ಮುಂಬೈ:ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ (26) ರಿಲಯನ್ಸ್​ನ ಎರಡು ಸೋಲಾರ್ ಕಂಪನಿಗಳ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಅನಂತ್ ರಿಲಯನ್ಸ್ ಒ2ಸಿ ನಿರ್ದೇಶರಾಗಿ ನೇಮಕವಾಗಿದ್ದರು. ಕಳೆದ ವರ್ಷ ಅವರನ್ನು ಜಿಯೋ ಪ್ಲಾಟ್​ಫಾಮ್್ಸರ್ ಆಡಳಿತ ಮಂಡಳಿಗೆ ಸೇರಿಸಲಾಗಿತ್ತು. ಮುಕೇಶ್ ಅವರ ಇನ್ನಿಬ್ಬರು ಅವಳಿ ಮಕ್ಕಳಾದ ಇಶಾ ಮತ್ತು ಆಕಾಶ್ (29) ಕೂಡ ಜಿಯೋ ಪ್ಲಾಟ್​ಫಾಮ್್ಸರ್ ಆಡಳಿತ ಮಂಡಳಿಯಲ್ಲಿ ಇದ್ದಾರೆ. ಇಶಾ ಮತ್ತು ಆಕಾಶ್ ರಿಲಯನ್ಸ್​ನ ರಿಟೇಲ್ ವೆಂಚರ್ಸ್​ನ ಆಡಳಿತ ಮಂಡಳಿಯ ನಿರ್ದೇಶಕರೂ ಆಗಿದ್ದಾರೆ.
ಅನಂತ್ ನಿರ್ದೇಶಕರಾಗಿರುವ ಒ2ಸಿಯಲ್ಲಿ ಸೌದಿ ತೈಲ ಕಂಪನಿ ಅರಾಮ್ಕೊ ದೊಡ್ಡ ಹೂಡಿಕೆ ಮಾಡಲಿದೆ. ಮುಕೇಶ್ ಅವರ ಮೂರೂ ಮಕ್ಕಳು ರಿಲಯನ್ಸ್ ಇಂಡಸ್ಟ್ರೀಸ್ (ಆರ್​ಐಎಲ್) ಮಹತ್ವದ ಹುದ್ದೆಯಲ್ಲಿದ್ದಾರೆ. ಉತ್ತರಾಧಿಕಾರಿಯಾರು ಎಂಬುದನ್ನು ಮುಕೇಶ್ ಇನ್ನೂ ಹೇಳಿಲ್ಲ. ರಿಲಯನ್ಸ್ ಸಂಸ್ಥಾಪಕ ಧೀರೂಭಾಯ್ ಅಂಬಾನಿ (2002ರಲ್ಲಿ ನಿಧನ) ಉಯಿಲು ಬರೆದಿರಲಿಲ್ಲ. ಅವರ ಮಕ್ಕಳಾದ ಮುಕೇಶ್ ಮತ್ತು ಅನಿಲ್ ನಡುವೆ ಉತ್ತರಾಧಿಕಾರಿಗಾಗಿ ಕಚ್ಚಾಟವಾಗಿತ್ತು. ನಂತರ ಸಂಸ್ಥೆ ಇಬ್ಭಾಗವಾಯಿತು. ಮುಕೇಶ್​ಗೆ ರಿಲಯನ್ಸ್ ತೈಲೋದ್ಯಮ ಸಂಸ್ಥೆಗಳು ಮತ್ತು ಅನಿಲ್​ಗೆ ವಿದ್ಯುತ್, ಹಣಕಾಸು, ದೂರಸಂಪರ್ಕ ಸಂಸ್ಥೆಗಳು ದೊರಕಿದವು.

ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?
‘ಕಪಿಲ್​ದೇವ್’ ವರ್ಗಾವಣೆ, ‘ಬೌಂಡರಿ’ ಮೀರಿದ ಸಂಭ್ರಮ!; ಖಾಕಿ ಖದರಿಗೆ ಮುದುರಿತಾ ಕೋವಿಡ್ ನಿಯಮ?
ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − two =
Remember me
