ಮುಂಬೈ:ಗಾಳಿಪಟ ಹಿಡಿಯಲು ಓಡಿ ಹೋಗುತ್ತಿದ್ದ 10 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ಹಸುವಿನ ದೊಡ್ಡ ಸಗಣಿ ಗುಂಡಿಯಲ್ಲಿ ಸಿಲುಕಿ ದುರಂತ ಸಾವಿಗೀಡಾಗಿರುವ ಘಟನೆ ಮುಂಬೈನ ಕಂಡಿವಲಿ ಏರಿಯಾದಲ್ಲಿ ಗುರುವಾರ ನಡೆದಿದೆ.
ಮಕರ ಸಂಕ್ರಾಂತಿ ಹಬ್ಬದ ದಿನವಾದ ಗುರುವಾರ ಮಧ್ಯಾಹ್ನದ ವೇಳೆ ಕಂಡಿವಲಿಯ ಲಾಲ್ಜಿ ಪಡ ಬಳಿಯಿರುವ ಎಸ್​ಆರ್​ಎ ಕಾಲನಿಯಲ್ಲಿ ನಡೆದಿದೆ. ಪೊಲೀಸ್​ ಮೂಲಗಳ ಪ್ರಕಾರ ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಬಾಲಕ ಇಡೀ ದಿನ ಗಾಳಿಪಟ ಜತೆ ಆಟವಾಡುತ್ತಿದ್ದ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ:ಮಗ ಸತ್ತ ವರ್ಷದ ನಂತರ ಸಿಕ್ತು ಡೆತ್‌ನೋಟ್‌! ಅದರಲ್ಲಿತ್ತು ಪತ್ನಿಯ ಕಾಮಪುರಾಣ
ತುಂಡಾದ ದಾರದಿಂದ ಬೇರ್ಪಟ್ಟ ಗಾಳಿಪಟ ಬಾಲಕ ವಾಸವಿದ್ದ ಕಾಲನಿಯ ದನದ ಕೊಟ್ಟಿಗೆಯತ್ತ ಹಾರಿ ಹೋಗಿದೆ. ಗಾಳಿಪಟ ಹೋಗುತ್ತಿರುವ ಜಾಗದಲ್ಲಿ ಭಾರಿ ಪ್ರಮಾಣದ ಸಗಣಿಯ ರಾಶಿಯಿದೆ ಎಂಬುದನ್ನು ಅರಿಯದ ಬಾಲಕ ಅದನ್ನೇ ಹಿಂಬಾಲಿಸಿದ್ದಾನೆ. ಗಾಳಿಪಟ ಹಿಡಿಯಲು ಮೇಲಕ್ಕೆ ಜಿಗಿದವನು ಸಗಣಿಯ ರಾಶಿಯ ಒಳಗೆ ಬಿದ್ದಿದ್ದಾನೆ.
ತಕ್ಷಣ ಬಾಲಕ ಕಿರುಚುವುದನ್ನು ಕೇಳಿದ ದನದ ಕೊಟ್ಟಿಗೆಯ ಪಕ್ಕದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಕೆಲಸಗಾರರು ಇತರರಿಗೆ ಮಾಹಿತಿ ನೀಡಿದ್ದಾರೆ. ಗುಂಡಿ ತುಂಬಾ ಆಳವಾಗಿದ್ದರಿಂದ ಅದರೊಳಗೆ ಇಳಿಯಲು ಸ್ಥಳೀಯರಿಗೆ ಸಾಧ್ಯವಾಗಲಿಲ್ಲ. ಪೊಲೀಸ್​ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಬಂದರೂ ಸಹ ಒಳಗೆ ಹೋಗಲು ಆಗಲಿಲ್ಲ.
ಇದನ್ನೂ ಓದಿರಿ:5 ತಿಂಗಳ ಮಗು ಎತ್ಕೊಂಡು ಬೆತ್ತಲೆಯಾಗಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ: ಶ್ರೀಮಂತೆಯ ದುರಂತ ಕತೆಯಿದು!
ಬಾಲಕ ಗುಂಡಿಯೊಳಗೆ ಸಂಪೂರ್ಣವಾಗಿ ಮುಳುಗಿದ್ದ. ಕಟ್ಟಡ ನಿರ್ಮಾಣ ಕೆಲಸಗಾರರು ಮತ್ತು ಕ್ರೇನ್​ ಸಹಾಯದಿಂದ ಕೊನೆಗೂ ಬಾಲಕನನ್ನು ಹೊರಗೆ ತೆಗೆಯಲಾಯಿತು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಕಂಡಿವಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಯುವತಿಗೆ ಮನಸೋತು ಸಲಿಂಗಕಾಮ ತೊರೆದವನ ರುಂಡ-ದೇಹ ಇಬ್ಭಾಗ! ಬೆಚ್ಚಿಬೀಳಿಸುತ್ತೆ ಈ ಘಟನೆ

ತಾಯಿ ಇಲ್ಲದ ಮಗಳ ಸಾವಿನ ಹಿಂದೆ ತಂದೆ ಕೈವಾಡ? ಪೊಲೀಸ್​ ಠಾಣೆ ಮೆಟ್ಟಿಲೇರಿದ ಅಜ್ಜ

ಫ್ರೀ ಇನ್ನರ್​ವೇರ್​ ಆಫರ್​ಗೆ ಮರುಳಾದ ಯುವತಿ! ಮುಂದೇನಾಯ್ತು ಕೇಳಿದರೆ ಶಾಕ್​ ಆಗೋದು ಗ್ಯಾರಂಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 1 =
Remember me
