ಮುಂಬೈ:14 ವರ್ಷದ ಬಾಲಕ, ಡೆಂಗ್ಯೂ, ಮಲೇರಿಯಾ ಮತ್ತು ಲೆಪ್ಟೊಸ್ಪೈರೋಸಿಸ್‌ಗೆ ಏಕಕಾಲಕ್ಕೆ ಸೋಂಕಿಗೆ ತುತ್ತಾಗಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಗ್ರಾಪಂಗಳಲ್ಲಿ ಸಂಭ್ರಮಾಚರಣೆ
ಘಟನೆಯ ವಿವರ:ವರದಿಗಳ ಪ್ರಕಾರ, ಈ ತಿಂಗಳ ಪ್ರಾರಂಭದಲ್ಲಿ ಬಾಲಕನಿಗೆ ಜ್ವರ ಕಾಣಿಸಿಕೊಂಡಿತ್ತು. ಆದಾಗ್ಯೂ, ಚಿಕಿತ್ಸೆಗೆ ವೈದ್ಯರನ್ನು ಸಂಪರ್ಕಿಸಲಿಲ್ಲ. ಬದಲಿಗೆ ಸುಮಾರು ಒಂದು ವಾರದವರೆಗೆ ತಮಗೆ ತಿಳಿದಿದ್ದ ವೈದ್ಯರ ಮಾತನ್ನು ಮಾತ್ರ ಕೇಳಿದ್ದಾನೆ ಎನ್ನಲಾಗಿದೆ.
ತದನಂತರ ಆಗಸ್ಟ್ 14 ರಂದು ಬಾಲಕ ಸರ್ಕಾರಿ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವೈದ್ಯರನ್ನು ಸಂಪರ್ಕಿಸಿದ್ದಾನೆ. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ಡೆಂಗ್ಯೂ ಮತ್ತು ಮಲೇರಿಯಾ ಎರಡೂ ಪಾಸಿಟಿವ್ ಇರುವುದನ್ನು ದೃಢಪಡಿಸಿದ್ದಾರೆ. ಆಶ್ಚರ್ಯ ಸಂಗತಿ ಎಂದರೆ ಹೆಚ್ಚುವರಿ ವೈದ್ಯಕೀಯ ಪರೀಕ್ಷೆಯಲ್ಲಿ ಆತನಿಗೆ ಲೆಪ್ಟೊಸ್ಪೈರೋಸಿಸ್ ಇರುವುದು ಕೂಡ ದೃಢಪಟ್ಟಿದೆ.
ಇದನ್ನೂ ಓದಿ:ಹತ್ಯೆಗೈದು ಪರಾರಿಯಾಗಿದ್ದ ಆರೋಪಿ 7 ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು ಆ ಟ್ಯಾಟೂವಿನಿಂದ..
ಬಾಲಕನ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದ ಹಿನ್ನೆಲೆ ಆತನನ್ನು ಮುಂಬೈ ಸೆಂಟ್ರಲ್‌ನ ನಾಯರ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ತೀವ್ರ ಶ್ವಾಸಕೋಶದ ತೊಂದರೆಗಳನ್ನು ಅನುಭವಿಸಿದ ಕಾರಣ ಹುಡುಗನನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. ಈ ವೇಳೆ ಆತನ ಕ್ರಿಯೇಟಿನೈನ್ ಮಟ್ಟವೂ ಹೆಚ್ಚಿತ್ತು ಎಂದು ವರದಿ ಉಲ್ಲೇಖಿಸಿದೆ.
ಉಲ್ಬಣಗೊಳ್ಳುವ ಲಕ್ಷಣಗಳು, ಸೋಂಕುಗಳು ಮತ್ತು ಬಹು-ಅಂಗಾಂಗಗಳ ವೈಫಲ್ಯವನ್ನು ನಿಯಂತ್ರಿಸಲು ವೈದ್ಯರ ನಿರಂತರ ಪ್ರಯತ್ನಗಳು ಫಲಿಸದೆ ಬಾಲಕ ಆಸ್ಪತ್ರೆಗೆ ದಾಖಲಾದ ಮೂರು ದಿನಗಳ ಬಳಿಕ ಮೃತಪಟ್ಟಿದ್ದಾನೆ. ಈ ಬಗ್ಗೆ ಮಾತನಾಡಿರುವ ಹಿರಿಯ ವೈದ್ಯ ಗಿರೀಶ್ ರಾಜಾಧ್ಯಕ್ಷ, “ಏಕಕಾಲಕ್ಕೆ ಮೂರು ಸೋಂಕಿಗೆ ಒಳಗಾಗುವುದು ಅಸಾಧ್ಯ. ಆದ್ರೆ, ಇಂತಹ ಪ್ರಕರಣ ಅತ್ಯಂತ ಅಪರೂಪದ ಘಟನೆ. ಮೊದಲೇ ವೈದ್ಯಕೀಯ ನೆರವು ಪಡೆದಿದ್ದರೆ ಬಾಲಕನನ್ನು ರಕ್ಷಿಸಬಹುದಿತ್ತು” ಎಂದು ವೈದ್ಯರು ತಿಳಿಸಿದ್ದಾರೆ,(ಏಜೆನ್ಸೀಸ್).
‘ಜವಾನ್’​ ಟ್ರೇಲರ್​ ಔಟ್​; ಫ್ಯಾನ್ಸ್​ಗೆ ಡಬ್ಬಲ್​ ಧಮಾಕ ನೀಡಿದ ನಟಿ ನಯನತಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + one =
Remember me
