ನವದೆಹಲಿ:ಮುಖೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಮತ್ತು ಅವರು ತಮ್ಮ ದುಬಾರಿ ಕಾರುಗಳ ಸಂಗ್ರಹಕ್ಕೆ ಹೆಸರುವಾಸಿಯಾಗಿದ್ದಾರೆ. ರೋಲ್ಸ್ ರಾಯ್ಸ್‌ನಿಂದ ಫೆರಾರಿಯವರೆಗೆ, ಅಂಬಾನಿ ಕುಟುಂಬದಲ್ಲಿ ದುಬಾರಿ ಬೆಲೆಯ ಕಾರುಗಳಿವೆ.
2023ರ ಜನವರಿಯಲ್ಲಿ ಅಂಬಾನಿ ನೋಂದಣಿ ಮಾಡಿಸಿದ ರೋಲ್ಸ್‌ ರಾಯ್ಸ್‌ ಕಲ್ಲಿನಾನ್ ಕಾರಿನ ಬರೀ ಪೇಂಟಿಂಗ್ ಕೆಲಸಕ್ಕೆ ಒಂದು ಕೋಟಿ ರೂ. ವ್ಯಯಿಸಲಾಗಿದೆ. ಈ ಕಾರಿನ ಬೆಲೆ ಸುಮಾರು 13.14 ಕೋಟಿ ರೂ. ಎಂದು ಹೇಳಲಾಗಿದೆ. ಅಂದಹಾಗೇ ಇದು ಅಂಬಾನಿ ಕುಟುಂಬಕ್ಕೆ ಸೇರ್ಪಡೆಗೊಳ್ಳುತ್ತಿರುವ ಮೂರನೇ ರೋಲ್ಸ್‌ ರಾಯ್ಸ್‌ ಕಲ್ಲಿನಾನ್ ಕಾರು ಇದಾಗಿದೆ.
ಇದನ್ನೂ ಓದಿ:ಚಿಕಿತ್ಸೆ ನೀಡುವಾಗ ತುಟಿ ಕತ್ತರಿಸಿದ ವೈದ್ಯ; ಮುಂದೇನಾಯ್ತು?…
ರೋಲ್ಸ್‌ ರಾಯ್ಸ್‌ ಕಲ್ಲಿನಾನ್ ಕಾರಿನ ಬೆಲೆ ಸುಮಾರು 13.14 ಕೋಟಿ ರೂ. ಸಾಮಾನ್ಯವಾಗಿ ರೋಲ್ಸ್‌ ರಾಯ್ಸ್‌ ಕುಲ್ಲಿನನ್ ಕಾರಿನ ಬೆಲೆ 6.8 ಕೋಟಿ ರೂ.ನಿಂದ ಪ್ರಾರಂಭವಾಗುತ್ತದೆ. ಆದರೆ, ಪೇಂಟಿಂಗ್ ಜತೆಗೆ ಇತರ ಕಸ್ಟಮೈಸ್ ಕೆಲಸಗಳಿಂದ ಕಾರಿನ ಬೆಲೆ ಹೆಚ್ಚಳವಾಗಿ ಅಂದಾಜು 13.14 ಕೋಟಿ ರೂ. ತಲುಪಿದೆ.
ಇದನ್ನೂ ಓದಿ:ಮೊದಲ ಬಾರಿಗೆ ತಮ್ಮ ಮನೆಯಲ್ಲಿ ವಿದ್ಯುತ್​​ ನೋಡಿದ 70ರ ವೃದ್ಧೆ!
ಕಾರಿನ ವಿಶೇಷತೆ?:
ಈ ಹೊಸ ಕಾರು ಸನ್ ಕಲರ್ ಶೇಡ್ ಹೊಂದಿದ್ದು, ಈ ಬಣ್ಣದ ಪೇಂಟಿಂಗ್​​ಗೆ ಒಂದು ಕೋಟಿ ರೂ. ವೆಚ್ಚವಾಗಿದೆ. ಇನ್ನು ಈ ಕಾರಿನ ನೋಂದಣಿ ಸಂಖ್ಯೆ ‘0001’ ಆಗಿದ್ದು, ಇದಕ್ಕೆ ಕುಟುಂಬವು 12ಲಕ್ಷ ರೂ. ಖರ್ಚು ಮಾಡಿದೆ. ಪ್ರಸಕ್ತ ಇರುವ ಸರಣಿಯಲ್ಲಿ ಎಲ್ಲ ಸಂಖ್ಯೆಗಳಿದ್ದು, ಈ ಕಾರಣಕ್ಕೆ ಅಂಬಾನಿ ಕುಟುಂಬ ಹೊಸ ಸರಣಿಯ ಸಂಖ್ಯೆಯನ್ನು ಆಯ್ಕೆ ಮಾಡಿದೆ. ಅಲ್ಲದೆ, ಇದಕ್ಕೆ ದೊಡ್ಡ ಮೊತ್ತವನ್ನು ವ್ಯಯಿಸಿದೆ ಕೂಡ. ಈ ಕಾರಿನ ನೋಂದಣಿ 2037ರ ಜನವರಿ ತನಕ ಮಾನ್ಯತೆ ಹೊಂದಿದೆ. ಇನ್ನು ಈ ಎಲ್ಲ ಖರ್ಚುಗಳ ಜೊತೆಗೆ 40,000ರೂ. ರಸ್ತೆ ಸುರಕ್ಷತಾ ತೆರಿಗೆಯನ್ನು ಕೂಡ ಪಾವತಿಸಲಾಗಿದೆ.
ಪತಿಯೊಂದಿಗೆ ವಿಚ್ಛೇದನದ ಸುದ್ದಿ!..ಸ್ಪಷ್ಟನೆ ನೀಡಿದ ಬಾಲಿವುಡ್​ ನಟಿ ಆಸಿನ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
