ಮುಂಬೈ:ಆಸ್ಪತ್ರೆಯ ವೈದ್ಯರೊಬ್ಬರು ಆನ್​ಲೈನ್​ನಲ್ಲಿ ಸಮೋಸಾ ಆರ್ಡರ್​ ಮಾಡಲು ಹೋಗಿ 1.40 ಲಕ್ಷ ರೂ. ಕಳೆದು ಕೊಂಡಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.ಇದನ್ನೂ ಓದಿ:ಹಸುಗೂಸಿನ ಮೃದುವಾದ ತೋಳು, ಕುತ್ತಿಗೆಯನ್ನು ಬ್ಲೇಡ್​​ನಿಂದ ಕೊಯ್ದ ತಂದೆ..!ಕೆಇಎಂ ಆಸ್ಪತ್ರೆಯ 27 ವರ್ಷದ ವೈದ್ಯರೊಬ್ಬರು ಸಿಯಾನ್‌ನ ಜನಪ್ರಿಯ ಉಪಾಹಾರ ಗೃಹದಿಂದ 25 ಪ್ಲೇಟ್ ಸಮೋಸಾಗಳನ್ನು ಆರ್ಡರ್ ಮಾಡಿದ ನಂತರ 1.40 ಲಕ್ಷ ರೂಪಾಯಿಗಳನ್ನು ವಂಚಿಸಲಾಗಿದ್ದು, ಶನಿವಾರ ಬೆಳಗ್ಗೆ 8.30ರಿಂದ 10.30ರ ನಡುವೆ ಈ ಘಟನೆ ನಡೆದಿದೆ.ವೈದ್ಯ ಹಾಗೂ ಆತನ ಸ್ನೇಹಿತರು ಕರ್ಜಾತ್‌ ಎಂಬಲ್ಲಿ ಪಿಕ್ನಿಕ್​​​ನ್ನು ಆಯೋಜಿಸಿದ್ದು, ಅದಕ್ಕಾಗಿ ಸಮೋಸಾಗಳನ್ನು ಆರ್ಡರ್ ಮಾಡಲು ಆನ್‌ಲೈನ್‌ನಲ್ಲಿ ಹೋಟೆಲ್​​ನ ನಂಬರ್​​ನ್ನು ಪತ್ತೆಹಚ್ಚಿದ್ದಾನೆ. ಆಗ ವೈದ್ಯ ಆನ್​ಲೈನ್​ನಲ್ಲಿ ದೊರೆತ ಸಂಖ್ಯೆಗೆ ಕರೆ ಮಾಡಿದಾಗ, ಆ ಕಡೆಯಿಂದ ಸೈಬರ್​ ಖದೀಮರು ಮುಂಗಡವಾಗಿ ಪಾವತಿಸುವಂತೆ ಮನವಿ ಮಾಡಿದ್ದಾರೆ.ಇದನ್ನೂ ಓದಿ:ಕಾಂಗ್ರೆಸ್​ ಅಡಳಿತದಲ್ಲಿ ಗೂಂಡಾ ರಾಜಕಾರಣ ರಾರಾಜಿಸುತ್ತಿದೆ: ನಳಿನ್​ ಕುಮಾರ್​ ಕಟೀಲ್ವೈದ್ಯರು ತಮ್ಮ ಆರ್ಡರ್​ಗಾಗಿ ವಾಟ್ಸ್​​ಆ್ಯಪ್ ಮೂಲಕ ಸಂದೇಶವನ್ನು ಸ್ವೀಕರಿಸಿದ್ದು, ಅದರಲ್ಲಿ ಆರ್ಡರ್​ನ ದೃಢೀಕರಣ ಮತ್ತು ಆನ್‌ಲೈನ್‌ನಲ್ಲಿ ಹಣ ಕಳುಹಿಸಲು ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀಡಲಾಗಿತ್ತು. ಆಗ ವೈದ್ಯರು 1,500 ರೂ. ಕಳುಹಿಸಿ ಆತನಿಗೆ ಮತ್ತೆ ಕರೆ ಮಾಡಿದ್ದು, ಆ ಕಡೆಯಿಂದ ವ್ಯಕ್ತಿಯೊಬ್ಬ ಅದು ತನಗೆ ಬಂದಿಲ್ಲ. ಈ ಪಾವತಿಗಾಗಿ ವಹಿವಾಟು ಐಡಿಯನ್ನು ರಚಿಸಬೇಕು ಎಂದು ಹೇಳಿ ವಾಟ್ಸ್​​ಆ್ಯಪ್​​ನಲ್ಲಿ ಲಿಂಕ್​ ಕಳುಹಿಸಿ ಹಲವು ಸೂಚನೆಗಳನ್ನು ನೀಡಿದ್ದಾನೆ. ವೈದ್ಯರು ಆತನ ಸೂಚನೆಗಳನ್ನು ಅನುಸರಿಸಿದ್ದು, ತಮ್ಮ ಅಕೌಂಟ್​ನಿಂದ 1.40 ಲಕ್ಷ ರೂ. ಕಡಿತವಾಗಿರುವ ಸಂದೇಶ ಬಂದಿದೆ.ಕೊನೆಗೆ ತಮಗೆ ಮೋಸವಾಗಿರುವುದನ್ನು ಅರಿತ ವೈದ್ಯರು, ಭೋಯಿವಾಡ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 5 =
Remember me
