ಮುಂಬೈ:ಕರೊನಾ ಸೋಂಕು ಎಲ್ಲರಲ್ಲೂ ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ. ಕೆಲವರು ಗಂಭೀರ ಸಮಸ್ಯೆಗೆ ಒಳಗಾದರೆ ಇನ್ನು ಅನೇಕರಲ್ಲಿ ಸಣ್ಣ ಪುಟ್ಟ ಲಕ್ಷಣಗಳು ಮಾತ್ರ ಕಾಣಿಸಿಕೊಳ್ಳುತ್ತವೆ. ಎಷ್ಟೋ ಸೋಂಕಿತರ ವರದಿ ಬಂದು ಎರಡು ಮೂರು ದಿನಗಳಲ್ಲೇ ಗುಣವಾಗಿಬಿಡುತ್ತಾರೆ. ಈ ರೀತಿ ಗುಣ ಆಗುವವರು ಬಳಸಿ ಹೆಚ್ಚುವರಿಯಾಗಿ ಇಟ್ಟಿರುವ ಔಷಧವನ್ನು ಸಂಗ್ರಹಿಸಿ, ಬಡ ಸೋಂಕಿತರಿಗೆ ಹಂಚುವ ಕೆಲಸ ಮಾಡುತ್ತಿದೆ ಇಲ್ಲೊಂದು ವೈದ್ಯ ಜೋಡಿ.
ಡಾಕ್ಟರ್ ಮಾರ್ಕಸ್ ರಾನ್ನೆ ಮತ್ತು ಅವರ ಪತ್ನಿ ಡಾಕ್ಟರ್ ರೈನಾ ಈ ವಿಶೇಷ ಕೆಲಸಕ್ಕೆ ಮುಂದಾಗಿರುವ ಜೋಡಿ. ಇತ್ತೀಚೆಗೆ ಅವರು ಕೆಲಸ ಮಾಡುವ ಆಸ್ಪತ್ರೆಯ ಸಿಬ್ಬಂದಿಯೊಬ್ಬರ ಕುಟುಂಬಕ್ಕೆ ಸೋಂಕು ದೃಢವಾಗಿತ್ತಂತೆ. ಬಡವರಾಗಿದ್ದ ಅವರ ಸಹಾಯ ಮಾಡುವ ನಿಟ್ಟಿನಲ್ಲಿ ಈ ಜೋಡಿ ಒಂದು ಪ್ಲಾನ್​ ಮಾಡಿದೆ. ಈಗಾಗಲೇ ಕರೊನಾ ಗೆದ್ದಿರುವ ಒಂದೆರೆಡು ಮನೆಗಳಲ್ಲಿ ಹೆಚ್ಚುವರಿಯಾಗಿ ಉಳಿದಿದ್ದ ಔಷಧವನ್ನು ಸಂಗ್ರಹಿಸಿ ಅದನ್ನು ಸೋಂಕಿತ ಕುಟುಂಬಕ್ಕೆ ನೀಡಿದೆ.
ಈ ರಿತಿ ಸಹಾಯ ಮಾಡಿದ ಮೇಲೆ ಅದನ್ನೇ ದೊಡ್ಡ ಪ್ರಮಾಣಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಅಕ್ಕ ಪಕ್ಕದ ಮನೆಯವರ ಸಹಾಯವನ್ನೂ ಪಡೆದುಕೊಳ್ಳಲಾಗಿದೆ. ಏಳೆಂಟು ಮಂದಿ ಸೇರಿ ಹೆಚ್ಚುವರಿ ಔಷಧ ಸಂಗ್ರಹಣೆ ಆರಂಭಿಸಿದ್ದಾರೆ. ಈವರೆಗೆ ಸುಮಾರು 100 ಕುಟುಂಬಗಳಿಂದ 20 ಕೆಜಿಯಷ್ಟು ಔಷಧವನ್ನು ಸಂಗ್ರಹಿಸಲಾಗಿದೆ. ಈ ಔಷಧವನ್ನು ಎನ್​ಜಿಒ ಒಂದರ ಮುಖಾಂತರ ಹಳ್ಳಿಗಳ ಆರೋಗ್ಯ ಕೇಂದ್ರಗಳಿಗೆ ಕಳುಹಿಸಿಕೊಡುವುದಾಗಿ ವೈದ್ಯ ದಂಪತಿ ತಿಳಿಸಿದೆ. ಈ ರೀತಿ ಮಾಡುವುದರಿಂದ ಬಡ ಸೋಂಕಿತರಿಗೆ ಉಚಿತವಾಗಿ ಔಷಧ ಸಿಗುವದಷ್ಟೇ ಅಲ್ಲದೆ ಔಷಧ ತ್ಯಾಜ್ಯವೂ ಕಡಿಮೆಯಾಗುವುದು ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)
ನಿಮ್ಮ ಹೆಸರಿಗೆ ಮಾಡಿದ ವಿಲ್‌ ಯಾವಾಗ ಬೇಕಾದರೂ ಬದಲಿಸೋ ಹಕ್ಕು ಅವರಿಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + two =
Remember me
