ಮುಂಬೈ:ಉನ್ನತಾಧಿಕಾರಿ ಸ್ತರದ ಉದ್ಯೋಗಕ್ಕೆ ಗರಿಷ್ಠ ಸರಾಸರಿ ವೇತನ (ವಾರ್ಷಿಕ 35.7 ಲಕ್ಷ ರೂ.) ಒದಗಿಸುವ ಮಹಾನಗರಗಳ ಪೈಕಿ ಮುಂಬೈ, ಮಧ್ಯಮ ಸ್ತರ (ವಾರ್ಷಿಕ 18.10 ಲಕ್ಷ ರೂ.)ಮತ್ತು ಜ್ಯೂನಿಯರ್ ಸ್ತರ (ವಾರ್ಷಿಕ 6.70 ಲಕ್ಷ ರೂ.)ದ ಉದ್ಯೋಗಕ್ಕೆ ಹೆಚ್ಚಿನ ಸರಾಸರಿ ವೇತನ ಒದಗಿಸುವ ಮಹಾನಗರಗಳ ಪೈಕಿ ಬೆಂಗಳೂರು ನಂ.1 ಸ್ಥಾನದಲ್ಲಿವೆ. ರ್ಯಾಂಡ್​ಸ್ಟಾ್ಯಡ್​ನ ‘2021 ಆನುವಲ್ ಸ್ಯಾಲರಿ ಟ್ರೆಂಡ್ಸ್ ರಿಪೋರ್ಟ್’ನಲ್ಲಿ ಈ ಅಂಶಗಳು ಉಲ್ಲೇಖವಾಗಿವೆ.
ನ್ಯಾಷನಲ್ ಕ್ಯಾಪಿಟಲ್ ರೀಜಿಯನ್ (ಎನ್​ಸಿಆರ್) ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಉನ್ನತಾಧಿಕಾರಿ ಸ್ತರದ ಉದ್ಯೋಗಕ್ಕೆ ಇಲ್ಲಿ ವಾರ್ಷಿಕ ಸರಾಸರಿ 32.70 ಲಕ್ಷ ರೂ. ವೇತನ ಇದೆ. ಮಧ್ಯಮ ಮತ್ತು ಜ್ಯೂನಿಯರ್ ಸ್ತರದ ಉದ್ಯೋಗಗಳ ವೇತನ ವಿಚಾರದಲ್ಲಿ ಎನ್​ಸಿಆರ್ ಅನುಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿದೆ. ಜ್ಯೂನಿಯರ್ ಸ್ತರದ ಉದ್ಯೋಗಗಳ ವೇತನದ ಪಟ್ಟಿಯಲ್ಲಿ ಚೆನ್ನೈ (ವಾರ್ಷಿಕ 5.6 ಲಕ್ಷ ರೂ.) ಮೂರನೇ ಸ್ಥಾನದಲ್ಲಿದೆ. ಬೆಂಗಳೂರಿನ ವೇತನಕ್ಕೆ ಹೋಲಿಸಿದರೆ ಶೇಕಡ 16 ಅಂತರವಿದೆ.
ಟೈರ್ 2 ನಗರಗಳ ಪೈಕಿ ಉನ್ನತಾಧಿಕಾರಿ ಸ್ತರದ ಉದ್ಯೋಗಗಳ ವೇತನ ಭುವನೇಶ್ವರದಲ್ಲೇ ಗರಿಷ್ಠ ಸರಾಸರಿ (ವಾರ್ಷಿಕ 31.2 ಲಕ್ಷ ರೂ.) ಮಟ್ಟದಲ್ಲಿ ಇದೆ. ಕೊಚ್ಚಿ (28.8 ಲಕ್ಷ ರೂ.), ಚಂಡೀಗಢ (26.5 ಲಕ್ಷ ರೂ.) ನಂತರದ ಸ್ಥಾನಗಳಲ್ಲಿವೆ.
ನಿರುದ್ಯೋಗ 4 ತಿಂಗಳ ಗರಿಷ್ಠ:ದೇಶದ ನಿರುದ್ಯೋಗ ದರ ಡಿಸೆಂಬರ್ ತಿಂಗಳು ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ನವೆಂಬರ್​ನಲ್ಲಿ ಶೇಕಡ 7 ಇದ್ದದ್ದು ಡಿಸೆಂಬರ್​ನಲ್ಲಿ ಶೇಕಡ 7.9ಕ್ಕೆ ಏರಿದೆ. ಆಗಸ್ಟ್​ನಲ್ಲಿ ಶೇಕಡ 8.3 ಇದ್ದದ್ದು ಬಳಿಕ ಇಳಿಕೆಯಾಗಿತ್ತು. ನಗರದ ನಿರುದ್ಯೋಗ ದರ ಶೇಕಡ 8.3 ರಿಂದ ಶೇಕಡ 9.3ಕ್ಕೆ, ಗ್ರಾಮೀಣ ನಿರುದ್ಯೋಗ ದರ ಶೇಕಡ 6.4ರಿಂದ ಶೇಕಡ 7.3ಕ್ಕೆ ಏರಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ವರದಿ ಹೇಳಿದೆ.
ಬಿಎಫ್​ಎಸ್​ಐ ಟ್ರೆಂಡ್:ಬ್ಯಾಂಕಿಂಗ್, ಫೈನಾನ್ಶಿಯಲ್ ಸರ್ವೀಸಸ್ ಆಂಡ್ ಇನ್ಶೂರೆನ್ಸ್ (ಬಿಎಫ್​ಎಸ್​ಐ) ಸೆಕ್ಟರ್​ನಲ್ಲಿ ಮಧ್ಯಮ ಸ್ತರ ಮತ್ತು ಉನ್ನತಾಧಿಕಾರಿ ಸ್ತರದ ಉದ್ಯೋಗಿಗಳಿಗೆ ಸರಾಸರಿ ಗರಿಷ್ಠ ವಾರ್ಷಿಕ ವೇತನ ಅಹಮದಾಬಾದ್​ನಲ್ಲಿ ಅನುಕ್ರಮವಾಗಿ 8 ಲಕ್ಷ ರೂ. ಮತ್ತು 15.3 ಲಕ್ಷ ರೂ., ಕೋಲ್ಕತದಲ್ಲಿ 12.7 ಲಕ್ಷ ರೂ. ಮತ್ತು 27.3 ಲಕ್ಷ ರೂ., ಮುಂಬೈನಲ್ಲಿ 9.3 ಲಕ್ಷ ರೂ. ಮತ್ತು 19.3 ಲಕ್ಷ ರೂ., ಎನ್​ಸಿಆರ್​ನಲ್ಲಿ 8.7 ಲಕ್ಷ ರೂ. ಮತ್ತು 17 ಲಕ್ಷ ರೂ. ಇದೆ. ಈ ಪಟ್ಟಿಯಲ್ಲಿ ಭುವನೇಶ್ವರ ಅಗ್ರಸ್ಥಾನದಲ್ಲಿದ್ದು ಉನ್ನತಾಧಿಕಾರಿಗಳಿಗೆ ಸರಾಸರಿ 31.2 ಲಕ್ಷ ರೂ. ವೇತನವಿದೆ.
ಜ. 31ರವರೆಗೂ ಶಾಲೆಗಳಿಗೆ ರಜೆ; 1ರಿಂದ 9ರ ವರೆಗಿನ ತರಗತಿಗಳಿಗಷ್ಟೇ ಅನ್ವಯ: ಬಿಎಂಸಿ ಘೋಷಣೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
