ನವದೆಹಲಿ:ವಿದ್ಯಾರ್ಥಿ ಜೀವನದ ಯಶಸ್ಸನ್ನು ಅಂಕಗಳ ಆಧಾರದ ಮೇಲೆಯೇ ಅಳೆಯುತ್ತಾರೆ. ಪರೀಕ್ಷೆಗಳಲ್ಲಿ ನಮ್ಮ ಮಕ್ಕಳು ಹೆಚ್ಚಿನ ಅಂಕ ಗಳಿಸಬೇಕೆಂದು ಪಾಲಕರು ತುಂಬಾ ಒತ್ತಡ ಹೇರುತ್ತಾರೆ. ಪಾಲಕರ ಒತ್ತಡದಿಂದ ಕೆಲವು ಮಕ್ಕಳು ದುಡುಕಿನ ನಿರ್ಧಾರ ತೆಗೆದುಕೊಳ್ಳುವುದನ್ನು ನಾವು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ಅಂಕಗಳನ್ನು ಮೀರಿ ಸಾಧಿಸಿದವರು ನಮ್ಮ ನಡುವೆ ಇದ್ದಾರೆ. ಹೀಗಾಗಿ ಮಕ್ಕಳನ್ನು ಅಂಕಗಳಿಗೆ ಸೀಮಿತ ಮಾಡದೇ ಅವರನ್ನು ಸಾಧನೆಯ ಹಾದಿಗೆ ಅಣಿಗೊಳಿಸಬೇಕಾದ್ದು, ಪಾಲಕರ ಕರ್ತವ್ಯ. ಅಂಕ ಕಡಿಮೆಯಾಯ್ತು ಎಂದು ದುಃಖಿಸುವವರ ನಡುವೆ ಇಲ್ಲೊಂದು ಕುಟುಂಬ ತಮ್ಮ ಮಗ ಜಸ್ಟ್​ ಪಾಸ್​ ಆದರೂ ಸಂಭ್ರಮಿಸುವ ಮೂಲಕ ಇತರರಿಗೆ ಮಾದರಿಯಾಗಿದೆ.
ಮುಂಬೈ ಮೂಲದ ಕುಟುಂಬವೊಂದು ಅಂಕಗಳ ಆಧಾರದ ಯಶಸ್ಸಿನ ಮಾನದಂಡಕ್ಕೆ ಕೊನೆಯಾಡಿದ್ದಾರೆ. ಹೊಸ ಹಾದಿಯನ್ನು ಹಿಡಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಮಗ 10ನೇ ತರಗತಿ ಬೋರ್ಡ್​ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಿಂದ ಕೇವಲ ಶೇ. 35 ಅಂಕಗಳಿಸಿದರೂ, ಆತನನ್ನು ನಿಂದಿಸದೇ ಅಥವಾ ಕೋಪ ಮಾಡಿಕೊಳ್ಳದೆ ಮಗನ ಸಣ್ಣ ಯಶಸ್ಸನ್ನೂ ಸಂಭ್ರಮಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಐಎಎಸ್​ ಅಧಿಕಾರಿ ಅವನೀಶ್​ ಶರಣ್​ ಅವರು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಬಿಜೆಪಿ ಭೂ ಹಂಚಿಕೆ ಕೈ ತನಿಖೆ: ಆರು ತಿಂಗಳ ಹಿಂದಿನ ಭೂಮಿ ಮಂಜೂರು ಪ್ರಕರಣಗಳ ಪರಾಮರ್ಶೆ
ಮುಂಬೈನ 10ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಶೇ.35 ಅಂಕ ಪಡೆದಿದ್ದಾನೆ. ಆದರೆ ಆತನ ಮೇಲೆ ದುಃಖ ಅಥವಾ ಕೋಪಗೊಳ್ಳುವ ಬದಲು, ಅವನ ಹೆತ್ತವರು ಅವನ ಯಶಸ್ಸನ್ನು ಸಂಭ್ರಮಿಸಿದರು ಎಂದು ಅವನೀಶ್​ ಶರಣ್​ ವಿಡಿಯೋ ಕುರಿತು ಬರೆದುಕೊಂಡಿದ್ದಾರೆ.
ಮೊಬೈಲ್​ ಡಿಸ್​ಪ್ಲೈನಲ್ಲಿ 35 ಎಂದು ಬರೆದಿರುವುದನ್ನು ವಿದ್ಯಾರ್ಥಿ ಮತ್ತು ಪಾಲಕರು ನಗುಮುಖದಿಂದ ಕ್ಯಾಮೆರಾ ಮುಂದೆ ಪ್ರದರ್ಶಿಸಿ, ಥಂಬ್ಸ್​ ಅಪ್​ ಮಾಡಿ ಸಂಭ್ರಮಿಸಿದ್ದಾರೆ.
मुंबई के रहने वाले 10वीं के एक छात्र ने परीक्षा में 35% मार्क्स हासिल किए.
लेकिन उसके माता-पिता ने दुखी या नाराज होने की बजाय उसकी सफलता को सेलिब्रेट किया.pic.twitter.com/fAa6szayiF
— Awanish Sharan 🇮🇳 (@AwanishSharan)June 8, 2023

ಇದನ್ನೂ ಓದಿ:ನೋವುನಿವಾರಕದ ಡಬ್ಬಿ​ ನುಂಗಿ 9 ತಿಂಗಳ ಮಗು ಸಾವು; ಮದ್ವೆಯಾಗಿ 10 ವರ್ಷದ ಬಳಿಕ ಜನಿಸಿದ್ದ ಪುತ್ರಿ!
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದ್ದು, ಮೆಚ್ಚುಗೆ ಮಹಾಪೂರವೇ ಹರಿದುಬರುತ್ತಿದೆ. ಇಂತಹ ಪಾಲಕರನ್ನು ಪಡೆದ ನೀನೆ ಅದೃಷ್ಟವಂತ, ಪ್ರತಿ ವಿದ್ಯಾರ್ಥಿಗಳು ಇಂತಹ ಪಾಲಕರು ಇರಬೇಕು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೊಂದು ಉತ್ತಮ ನಡೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಅಂಕಗಳನ್ನು ಪಡೆಯಲು ಒತ್ತಡ ಹೇರಬಾರದು. ಅವರು ಧನಾತ್ಮಕವಾಗಿ ಉಳಿಯಬೇಕು. ಪೋಷಕರ ಒತ್ತಡವು ಮಕ್ಕಳನ್ನು ಆತಂಕಕ್ಕೆ ಗುರಿಯಾಗುವಂತೆ ಮಾಡುತ್ತದೆ. ಅವರು ಅಸುರಕ್ಷಿತರಾಗುತ್ತಾರೆ ಮತ್ತು ತಮ್ಮ ಸ್ವಂತ ಸಾಮರ್ಥ್ಯದ ಬಗ್ಗೆ ಅನುಮಾನಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದಿದ್ದಾರೆ.(ಏಜೆನ್ಸೀಸ್​)
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರತಿ ವಿಷಯದಲ್ಲಿ 35 ಅಂಕ! ಜಸ್ಟ್​ ಪಾಸ್​ ಆಗಿದ್ದಕ್ಕೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿ

ದೇಶದಲ್ಲಿ 101 ದಶಲಕ್ಷ ಮಂದಿಗೆ ಮಧುಮೇಹ: ಐಸಿಎಂಆರ್ ಮಾಹಿತಿ, ಚಿಕಿತ್ಸಾ ವೆಚ್ಚದಿಂದ ದೇಶ ದುರ್ಬಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
