ನವದೆಹಲಿ:ಫೇಸ್​ಬುಕ್​ ಸಂಸ್ಥೆಯ ಮಾಲೀಕತ್ವದ ವಾಟ್ಸ್​ಆ್ಯಪ್​ ತನ್ನ ಪ್ರೈವೆಸಿ ಪಾಲಿಸಿ ಪರಿಷ್ಕರಿಸಿದ್ದರಿಂದ ಇತ್ತೀಚೆಗೆ ವಿವಾದಕ್ಕೆ ಒಳಗಾಗಿದ್ದಲ್ಲದೆ, ಅದರಿಂದ ತಮ್ಮ ಖಾಸಗಿತನಕ್ಕೇ ಧಕ್ಕೆ ಬರಲಿದೆ ಎಂದು ಬಳಕೆದಾರರು ಆತಂಕಗೊಂಡಿದ್ದರು. ಇನ್ನು ನಿನ್ನೆಯಿಂದ ವಾಟ್ಸ್​ಆ್ಯಪ್​ ಪಿಂಕ್ ಲಿಂಕ್​ನಿಂದ ಸಾಕಷ್ಟು ಕಿರಿಕಿರಿ ಅನುಭವಿಸಿದ ಹಾಗೂ ಅನುಭವಿಸುತ್ತಿರುವ ಬಳಕೆದಾರರು ಇದೀಗ ಇನ್ನೊಮ್ಮೆ ಆತಂಕಪಡುವ ಮತ್ತೊಂದು ಪ್ರಸಂಗ ಎದುರಾಗಿದೆ.
ವಾಟ್ಸ್​ಆ್ಯಪ್​​ ಅಪ್ಲಿಕೇಷನ್​ನಲ್ಲಿ ಬಹಳಷ್ಟು ದೌರ್ಬಲ್ಯಗಳು ಇವೆ ಎಂಬುದಾಗಿ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್​ ಟೀಮ್ (ಸಿಇಆರ್​ಟಿ) ಎಚ್ಚರಿಕೆ ನೀಡಿದೆ. ವಾಟ್ಸ್​ಆ್ಯಪ್​​ ಹಾಗೂ ವಾಟ್ಸ್​ಆ್ಯಪ್​ ಬಿಜಿನೆಸ್​ ಆ್ಯಪ್​ಗಳ ಪೈಕಿ ಆ್ಯಂಡ್ರಾಯ್ಡ್​ನ v2.21.4.18 ವರ್ಷನ್​ಗೂ ಮೊದಲಿನ ಹಾಗೂ ಐಒಎಸ್​ನ v2.21.32 ವರ್ಷನ್​ಗೂ ಮೊದಲಿನವುಗಳಲ್ಲಿ ಈ ಸಮಸ್ಯೆ ಕಂಡು ಬಂದಿದೆ ಅದು ತಿಳಿಸಿದೆ.
ಇದನ್ನೂ ಓದಿ:ನೀವು ಬಿಸಿಲಲ್ಲಿ ಬೈಕ್​ ನಿಲ್ಲಿಸ್ತೀರಾ.. ಹುಷಾರು: ಇಲ್ಲಿ ಏನಾಯ್ತು ನೋಡಿ…
ಈ ವರ್ಷನ್​ನ ವಾಟ್ಸ್​ಆ್ಯಪ್​ ಹಾಗೂ ವಾಟ್ಸ್​​ಆ್ಯಪ್​​ ಬಿಜಿನೆಸ್​ ಆ್ಯಪ್​ಗಳಿಂದ ಹ್ಯಾಕರ್ಸ್​ ಬಳಕೆದಾರರ ಖಾಸಗಿ ಹಾಗೂ ಸೂಕ್ಷ್ಮ ಮಾಹಿತಿಯನ್ನು ಆ್ಯಕ್ಸೆಸ್​ ಮಾಡಿಕೊಳ್ಳಬಹುದಾಗಿದೆ. ಬಳಕೆದಾರರು ಸುರಕ್ಷತೆ ದೃಷ್ಟಿಯಿಂದ ಗೂಗಲ್​ ಪ್ಲೇ ಸ್ಟೋರ್​ ಹಾಗೂ ಐಒಎಸ್​ ಆ್ಯಪ್​ಸ್ಟೋರ್​ಗೆ ಹೋಗಿ ಲೇಟೆಸ್ಟ್ ವರ್ಷನ್​ ಅಪ್​ಡೇಟ್​ ಮಾಡಿಕೊಳ್ಳುವುದು ಸೂಕ್ತ ಎಂದೂ ಸಿಇಆರ್​ಟಿ ಸಲಹೆ ನೀಡಿದೆ. (ಏಜೆನ್ಸೀಸ್)
ವಾಟ್ಸ್​ಆ್ಯಪ್ ಬಳಕೆದಾರರೇ ಎಚ್ಚರ! ನಿಮ್ಮ ಮೊಬೈಲ್​ಗೆ ಬಂದೀತು ಪಿಂಕ್​ ವಾಟ್ಸ್​ಆ್ಯಪ್ ಲಿಂಕ್​…

ಇನ್ನೆರಡು ತಿಂಗಳು 10ಕ್ಕಿಂತ ಹೆಚ್ಚು ಜನ ಸೇರದಂತೆ ನಿಷೇಧಿಸಿ; ಕರೊನಾ ನಿಯಂತ್ರಣಕ್ಕೆ ಇದು ಅಗತ್ಯವೆಂದ ಕಾರ್ಯಪಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + four =
Remember me
