ಮುಂಬೈ:ಶುಕ್ರವಾರ (ಅ.5) ಗೋರೆಗಾಂವ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಏಂಟು ಜನರು ಸಾವನ್ನಪ್ಪಿದ್ದು, 61 ಮಂದಿ ಗಾಯಗೊಂಡ ಬೆನ್ನಲ್ಲೇ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಗಾಯಗೊಂಡವರಿಗೆ ಉಚಿತ ಚಿಕಿತ್ಸೆಯನ್ನು ಘೋಷಿಸಿದ್ದಾರೆ.
ಇದನ್ನೂ ಓದಿ:ಕೋರಮಂಡಲ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ತಹಸೀಲ್ದಾರ್ ಸ್ಥಳ ಪರಿಶೀಲನೆ
ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಶಿಂಧೆ, ಸಂತ್ರಸ್ತರನ್ನು ಭೇಟಿ ಮಾಡುವಂತೆ ರಕ್ಷಣಾ ಸಚಿವ ಮಂಗಲ್ ಪ್ರಭಾತ್ ಲೋಧಾ ಮತ್ತು ದೀಪಕ್ ಕೇಸರ್ಕರ್ ಅವರಿಗೆ ಸೂಚಿಸಿದರು. ಘಟನೆ ಕುರಿತು ಟ್ವೀಟ್​ ಮಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ಮುಂಬೈನ ಗೋರೆಗಾಂವ್ ಅಗ್ನಿ ದುರಂತದಲ್ಲಿ ಜೀವಹಾನಿಯ ಬಗ್ಗೆ ತಿಳಿದು ತುಂಬ ನೋವಾಗಿದೆ. ನಾವು ನಾಗರಿಕ ಅಧಿಕಾರಿಗಳು ಮತ್ತು ಮುಂಬೈ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ. ಎಲ್ಲಾ ನೆರವು ನೀಡಲಾಗುತ್ತಿದೆ. ಕುಟುಂಬಗಳಿಗೆ ಸಂತಾಪ” ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.
Tragic update on the Jay Bhavani building fire:
The devastating fire has claimed 6 lives, with 2 individuals in critical condition. The situation remains fluid, and authorities are working tirelessly. Our thoughts are with the victims and their families. 🙏🏻#MumbaiFire…pic.twitter.com/0ecY6QlXib
— Sneha Mordani (@snehamordani)October 6, 2023

ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದು, “ಪಿಎಂಎನ್‌ಆರ್‌ಎಫ್‌ನಿಂದ ಪ್ರತಿ ಮೃತರ ಮುಂದಿನ ಸಂಬಂಧಿಕರಿಗೆ ಎರಡು ಲಕ್ಷ ರೂ. ಪರಿಹಾರ ಹಣವನ್ನು ನೀಡಲಾಗುವುದು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ರಕ್ತದಾನದ ಮೂಲಕ ಸಮಾಜಸೇವೆಯಲ್ಲಿ ತೊಡಿಗಿಸಿಕೊಳ್ಳಿ:ಬಿ.ಕೆ.ರವಿಕಾಂತ್
ಘಟನೆಯ ವಿವರ:ಗುರುವಾರ (ಅ.5) ಮುಂಜಾನೆ 3:05ಕ್ಕೆ ಗೋರೆಗಾಂವ್ ಪಶ್ಚಿಮದಲ್ಲಿರುವ ಆಜಾದ್ ಮೈದಾನದ ಸಮೀಪದಲ್ಲಿರುವ ಏಳು ಅಂತಸ್ತಿನ SRA ‘ಜಯ್ ಭವಾನಿ’ ಕಟ್ಟಡದಲ್ಲಿ ಅಗ್ನಿ ಕಾಣಿಸಿಕೊಂಡಿತು. 2ನೇ ಹಂತದ ಬೆಂಕಿಯನ್ನು ಬೆಳಗ್ಗೆ 6:54ಕ್ಕೆ ನಂದಿಸಲಾಯಿತು.
Pained to know about loss of lives in the fire incident at#Goregaon, Mumbai.We are in touch with BMC & Mumbai Police officials & all the assistance is being provided.My deepest condolences to the families who lost their loved ones and wishing speedy recovery to the injured…
— Devendra Fadnavis (@Dev_Fadnavis)October 6, 2023

ಬಿಎಂಸಿ ಪ್ರಕಾರ, ಘಟನೆಯಲ್ಲಿ 68 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಕೂಪರ್, ಎಚ್‌ಬಿಟಿ ಆಸ್ಪತ್ರೆ ಜೋಗೇಶ್ವರ್, ಲೈಫ್‌ಲೈನ್, ಮಾತೋಶ್ರೀ ಗೋಮತಿ ಮತ್ತು ಸುವಿಧಾ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದೆ,(ಏಜೆನ್ಸೀಸ್).
‘ಸಪ್ತ ಸಾಗರದಾಚೆ ಎಲ್ಲೋ’ ವೀಕ್ಷಿಸಿದ ಪ್ರಕಾಶ್​ ರೈ​; ಚಿತ್ರತಂಡಕ್ಕೆ ಹೇಳಿದ್ದಿಷ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + one =
Remember me
