ಮುಂಬೈ, ಮಾರ್ಚ್ 22:ಭಾರತದ ದೂರಸಂಪರ್ಕ ಕ್ಷೇತ್ರಕ್ಕೆ ನೀಡಿದ ಅಪೂರ್ವ ಕೊಡುಗೆಗಳನ್ನು ಪರಿಗಣಿಸಿ, ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರಿಗೆ ವಾಯ್ಸ್ ಅಂಡ್ ಡೇಟಾದಿಂದ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ.
ಇದನ್ನೂ ಓದಿ:ಮಂಗಳೂರು ಎಕ್ಕೂರಿನಲ್ಲಿ ಎಜೆ ಗ್ರ್ಯಾಂಡ್ ಇಲೈಟ್ ಹೊಟೇಲ್ ಉದ್ಘಾಟನೆ
ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ಅಧ್ಯಕ್ಷ ಮ್ಯಾಥ್ಯೂ ಉಮ್ಮನ್ ಅವರು 2023ನೇ ಇಸವಿಯ “ಪಾಥ್ ಬ್ರೇಕರ್” ಪ್ರಶಸ್ತಿಯನ್ನು ನೀಡಿ, ಗೌರವಿಸಲಾಯಿತು. ಈ ಜಂಟಿ ಗೌರವದ ಮೂಲಕ 5ಜಿ ತಂತ್ರಜ್ಞಾನದ ಶೀಘ್ರ ನಿಯೋಜನೆಯನ್ನು ಮುನ್ನಡೆಸುವಲ್ಲಿ, ಭಾರತದ ತಾಂತ್ರಿಕ ಪ್ರಗತಿಯಲ್ಲಿ ಮಹತ್ವದ ಮೈಲುಗಲ್ಲು ಮುಟ್ಟುವಲ್ಲಿ ಉಮ್ಮನ್ ಅವರ ಪ್ರಮುಖ ಪಾತ್ರವನ್ನು ಇದು ಎತ್ತಿ ತೋರಿಸುತ್ತದೆ.
ಮುಕೇಶ್ ಅಂಬಾನಿಯನ್ನು ಜಿಪಿಯು ಜತೆಗೆ ಹೋಲಿಸಿದ ಮ್ಯಾಥ್ಯೂ ಉಮ್ಮನ್, “ವಾಯ್ಸ್ ಅಂಡ್ ಡೇಟಾದಿಂದ ಮುಕೇಶ್ ಅಂಬಾನಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿರುವುದರಿಂದ ನಮಗೆ ಗೌರವ ದೊರೆತಂತೆ ಆಗಿದೆ. ಅವರ ಪ್ರಭಾವಶಾಲಿ ನಾಯಕತ್ವ, ಟೆಲಿಕಾಂ, ರೀಟೇಲ್ ವ್ಯಾಪಾರ, ಮಾಧ್ಯಮ ಮತ್ತು ಕ್ರೀಡೆಗಳನ್ನು ವ್ಯಾಪಿಸಿದ್ದು, ಸೇರ್ಪಡೆ ಮಿತಿಗಳನ್ನು ತಳ್ಳಿದ್ದು ಮತ್ತು ಎಲ್ಲರಿಗೂ ಕೈಗೆಟಕುವ ಬೆಲೆ ದೊರೆಯುವಂತೆ ಆಗಿದೆ. ಈ ನೀತಿಯು ರಿಲಯನ್ಸ್ ಪ್ರತಿಪಾದಿಸುವ ಎಲ್ಲದರಲ್ಲೂ ಒಳಗೊಂಡಿರುತ್ತದೆ. ಇಂದಿನ ಪರಿವರ್ತಕ ತಂತ್ರಜ್ಞಾನದ ಯುಗದಲ್ಲಿ ಡಿಜಿಟಲ್ ಜಗತ್ತಿನಲ್ಲಿ ಭಾರತದ ಪಾತ್ರವು ಕ್ರಾಂತಿಕಾರಿ ಆಗಲಿದೆ. ಉದ್ಯಮವಾಗಿ ಮತ್ತು ರಾಷ್ಟ್ರವಾಗಿ ನಮ್ಮ ಕೊಡುಗೆಗಳು ಅಗಾಧವಾದದ್ದು. ಈ ಮೂಲಕ ಭಾರತೀಯರ ಭವಿಷ್ಯನ್ನು ಹೆಚ್ಚು ಸಮಾನ ಮತ್ತು ಸುಸ್ಥಿರತೆಯತ್ತ ಸಾಗುತ್ತವೆ,” ಎಂದಿದ್ದಾರೆ.
ಇದನ್ನೂ ಓದಿ:ಧಾರ್ಮಿಕ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ ಸಲ್ಲಿಸಲು ಡಿಸಿ ಸೂಚನೆ
ಮ್ಯಾಥ್ಯೂ ಉಮ್ಮನ್ ಅವರು ತಮ್ಮ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ, ಈ ಮಾನ್ಯತೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ತಾಂತ್ರಿಕ ಪ್ರಗತಿಗೆ ಚಾಲನೆ ನೀಡುವಲ್ಲಿ ಸಹಯೋಗದ ಪ್ರಮುಖ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ಇದೇ ಉದ್ಯಮದಲ್ಲಿ ಇರುವಂಥ ಇಬ್ಬರು ಗೌರವಾನ್ವಿತರಾದ ನೀರಜ್ ಮಿತ್ತಲ್ ಮತ್ತು ಗೋಪಾಲ್ ವಿಠ್ಠಲ್ ಅವರೊಂದಿಗೆ ನಾನು ಪಡೆದ ಈ ಗೌರವದಿಂದ ಹೆಚ್ಚು ಸಂತೋಷವಾಗಿದೆ. ಇನ್ನು ಅವರು ಮಾಡುವುದಕ್ಕೆ ಸಾಧ್ಯವಾಗುವ ಎಲ್ಲ ಸಾಧನೆಗೂ ಅಭಿನಂದಿಸಲು ಬಯಸುತ್ತೇನೆ,” ಎಂದರು.
ಕೃತಕ ಬುದ್ಧಿಮತ್ತೆ (ಎಐ) ಮತ್ತು ಭದ್ರತೆಯ ಮಿತಿಗಳನ್ನು ದಾಟುವ ಜಿಪಿಯು ಮತ್ತು ಕ್ವಾಂಟಮ್ ಕಂಪ್ಯೂಟ್‌ನಂತಹ ಬೆಳವಣಿಗೆಯಿಂದ ಮುನ್ನಡೆಯುವ ಅದರ ನಿರಂತರ ವಿಕಾಸವನ್ನು ಗಮನಿಸಿ, ಸಮಾಜದ ಮೇಲೆ ಆಗುತ್ತಿರುವ ತಂತ್ರಜ್ಞಾನದ ಪರಿವರ್ತಕ ಪರಿಣಾಮವನ್ನು ಮ್ಯಾಥ್ಯೂ ಉಮ್ಮನ್ ಅವರು ಗಮನ ಸೆಳೆದರು. ಸಮಾಜದ ಎಲ್ಲ ವಿಭಾಗಗಳನ್ನು ಜವಾಬ್ದಾರಿಯುತವಾಗಿ ಮತ್ತು ಸುಸ್ಥಿರವಾಗಿ ಮೇಲಕ್ಕೆತ್ತಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಪ್ರಾಮುಖ್ಯವನ್ನು ಅವರು ಒತ್ತಿ ಹೇಳಿದರು.
ಇದನ್ನೂ ಓದಿ:ನಾಳೆಯಿಂದ ಸಿಇಟಿ, ನೀಟ್ ಉಚಿತ ಕಾರ್ಯಾಗಾರ
ವಾಯ್ಸ್ ಅಂಡ್ ಡೇಟಾ ಪ್ರಶಸ್ತಿ ಸಮಾರಂಭದಲ್ಲಿ ನೆಟ್‌ವರ್ಕ್ ಮೂಲಸೌಕರ್ಯ, ಬಹುಭಾಷಾ ಇಂಟರ್ನೆಟ್, ಸಂವಹನ ವೇದಿಕೆ, ವ್ಯಾಪಾರ ಪ್ರಕ್ರಿಯೆ ನಾವೀನ್ಯತೆ, ನೆಟ್‌ವರ್ಕ್ ಸೇವೆಗಳು ಮತ್ತು ಐಒಟಿ ಸೇರಿ ವಿವಿಧ ವಿಭಾಗಗಳಲ್ಲಿ ಜಿಯೋ ಆರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಭಾರತದ ದೂರಸಂಪರ್ಕ ವಲಯದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಖಾತ್ರಿ ಪಡಿಸಿಕೊಂಡಿದೆ.
‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
