ಕಾಬುಲ್:ಅಫ್ಘನ್​ನಲ್ಲಿ ಮೂರು ವಾರಗಳ ಸರ್ಕಾರ ರಚನೆಯ ಕಸರತ್ತಿನ ಬಳಿಕ ತಾಲಿಬಾನ್ ಮಂಗಳವಾರ ತಾತ್ಕಾಲಿಕ ಸರ್ಕಾರವನ್ನು ರಚಿಸಿರುವುದಾಗಿ ಘೋಷಿಸಿದೆ. ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್ ನಾಯಕತ್ವದಲ್ಲಿ ಈ ಸರ್ಕಾರ ರಚನೆ ಆಗುತ್ತಿದೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ತಿಳಿಸಿದ್ದಾನೆ.
ತಾಲಿಬಾನ್​ನ ನಾಯಕತ್ವ ಕೌನ್ಸಿಲ್ ಅನ್ನು ‘ರೆಹ್​ಬಾರಿ ಶುರಾ’ ಎಂದು ಗುರುತಿಸಲಾಗುತ್ತಿದೆ. ಮುಲ್ಲಾ ಅಬ್ದುಲ್ಲ ಘನಿ ಬರದಾರ್ ಮತ್ತು ಮೌಲ್ವಿ ಹನಾಫಿ ಡೆಪ್ಯೂಟಿಗಳಾಗಿ ಕೆಲಸ ನಿರ್ವಹಿಸಲಿದ್ದಾರೆ. ಹೊಸ ಸರ್ಕಾರ ಬುಧವಾರ ಪದಗ್ರಹಣ ಮಾಡುವ ಸಾಧ್ಯತೆ ಇದೆ.
ತಾಲಿಬಾನ್​ನ ನಿರ್ಧಾರ ತೆಗೆದುಕೊಳ್ಳುವ ರೆಹ್​ಬಾರಿ ಶುರಾ ಅಥವಾ ನಾಯಕತ್ವ ಸಮಿತಿಯಲ್ಲಿ ಮುಲ್ಲಾ ಹಸನ್ ಅಖುಂಡ್ ಪ್ರಭಾವಿ ನಾಯಕನಾಗಿದ್ದು, ತಾಲಿಬಾನ್ ಹುಟ್ಟಿದ ಕಂದಹಾರ್ ಮೂಲದ ವ್ಯಕ್ತಿ. ಸಶಸ್ತ್ರ ಚಳವಳಿಯ ಸ್ಥಾಪಕರಲ್ಲಿ ಹಸನ್ ಅಖುಂಡ್ ಒಬ್ಬ. ಅಫ್ಘನ್​ನ ಹೊಸ ಸರ್ಕಾರ ಅಥವಾ ರಯೀಸ್ ಏ ಜಮ್ಹೂರ್ ಅಥವಾ ರಯೀಸ್ ಉಲ್ ವಾಜರಾದ ಮುಖ್ಯಸ್ಥರ ಸ್ಥಾನಕ್ಕೆ ಹಸನ್ ಅಖುಂಡ್ ಹೆಸರು ನಾಮನಿರ್ದೇಶನವಾಗಿತ್ತು.
ಅಮೀರುಲ್ ಮೊಮೀನ್ ಶೇಖ್ ಹಿಬತುಲ್ಲಾ ಅಖುಂಡ್​ರೆದಾ ಸ್ವತಃ ಮುಲ್ಲಾ ಹಸನ್ ಅಖುಂಡ್ ಅನ್ನು ರಯೀಸ್ ಏ ಜಮ್ಹೂರ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿರುವುದು ಮಹತ್ವದ ಬೆಳವಣಿಗೆ. ರೆಹ್​ಬಾರಿ ಶುರಾದ ಮುಖ್ಯಸ್ಥನಾಗಿ ಮುಲ್ಲಾ ಹಸನ್ ಅಖುಂಡ್ 20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಉತ್ತಮ ಛಾಪು ಹೊಂದಿದ ವ್ಯಕ್ತಿ. ಶೇಖ್ ಹಿಬತುಲ್ಲಾ ಅಖುಂಡ್​ರೆದಾ ಆಪ್ತರೂ ಆಗಿರುವ ಹಸನ್ ಅಖುಂಡ್ ಸೇನಾ ಹಿನ್ನೆಲೆ ಇಲ್ಲದ ಧಾರ್ವಿುಕ ನಾಯಕ ಹಸನ್ ತನ್ನ ನಡವಳಿಕೆ ಮತ್ತು ಧಾರ್ವಿುಕ ಬದ್ಧತೆಯ ಕಾರಣಕ್ಕೆ ಸಮುದಾಯದಲ್ಲಿ ಗುರುತಿಸಿಕೊಂಡಾತ ಎಂದು ತಾಲಿಬಾನ್​ನ ಹಿರಿಯ ನಾಯಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
30 ಮೂಲ ತಾಲಿಬನಿಗಳಲ್ಲೊಬ್ಬ:ಸರ್ಕಾರದ ಮುಖ್ಯಸ್ಥನಾಗಿ ನಿಯೋಜಿತನಾಗಿರುವ ಮುಲ್ಲಾ ಹಸನ್ ಅಖುಂಡ್, ವಿಶ್ವಶಂಸ್ಥೆ ಗುರುತಿಸಿರುವ 30 ಮೂಲ ತಾಲಿಬಾನಿಗಳ ಪೈಕಿ ಒಬ್ಬ. 2001ರಲ್ಲಿ ಕಂದಹಾರ್​ನ ಗವರ್ನರ್ ಆಗಿದ್ದ. ಕೌನ್ಸಿಲ್ ಆಫ್ ಮಿನಿಸ್ಟರ್ಸ್​ನ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದ. ರಕ್ಷಣೆ, ಗುಪ್ತಚರ, ಗೃಹ, ಸುಪ್ರೀಂಕೋರ್ಟ್, ಸಂಸ್ಕೃತಿ ಮತ್ತು ಸಂವಹನ, ಅಕಾಡೆಮಿ ಮುಂತಾದ ಹೊಣೆಗಾರಿಕೆಗಳನ್ನು ನಿಭಾಯಿಸಿದ ಅನುಭವಿ.
ಮುತ್ತಾಖಿ ವಿದೇಶಾಂಗ ಸಚಿವ:ಮುಲ್ಲಾ ಆಮೀರ್ ಖಾನ್ ಮುತ್ತಾಖಿ ಅಫ್ಘಾನಿಸ್ತಾನದ ವಿದೇಶಾಂಗ ಸಚಿವನಾಗಿ ಕೆಲಸ ನಿರ್ವಹಿಸಲಿದ್ದಾನೆ. ಮುಖಂಡರಲ್ಲಿ ಇನ್ನು ಕೆಲವು ಭಿನ್ನಮತ ಉಳಿದಿದ್ದು, ಅಧಿಕಾರ ಹಂಚಿಕೆ ಪೂರ್ಣಗೊಳ್ಳಬೇಕೆಂದು ತಾಲಿಬಾನ್ ತಿಳಿಸಿದೆ.
ಜಬೀವುಲ್ಲಾಗೆ ಎರಡು ಹೊಣೆಗಾರಿಕೆ:ಅಫ್ಘನ್​ನ ಹೊಸ ಸರ್ಕಾರಕ್ಕೆ ಸಂಬಂಧಿಸಿದ ಹಿಂದಿನ ಸುದ್ದಿ ಪ್ರಕಾರ, ವಕ್ತಾರ ಜಬೀವುಲ್ಲಾ ಮುಜಾಹಿದ್ ಹೊಸ ಸರ್ಕಾರದಲ್ಲಿ ಮಾಹಿತಿ ಸಚಿವರಾಗಿ ಇರಲಿದ್ದಾನೆ ಎಂದು ಹೇಳಲಾಗಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಆತ ಮುಲ್ಲಾ ಹಸನ್ ಅಖುಂಡ್ ವಕ್ತಾರನಾಗಿ ಮುಂದುವರಿಯಲಿದ್ದಾನೆ. ಅಲ್ಲದೆ, ಡೆಪ್ಯೂಟಿ ಮಾಹಿತಿ ಸಚಿವನಾಗಿಯೂ ಕೆಲಸ ಮಾಡಲಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪೂರ್ವಪ್ರಾಂತ್ಯಗಳು ಹಕ್ಕಾನಿಗೆ:ಹಕ್ಕಾನಿ ಜಾಲದ ಮುಖ್ಯಸ್ಥ ಸಿರಾಜುದ್ದೀನ್ ಹಕ್ಕಾನಿ ಗೃಹಸಚಿವನಾಗಿದ್ದು, ಪೂರ್ವ ಪ್ರಾಂತ್ಯಗಳ ಗವರ್ನರ್​ಗಳನ್ನು ನೇಮಕ ಮಾಡುವ ಅಧಿಕಾರ ಹೊಂದಿದ್ದಾನೆ. ಪಕ್ತಿಯಾ, ಪಕ್ತಿಕಾ, ಖೋಸ್ಟ್, ಗಾರ್ದೆಝå್, ನನ್​ಗರ್​ಹಾರ್, ಕುನಾರ್ ಪ್ರಾಂತ್ಯಗಳು ಹಕ್ಕಾನಿ ಹಿಡಿತದಲ್ಲಿರಲಿದೆ.
ಕಾಬುಲ್​ನಲ್ಲಿ ಪಾಕ್ ವಿರೋಧಿ ರ‍್ಯಾಲಿ:ಅಫ್ಘನ್ ರಾಜಧಾನಿ ಕಾಬುಲ್​ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಎದುರು ಪಾಕ್ ವಿರೋಧಿ ರ‍್ಯಾಲಿ ಮಂಗಳವಾರ ನಡೆಯಿತು. 70ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆ ನಡೆಸಿದರು. ತಾಲಿಬಾನಿಗಳ ಜತೆಗೆ ನಿಕಟ ಸಂಪರ್ಕ ಹೊಂದಿದ ಪಾಕಿಸ್ತಾನದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ಪಾಕ್ ವಿರುದ್ಧ ಘೋಷಣೆ ಕೂಗಿದರು. ಅವರನ್ನು ಚದುರಿಸಲು ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿದರು. ಹಲವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮುಲ್ಲಾ ಯಾಕೂಬ್ ರಕ್ಷಣಾ ಸಚಿವ:ತಾಲಿಬಾನ್ ಸಂಸ್ಥಾಪಕ ಮುಲ್ಲಾ ಮೊಹಮ್ಮದ್ ಒಮರ್ ಪತ್ರ ಮುಲ್ಲಾ ಯಾಕೂಬ್ ಅಫ್ಘನ್​ನ ರಕ್ಷಣಾ ಸಚಿವ. ಮದರಸಾದಲ್ಲಿ ಶೇಖ್ ಹಿಬತುಲ್ಲಾ ಅಖುಂಡ್​ರೆದಾ ಅವರ ವಿದ್ಯಾರ್ಥಿಯಾಗಿದ್ದ ವ್ಯಕ್ತಿ ಯಾಕೂಬ್, ಅವರಿಗೆ ಆಪ್ತನೂ ಹೌದು. ಮುಲ್ಲಾ ಮೊಹಮ್ಮದ್ ಒಮರ್ ಕಾರಣಕ್ಕೆ ಯಾಕೂಬ್ ಮೇಲೆ ಹಿಬತುಲ್ಲಾಗೆ ವಿಶೇಷ ಗೌರವ. ಹೀಗಾಗಿ ಯಾಕೂಬ್​ನನ್ನು ತಾಲಿಬ್​ಗಳ ಸಶಸ್ತ್ರ ಪಡೆಯ ಕಮಾಂಡರ್ ಆಗಿ ನೇಮಕ ಮಾಡಲಾಗಿತ್ತು.
ಕಳೆದ ಎರಡು ದಶಕದಲ್ಲಿ ಅಮೆರಿಕ ಮತ್ತು ಮಿತ್ರ ಪಡೆ ಅಫ್ಘನ್ ಜನರಿಗಾಗಿ ಕೋಟ್ಯಂತರ ಡಾಲರ್ ವ್ಯಯಿಸಿ ಡೇಟಾ ಬೇಸ್ ಅನ್ನು ನಿರ್ವಿುಸಿದೆ. ಈ ಟೂಲ್ ಈಗ ತಾಲಿಬಾನ್ ನಿಯಂತ್ರಣಕ್ಕೆ ಹೋಗಿರುವ ಶಂಕೆ ಇದ್ದು, ಅದರ ದುರ್ಬಳಕೆಯ ಆತಂಕವೂ ಹೆಚ್ಚಾಗಿದೆ. ಒಳ್ಳೆಯ ಉದ್ದೇಶದೊಂದಿಗೆ ಅಭಿವೃದ್ಧಿ ಪಡಿಸಿದ ಡೇಟಾ ಟೂಲ್, ಅಫ್ಘನ್​ನ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಎಲ್ಲ ಅಂಶಗಳೂ ಇವೆ. 40 ವರ್ಷಗಳ ಹಿಂದಿನ 7,00,000ಗೂ ಹೆಚ್ಚಿನ ಸಶಸ್ತ್ರ ಯೋಧರ ಡೇಟಾ ಸಂಗ್ರಹವಾಗಿದೆ. ಇದರಲ್ಲಿ ಅವರ ಜನ್ಮದಿನಾಂಕ, ಫೋನ್​ನಂಬರ್, ಬೆರಳಚ್ಚು, ಐರಿಸ್, ಮುಖದ ಸ್ಕಾ್ಯನ್ ವಿವರಗಳಿವೆ. ಇದೇ ರೀತಿ, 90 ಲಕ್ಷ ಅಫ್ಘನ್ನರ ಐರಿಸ್ ಮತ್ತು ಬೆರಳಚ್ಚಿನ ಡೇಟಾ ಕೂಡ ನ್ಯಾಷನಲ್ ಸ್ಟಾಟಿಸ್ಟಿಕ್ಸ್ ಆಂಡ್ ಇನ್ಪೋಮೇಶನ್ ಏಜೆನ್ಸಿ ಬಳಿ ಇದೆ. ಈ ಬಯೋಮೆಟ್ರಿಕ್ ಡೇಟಾವನ್ನು ಇತ್ತೀಚೆಗೆ ಚಾಲನಾ ಪರವಾನಗಿ ಮತ್ತು ನಾಗರಿಕ ಸೇವೆ ಮತ್ತು ವಿಶ್ವವಿದ್ಯಾಲಯದ ಎಂಟ್ರನ್ಸ್ ಎಕ್ಸಾಂಗೆ ಬಳಸಲಾಗುತ್ತಿದೆ. ಮತದಾರರ ಡೇಟಾ ಕೂಡ ಇದೇ ರೀತಿ ಸಂಗ್ರಹವಾಗಿದೆ ಎಂದು ಈ ಪ್ರಾಜೆಕ್ಟ್ ಮೇಲೆ ಕೆಲಸ ಮಾಡಿದವರು ತಿಳಿಸಿದ್ದಾರೆ.
ತಾಲಿಬ್​ಗಳ ಮೆಲೆ ವಾಯುದಾಳಿ:ಪಂಜ್​ಶೀರ್ ಪ್ರಾಂತ್ಯವನ್ನು ವಶಪಡಿಸಲು ಮುತ್ತಿಗೆ ಹಾಕಿದ ತಾಲಿಬ್​ಗಳ ಮೇಲೆ ಅಹ್ಮದ್ ಮಸೂದ್ ನೇತೃತ್ವದ ನ್ಯಾಷನಲ್ ರೆಸಿಸ್ಟನ್ಸ್ ಫೋರ್ಸ್ ಮಂಗಳವಾರ ವಾಯುದಾಳಿ ನಡೆಸಿದೆ. ಅಪರಿಚಿತ ಸೇನಾ ವಿಮಾನಗಳು ಈ ದಾಳಿ ನಡೆಸಿದ್ದವು. ಇದರಿಂದ ತಾಲಿಬಾನಿಗಳಿಗೆ ಆಗಿರುವ ನಷ್ಟದ ವಿವರ ಇನ್ನೂ ಬಹಿರಂಗವಾಗಿಲ್ಲ. ಪಂಜ್​ಶೀರ್ ಅನ್ನು ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಘೋಷಿಸಿದ ಮಾರನೇ ದಿನ ಈ ದಾಳಿ ನಡೆದಿದೆ. ತಾಲಿಬಾನ್ ಹೇಳಿಕೆ ನಿರಾಧಾರ ಎಂಬುದನ್ನು ಸಾಬೀತುಪಡಿಸುವಂತೆ ಈ ದಾಳಿ ಆಗಿರುವುದು ಗಮನಾರ್ಹ ಎಂದು ವರದಿ ತಿಳಿಸಿದೆ.
ಬಲಿಯಾದವರ ಸ್ಮರಿಸಿದ ತಾಲಿಬಾನ್:ಹೊಸ ಹಂಗಾಮಿ ಸರ್ಕಾರ ರಚನೆ ಘೋಷಿಸಿದ ಬೆನ್ನಿಗೆ, ಕಳೆದ 20 ವರ್ಷಗಳ ಅವಧಿಯಲ್ಲಿ ಅಮೆರಿಕ ಮತ್ತು ಮಿತ್ರ ಪಡೆಗಳ ಗುಂಡಿಗೆ ಬಲಿಯಾದ ತಾಲಿಬಾನಿಗಳನ್ನು ತಾಲಿಬಾನ್ ಸ್ಮರಿಸಿದೆ. ಹುತಾತ್ಮ ತಾಲಿಬಾನಿಗಳಿಗೆ ಹೊಸ ಸಚಿವ ಸಂಪುಟ ಹಂಗಾಮಿ ಪ್ರಧಾನಿ ಮುಲ್ಲಾ ಹಸನ್ ಅಖುಂಡ್ ನೇತೃತ್ವದಲ್ಲಿ ಗೌರವ ನಮನ ಸಲ್ಲಿಸಿದೆ ಎಂದು ವಕ್ತಾರ ಜಬೀವುಲ್ಲಾ ತಿಳಿಸಿದ್ದಾನೆ.
ಏರ್​ಬೇಸ್ ಕುರಿತ ಸುದ್ದಿ ಸುಳ್ಳು:ಅಫ್ಘನ್​ನ ಬಗ್ರಾಮ್ ವಾಯುನೆಲೆಯನ್ನು ತಾಲಿಬಾನ್ ಚೀನಾಕ್ಕೆ ಒಪ್ಪಿಸುತ್ತಿದೆ ಎಂಬ ಸುದ್ದಿ ಪ್ರಸಾರವಾಗಿದೆ. ಆದರೆ, ಈ ಸುದ್ದಿ ಸುಳ್ಳು ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್​ಬಿನ್ ಹೇಳಿದ್ದಾರೆ. ಈ ಏರ್​ಬೇಸ್ ಅನ್ನು ಅಮೆರಿಕ ತನ್ನ ಪ್ರಮುಖ ವಾಯುನೆಲೆಯನ್ನಾಗಿ ಬಳಸಿಕೊಂಡಿತ್ತು.
ಪತ್ರಕರ್ತರನ್ನು ಬಂಧಿಸಿದ್ದ ತಾಲಿಬಾನಿಗಳು:ಕಾಬುಲ್​ನಲ್ಲಿ ಪಾಕ್ ರಾಯಭಾರ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆಯನ್ನು ವರದಿ ಮಾಡಲು ಆಗಮಿಸಿದ್ದ ಪತ್ರಕರ್ತರು ಮತ್ತು ಕ್ಯಾಮೆರಾಮನ್​ಗಳನ್ನು ತಾಲಿಬಾನ್ ಬಂಧಿಸಿದ್ದು, ಮೂರು ತಾಸಿನ ನಂತರ ಬಿಡುಗಡೆ ಮಾಡಿದೆ. ಅವರಿಂದ ಕ್ಯಾಮೆರಾ ಮತ್ತು ಇತರೆ ವರದಿಗಾರಿಕೆಯ ಉಪಕರಣಗಳನ್ನು ವಶಪಡಿಸಿಕೊಂಡಿದೆ. 500ರಷ್ಟು ಅಫ್ಘನ್ನರು ಬೀದಿಗಿಳಿದು ಪ್ರತಿಭಟನಾ ಮೆರವಣಿಗೆ ನಡೆಸಿದಾಗ, ತಾಲಿಬಾನಿಗಳು ಅದಕ್ಕೆ ಅನುಮತಿ ನೀಡಿದ್ದರು. ಆದರೆ, ಝುನ್​ಬಕ್ ಸ್ಕೆ್ವೕರ್ ಸಮೀಪ ಬಂದಾಗ, ತಾಲಿಬ್​ಗಳು ಅನಿರೀಕ್ಷಿತವಾಗಿ ಗಾಳಿಯಲ್ಲಿ ಗುಂಡು ಹಾರಿಸಿದರು. ಅಲ್ಲದೆ, ಪ್ರತಿಭಟನಾಕಾರರಿಗೆ ಲಾಠಿ ಪ್ರಹಾರ ನಡೆಸಿದರು ಎಂದು ಟೊಲೊ ನ್ಯೂಸ್ ವರದಿ ಮಾಡಿದೆ. ಕ್ಷಮೆ ಕೋರುವಂತೆ ನೆಲಕ್ಕೆ ನನ್ನ ಮೂಗನ್ನು ಉಜ್ಜಿದರು. ಅಫ್ಘನ್​ನಲ್ಲಿ ಪತ್ರಿಕಾ ವೃತ್ತಿ ಕಡು ಕಷ್ಟದಾಯ ಎಂದು ಬಂಧನದಿಂದ ಬಿಡುಗಡೆಯಾದ ಪತ್ರಕರ್ತ ಹೇಳಿದ್ದಾರೆ.
ಅಜ್ಜ-ಅಜ್ಜಿಯನ್ನು ನೋಡಲು ಬೆಂಗ್ಳೂರಿಂದ ಕೊಡಗಿಗೆ ನಡೆದೇ ಹೊರಟ ಬಾಲಕಿ; 30 ಕಿ.ಮೀ. ನಡೆದು ಸುಸ್ತಾಗಿ 15 ದಿನಗಳ ಬಳಿಕ ಸಿಕ್ಕಳು..

ಇವಳು ಊರಿನವರ ನಿದ್ದೆ ಕೆಡಿಸಿದ ಮಹಿಳೆ; 40 ವರ್ಷಗಳಿಂದ ನಿದ್ರೆಯನ್ನೇ ಮಾಡಿಲ್ವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
