ನವದೆಹಲಿ:ರಾಷ್ಟ್ರರಾಜಧಾನಿಯಲ್ಲಿ ಸಂಸದರ ವಸತಿ ಸೌಕರ್ಯಕ್ಕಾಗಿ ನಿರ್ಮಿಸಿರುವ ಬಹುಮಹಡಿಯ ಫ್ಲಾಟ್​ ಕಟ್ಟಡವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. 80 ವರ್ಷ ಹಳೆಯ ಬಂಗಲೆಗಳ ಜಾಗದಲ್ಲಿ ಈ 76 ಮಹಡಿಯ ಫ್ಲ್ಯಾಟ್​ಗಳ ಕಟ್ಟಡ ತಲೆಎತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಲೋಕಸಭೆ ಕಲಾಪದ ಮೂಲಕ ಗರಿಷ್ಠ ಮಟ್ಟದ ಫಲ ಉಂಟಾಗಿದ್ದು, ದೇಶದಲ್ಲಿ ಐತಿಹಾಸಿಕವೆನಿಸುವ ಅಭಿವೃದ್ಧಿ ಕಾರ್ಯಗಳು ನಡೆಯತೊಡಗಿವೆ. ಬದಲಾವಣೆಗಳು ಆಗತೊಡಗಿವೆ ಎಂದು ಹೇಳಿದರು.
ಇದನ್ನೂ ಓದಿ:ಲವ್​ ಜಿಹಾದ್ ಕಾನೂನು- ವಿವಾಹದ ಹಿಂದಿನ ಪಿತೂರಿ ತಡೆಯುವ ಉದ್ದೇಶದ್ದು ಬಿಜೆಪಿ ನಾಯಕ ವಿಜಯವರ್ಗೀಯ
ಲೋಕಸಭೆಯ 16 ಮತ್ತು 18 ನೇ ಅವಧಿ (2014-29) ಯನ್ನು ಹದಿಹರೆಯಕ್ಕೆ ಹೋಲಿಸಿದ ಅವರು, ದೇಶವೂ ಈಗ ಹದಿಹರೆಯದಲ್ಲಿದ್ದು, ಭವಿಷ್ಯ ರೂಪಿಸಿಕೊಳ್ಳುತ್ತಿದೆ. ಆತ್ಮನಿರ್ಭರ ಅಭಿಯಾನ, ಆರ್ಥಿಕ ಪ್ರಗತಿ ಹೀಗೆ ಹಲವು ವಿಚಾರಗಳಲ್ಲಿ ದೇಶಕ್ಕಾಗಿ ನಾವು ಸಾಧಿಸಬೇಕಾದ್ದು ಬಹಳಷ್ಟಿದೆ ಎಂದು ಮೋದಿ ವಿವರಿಸಿದರು. (ಏಜೆನ್ಸೀಸ್)
ಡಿಸೆಂಬರ್ ನಲ್ಲಿ ಶಾಲೆ ತೆರೆಯುವುದು ಸೂಕ್ತವಲ್ಲ: ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ಶಿಫಾರಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 7 =
Remember me
