ಜೈಪುರ:ರಾಜಸ್ಥಾನ ಮಾಜಿ ಉಪಮುಖ್ಯಮಂತ್ರಿ ಸಚಿನ್​ ಪೈಲಟ್​ ಮತ್ತು ಅವರ ಬೆಂಬಲಿಗರಾದ 18 ಶಾಸಕರಿಗೆ ಸ್ಪೀಕರ್​ ಸಿ.ಪಿ.ಜೋಶಿ ಅವರು ಅನರ್ಹತೆಯ ನೋಟಿಸ್ ಕಳಿಸಿದ್ದಾರೆ.
ಸ್ಪೀಕರ್ ಕಳಿಸಿದ ಅನರ್ಹತೆಯ ನೋಟಿಸ್​ ಪ್ರಶ್ನಿಸಿ ಸಚಿನ್ ಪೈಲಟ್​ ಹಾಗೂ ಅವರ ಬಣ ರಾಜಸ್ಥಾನ ಹೈಕೋರ್ಟ್​ ಮೆಟ್ಟಿಲೇರಿದೆ.ಕೇಂದ್ರ ಸರ್ಕಾರದ ಮಾಜಿ ಅಟರ್ನಿ ಜನರಲ್​ ಮುಕುಲ್​ ರೋಹಟಗಿ ಮತ್ತು ಹಿರಿಯ ವಕೀಲ ಹರೀಶ್​ ಸಾಳ್ವೆ ಅವರು ಸಚಿನ್​ ಪೈಲಟ್​ ಮತ್ತವರ ಬಣದ ಪರ ವಕಾಲತ್ತು ವಹಿಸಲಿದ್ದಾರೆ.
ಇತ್ತ ಕಾಂಗ್ರೆಸ್​ ಹಿರಿಯ ನಾಯಕ, ನ್ಯಾಯವಾದಿ ಅಭಿಷೇಕ್​ ಮನು ಸಿಂಘ್ವಿ ಅವರು ರಾಜಸ್ಥಾನ ಅಸೆಂಬ್ಲಿ ಸ್ಪೀಕರ್ ಅವರ ಪರ ಹೈಕೋರ್ಟ್​ನಲ್ಲಿ ವಾದ ಮಂಡಿಸಲಿದ್ದಾರೆ. ಅಂದರೆ ಹೈಕೋರ್ಟ್​ನಲ್ಲಿ ಮುಕುಲ್​ ರೋಹಟಗಿ ಮತ್ತು ಅಭಿಷೇಕ್​ ಮನು ಸಿಂಘ್ವಿ ನಡುವೆ ನೇರ ಜಟಾಪಟಿ ನಡೆಯಲಿದೆ.
ತಮಗೆ ಕಳಿಸಿರುವ ಅನರ್ಹತೆ ನೋಟಿಸ್​ ಪ್ರಶ್ನಿಸಿ ಸಚಿನ್ ಪೈಲಟ್​ ಬಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ ನಡೆದಿದೆ. ಈ ವೇಳೆ ತಾವು ಸಲ್ಲಿಸಿದ ಅರ್ಜಿಯನ್ನು ತಿದ್ದುಪಡಿ ಮಾಡಲು ಸಮಯಾವಕಾಶ ನೀಡಬೇಕು ಎಂದು ಸಚಿನ್​ ಪೈಲಟ್​ ಬಣ ಮನವಿ ಮಾಡಿದೆ. ಅದನ್ನು ಹಿರಿಯ ವಕೀಲ ಸುರೇಶ್​ ಸಾಳ್ವೆ ಇಂದು ಕೋರ್ಟ್​ಗೆ ತಿಳಿಸಿದ್ದರು. ಅದಕ್ಕೆ ಹೈಕೋರ್ಟ್​ ಕೂಡ ಅಸ್ತು ಎಂದಿದ್ದು, ತಿದ್ದುಪಡಿಗೆ ಸಮಯ ನೀಡಿದೆ.ಇದನ್ನೂ ಓದಿ:ದ್ಯುತಿಗಿಲ್ಲ ಪ್ರಾಯೋಜಕರ ಕೊರತೆ, ಕಾರು ಮಾರಾಟಕ್ಕೆ ರೈಲು ಬಿಟ್ಟ ಅಥ್ಲೀಟ್​!
ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರು ಕರೆದಿದ್ದ ಎರಡೂ ಶಾಸಕಾಂಗ ಪಕ್ಷದ ಸಭೆಗೆ ಸಚಿನ್​ ಪೈಲಟ್ ಮತ್ತು ಅವರ ಬೆಂಬಲಿಗರು ಗೈರಾಗಿದ್ದರು. ಅದರ ಬೆನ್ನಲ್ಲೇ ಮಂಗಳವಾರ ಸ್ಪೀಕರ್​ ಅವರಿಗೆ ಅನರ್ಹತೆಯ ನೋಟಿಸ್ ಕಳಿಸಿದ್ದರು.ಸಚಿನ್ ಪೈಲಟ್​ ಅವರು ಕಾನೂನು ಹೋರಾಟಕ್ಕೆ ಮೊದಲು ಅಭಿಷೇಕ್​ ಮನು ಸಿಂಘ್ವಿಯವರನ್ನೇ ಕೇಳಿಕೊಂಡಿದ್ದರು. ಆದರೆ ಅವರು ಅದಾಗಲೇ ಸ್ಪೀಕರ್​ ಪರ ವಕಾಲತ್ತಿಗೆ ಒಪ್ಪಿಕೊಂಡಾಗಿತ್ತು. ಇದೀಗ ಮುಕುಲ್​ ರೋಹಟಗಿ ಅವರು ಆಖಾಡಕ್ಕೆ ಇಳಿದಿದ್ದಾರೆ. (ಏಜೆನ್ಸೀಸ್​)
2 ದಿನಗಳ ಹಿಂದೆ ಸಚಿನ್​ ಪೈಲಟ್​ ಮತ್ತು ಅಭಿಷೇಕ್​ ಮನು ಸಿಂಘ್ವಿ ಫೋನ್​ನಲ್ಲಿಯೇ ದೊಡ್ಡದಾಗಿ ನಕ್ಕಿದ್ದು ಏಕೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
