ಮುಂಬೈ:ಮಕ್ಕಳಲ್ಲಿ ಮೊಬೈಲ್​ಫೋನ್​ ಗೀಳು ಯಾವ ಪರಿಯಲ್ಲಿ ಆವರಿಸಿದೆ ಎಂಬುದಕ್ಕೆ ಇದೂ ಒಂದು ಉದಾಹರಣೆ. ಗೇಮ್ಸ್​ ಆಡಲು ಅಮ್ಮ ಮೊಬೈಲ್​ ಫೋನ್​ ಕೊಡಲಿಲ್ಲ ಎಂಬ ಕಾರಣಕ್ಕೆ ಇಲ್ಲೊಬ್ಬ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಂಬೈನಲ್ಲಿನ 16 ವರ್ಷದ ಬಾಲಕನೊಬ್ಬ ರೈಲಿಗೆ ದೇಹವೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಾಲಕ ಬುಧವಾರ ಮೊಬೈಲ್​ಫೋನ್​ನಲ್ಲಿ ಗೇಮ್ಸ್ ಆಡುತ್ತಿದ್ದಾಗ, ಫೋನ್ ಕಿತ್ತುಕೊಂಡ ತಾಯಿ ಓದು ಎಂದು ಗದರಿ, ಹೊರಹೋಗಿದ್ದರು.
ನಂತರ ಬಾಲಕ ಡೆತ್​ನೋಟ್ ಬರೆದಿಟ್ಟು ಮನೆಯಿಂದ ಹೊರಗೆ ಹೋಗಿದ್ದ. ಮನೆಗೆ ಬಂದ ತಾಯಿ ಡೆತ್​ನೋಟ್​ ನೋಡಿದ್ದು, ನಾನು ಮನೆಗೆ ವಾಪಸ್​ ಬರುವುದಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಲಿದ್ದೇನೆ ಎಂದು ಮಗ ಅದರಲ್ಲಿ ಬರೆದಿಟ್ಟಿದ್ದು ಕಂಡುಬಂದಿತ್ತು.
ಕೂಡಲೇ ದಿಂಡೋಶಿ ಪೊಲೀಸರಿಗೆ ಮನೆಯವರು ಮಾಹಿತಿ ನೀಡಿದ್ದರು. ಪೊಲೀಸರು ಎಲ್ಲೆಡೆ ಹುಡುಕಾಟ ಆರಂಭಿಸಿದ್ದರು. ಇಂದು ಮಲಾಡ್ ಮತ್ತು ಖಾಂಡಿವಿಲಿ ಸ್ಟೇಷನ್ ಮಧ್ಯೆ ರೈಲ್ವೆ ಹಳಿಯೊಂದರಲ್ಲಿ ಬಾಲಕನ ಶವ ಪತ್ತೆಯಾದ ಮಾಹಿತಿ ಸಿಕ್ಕಿತ್ತು. ಈ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದಾಗ, ಅದು ಡೆತ್​ನೋಟ್ ಬರೆದಿಟ್ಟು ಮನೆಬಿಟ್ಟು ಹೋಗಿದ್ದ ಬಾಲಕ ಎಂಬುದು ಖಚಿತಪಟ್ಟಿದೆ. ಬೊರಿವಿಲಿ ಗವರ್ನಮೆಂಟ್ ರೈಲ್ವೆ ಪೊಲೀಸ್​ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೋಮ್​ವರ್ಕ್ ಮಾಡದ 5 ವರ್ಷದ ಮಗಳಿಗೆ ಅಮ್ಮನಿಂದಲೇ ಇದೆಂಥ ಶಿಕ್ಷೆ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − 15 =
Remember me
