ಮುಂಬೈ:ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯುವಕನೊಬ್ಬ ಬೈಕ್​ ಸಮೇತ ಫ್ಲೈಓವರ್​ನಿಂದ ಕೆಳಗೆ ಬಿದ್ದು ದುರಂತ ಸಾವಿಗೀಡಾಗಿರುವ ಘಟನೆ ಮುಂಬೈನ ಬಾಂದ್ರಾದಲ್ಲಿ ಬುಧವಾರ 4 ಗಂಟೆಗೆ ನಡೆದಿದೆ. ಇನ್ನೊರ್ವ ಹುಡುಗ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಮೃತನನ್ನು ಅಬ್ದುಲ್​ ಅಹಾದ್​ ಶೇಕ್​ ಎಂದು ಗುರುತಿಸಲಾಗಿದೆ. 17 ವರ್ಷದ ಸ್ನೇಹಿತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಕೂಡ ಹೆಲ್ಮೆಟ್​ ಧರಿಸಿರಲಿಲ್ಲ ಮತ್ತು ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಪ್ರಾಣ ಬಿಡ್ತೀನಿ ಆದ್ರೆ ಮಂಡ್ಯ ಬಿಡಲ್ಲ! ಮಗನ ರಾಜಕೀಯ ಭವಿಷ್ಯದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಸುಮಲತಾ
ಸೇತುವೆಯಲ್ಲಿ ಪೊಲೀಸ್​ ಸಿಬ್ಬಂದಿಯನ್ನು ನೋಡಿದ ಯುವಕ ತಕ್ಷಣ ಬೈಕ್​ ಯೂಟರ್ನ್​ ಹೊಡೆದಿದ್ದಾರೆ. ಈ ವೇಳೆ ಬೈಕ್​ ನಿಯಂತ್ರಣ ಕಳೆದುಕೊಂಡು ತಡೆಗೋಡೆಗೆ ಡಿಕ್ಕಿ ಹೊಡೆದು 40 ಆಳದ ಫ್ಲೈಓವರ್​ನಿಂದ ಕೆಳಗೆ ಬಿದ್ದಿದೆ. ನಿನ್ನೆ ಸಂಜೆ ರಂಗ ಪಂಚಮಿ ಆಚರಣೆ ಮತ್ತು ಇಸ್ಲಾಮಿಕ್ ರಜಾದಿನ “ಬದಿ ರಾತ್” ಹಿನ್ನೆಲೆಯಲ್ಲಿ ಬೈಕ್ ಸವಾರರ ಮೇಲೆ ನಿಗಾವಹಿಸಲು ಪೊಲೀಸರು ಪಶ್ಚಿಮ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸಮುದ್ರ ಸಂಪರ್ಕದ ದಿಕ್ಕಿನಲ್ಲಿ ಗಸ್ತು ಕರ್ತವ್ಯದಲ್ಲಿದ್ದರು.
ಬುಧವಾರ ಬೆಳಗ್ಗೆ ಯುವಕರಿಬ್ಬರು ಫ್ಲೈವರ್​ನಲ್ಲಿ ಬರುವಾಗ ಪೊಲೀಸರನ್ನು ನೋಡಿ ಹೆದರಿ ತಪ್ಪಿಸಿಕೊಂಡು ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್​ ಸವಾರ ಅಪ್ರಾಪ್ತನಾಗಿದ್ದರಿಂದ ಪೊಲೀಸರಿಗೆ ಹೆದರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಆತನ ತಲೆಗೆ ಏಟು ಬಿದ್ದಿದ್ದು, ಮುಂಬೈನ ಭಾಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆಕಸ್ಮಿಕ ಸಾವು ಪ್ರಕರಣ ದಾಖಲುಬಾಂದ್ರಾ ಪೊಲೀಸರು ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಹುಡುಗರ ಬಳಿ ಸರಿಯಾದ ಲೈಸೆನ್ಸ್​ ಸಹ ಇರಲಿಲ್ಲ. ಅವರ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಸುಳಿವು ನೀಡಿದ್ದಾರೆ.(ಏಜೆನ್ಸೀಸ್​)
ಸಿಟಿಆರ್​ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಗ್ರಾಹಕರೊಂದಿಗೆ ಹರಟೆ, ಉಪಾಹಾರ ಸೇವನೆ

ಮಹಿಳೆಯರ ಮೀಸಲಾತಿಗಾಗಿ ಕೆಸಿಆರ್​ ಪುತ್ರಿಯಿಂದ ಉಪವಾಸ ಸತ್ಯಾಗ್ರಹ

ಚಾಲೆಂಜ್‌ನಲ್ಲಿ ಗೆಲ್ಲೋಕೆ ಬೇಕಾಬಿಟ್ಟಿ ಐರನ್‌ ಟ್ಯಾಬ್ಲೆಟ್‌ ತಿಂದು ಪ್ರಾಣ ಬಿಟ್ಟ ಬಾಲಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + fifteen =
Remember me
