕ 820 ಅಂಕಗಳ ಏರಿಕೆ ದಾಖಲಿಸಿದೆ. ಈ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾರುಕಟ್ಟೆ ಮೌಲ್ಯವು 20.13 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು, ಆರ್ ಐಎಲ್ ಹೂಡಿಕೆದಾರರ ಸಂಪತ್ತು 45,262 ಕೋಟಿ ರೂ. ಹೆಚ್ಚಳವಾಗಿದೆ.
ಇದರೊಂದಿಗೆ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ದೇಶದ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ. ಇದರ ನಂತರ ಸ್ಥಾನದಲ್ಲಿ ಅತಿದೊಡ್ಡ ಐಟಿ ಕಂಪನಿ TCS, HDFC ಬ್ಯಾಂಕ್, ICICI ಬ್ಯಾಂಕ್, ಭಾರ್ತಿ ಏರ್ಟೆಲ್, SBI, ಇನ್ಫೋಸಿಸ್, LIC, ITC ಮತ್ತು HUL ಇವೆ.
ಗುರುವಾರದಂದು ಷೇರುಪೇಟೆ ವಹಿವಾಟಿನ ವೇಳೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಗಳ ಬೆಲೆ ರೂ. 2970 ತಲುಪಿತ್ತು. ಕಳೆದ ವಾರ ಹೋಳಿ ನಿಮಿತ್ತ ಸೋಮವಾರ ಷೇರುಪೇಟೆಗೆ ರಜೆ ಇತ್ತು, ಮಾರ್ಚ್ 29ರ ಶುಕ್ರವಾರ ಗುಡ್​ ಫ್ರೈಡೆ ನಿಮಿತ್ತ ರಜೆ ಇತ್ತು. ಐದು ದಿನಗಳ ಬದಲಾಗಿ ಕೇವಲ ಮೂರು ದಿನಗಳ ಕೆಲಸದ ವಾರದಲ್ಲಿ ಷೇರು ಮಾರುಕಟ್ಟೆಯಲ್ಲಿ ಉತ್ತಮ ಏರಿಕೆ ದಾಖಲಾಗಿದೆ.

ರೂ. 404 ರಿಂದ 24ಕ್ಕೆ ಕುಸಿದ ಬ್ಯಾಂಕ್​ ಷೇರು ಬೆಲೆ: ಈಗ ಮತ್ತೆ ಏರಿಕೆ, ಖರೀದಿಗೆ ಬ್ರೋಕರೇಜ್​ ಸಲಹೆ
ನಾಲ್ಕೇ ವರ್ಷಗಳಲ್ಲಿ ರೂ. 1 ಲಕ್ಷವಾಯ್ತು 1.52 ಕೋಟಿ: 2 ರೂಪಾಯಿಯ ಷೇರು ಹೂಡಿಕೆದಾರರನ್ನು ಕುಬೇರರನ್ನಾಗಿ ಮಾಡಿದ್ದು ಹೇಗೆ?
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one + two =
Remember me
