ಮುಂಬೈ :ಮಹಾರಾಷ್ಟ್ರದ ಮುಂಬೈನಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಸಂಭವಿಸಿದ ಕಟ್ಟಡ ಮತ್ತು ಗೋಡೆ ಕುಸಿತದ ಎರಡು ಪ್ರಕರಣಗಳಲ್ಲಿ ಈವರೆಗೆ 19 ಜನರು ಪ್ರಾಣ ಕಳೆದುಕೊಂಡಿದ್ದಾರೆ. ವರುಣನ ಆರ್ಭಟಕ್ಕೆ ನಲುಗಿರುವ ನಗರವಾಸಿಗಳು ನಗರಪಾಲಿಕೆ ವತಿಯ ನೀರಿನ ಪೂರೈಕೆಯಲ್ಲಿ ಕೂಡ ವ್ಯತ್ಯಯವನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ.
ನಗರದ ಚೆಂಬೂರ್​ ಮತ್ತು ವಿಖ್ರೋಲಿಯಲ್ಲಿ ನಡೆದ ದುರ್ಘಟನೆಯಲ್ಲಿ ಸಾವಪ್ಪಿದವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಮತ್ತು ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಒದಗಿಸುವುದಾಗಿ ಸಿಎಂ ಉದ್ಧವ್​ ಠಾಕ್ರೆ ಹೇಳಿದ್ದಾರೆ. ಗೋಡೆ ಕುಸಿತದಲ್ಲಿ ಸಾವಪ್ಪಿದ ಜನರ ಸಂಬಂಧಿಕರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಕೂಡ 2 ಲಕ್ಷ ರೂ. ಪರಿಹಾರ ಮತ್ತು ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ಘೋಷಿಸಲಾಗಿದೆ.
ಇದನ್ನೂ ಓದಿ:ಮಳೆಯನ್ನೂ ಲೆಕ್ಕಿಸದೆ ಫುಡ್​ ಕಿಟ್​ಗಾಗಿ ಸಾಲುಗಟ್ಟಿ ನಿಂತ ಕಾರ್ಮಿಕರು…
ನಗರದಲ್ಲಿ ಅಪಾಯದ ಪರಿಸ್ಥಿತಿಯಲ್ಲಿರುವ ಕಟ್ಟಡಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ವಸತಿ ಪ್ರದೇಶಕ್ಕೆ ಸ್ಥಳಾಂತರಿಸುವ ಬಗ್ಗೆ ಶೀಘ್ರವೇ ನಿರ್ಣಯ ತೆಗೆದುಕೊಳ್ಳಲಾಗುವುದು. ದುರ್ಘಟನೆಗಳ ಬಗ್ಗೆ ಬೃಹನ್​ಮುಂಬೈ ನಗರ ಪಾಲಿಕೆ(ಬಿಎಂಸಿ) ತನಿಖೆ ನಡೆಸುವುದು ಎಂದು ಮಹಾ ಸಚಿವ ನವಾಬ್​ ಮಲಿಕ್​ ಹೇಳಿದ್ದಾರೆ.
ಭಂಡೂಪ್​ನಲ್ಲಿ ಜಲಶುದ್ಧೀಕರಣ ಘಟಕವಿರುವ ಕಟ್ಟಡವು ಹಳೆಯದಾಗಿರುವ ಕಾರಣ ಬಿರುಸು ಮಳೆಯಾಗುತ್ತಿರುವ ಈ ಸಂದರ್ಭದಲ್ಲಿ, ಸಂಕೀರ್ಣವನ್ನು ಮುಚ್ಚಲಾಗಿದೆ. ಇದರಿಂದಾಗಿ ಮುಂಬೈನ ಬಹುತೇಕ ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ನೀರಿನ ಪೂರೈಕೆಯನ್ನು ಪುನರಾರಂಭಿಸುವ ಪ್ರಯತ್ನಗಳು ನಡೆದಿವೆ ಎಂದು ​ ಬಿಎಂಸಿ ಹೇಳಿದೆ.(ಏಜೆನ್ಸೀಸ್)
VIDEO | ಭಾರೀ ಜಡಿಮಳೆ, ಊರಿನೊಳಗೆ ನೀರಿನ ಹೊಳೆ!

ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳಲಿದ್ದಾರೆ ಈ ಐಎಎಸ್​ ಅಧಿಕಾರಿ!

VIDEO | ವೈರ್​ ಕಟ್​ ಮಾಡಲು ತೆವಳುತ್ತಾ ಬಂದ ವಿದ್ಯುತ್​ ಕಳ್ಳ! ವೈರಲ್ ಆಗಿದೆ ಈ ಫನ್ನಿ ವಿಡಿಯೋ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + fifteen =
Remember me
