ಮುಂಬೈ:ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಗ್​ನಲ್ಲಿ ಬಾಂಬ್​ ಇದೆ ಎಂದು ಮಹಿಳೆಯೊಬ್ಬಳು ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ.
ಕಳೆದ ಸೋಮವಾರ ದಕ್ಷಿಣ ಮುಂಬೈನ 40 ವರ್ಷದ ಗೃಹಿಣಿಯೊಬ್ಬಳು, ಮುಂಬೈ-ಕೋಲ್ಕತ್ತಾ ವಿಮಾನದ ಚೆಕ್-ಇನ್ ಕೌಂಟರ್ ತಲುಪಿದ ನಂತರ ಏರ್​ಪೋರ್ಟ್​ ಸಿಬ್ಬಂದಿಗೆ ಬೋರ್ಡಿಂಗ್ ಪಾಸ್ ಜತೆಗೆ ಎರಡು ಬ್ಯಾಗ್​ಗಳನ್ನು ನೀಡಿದ್ದಾಳೆ.ಏರ್‌ಲೈನ್‌ನ ನಿಯಮಗಳ ಪ್ರಕಾರ, ಪ್ರಯಾಣಿಕನು ತನ್ನ ಜತೆಗೆ ಗರಿಷ್ಠ 15 ಕೆಜಿ ತೂಕದ ಒಂದು ಬ್ಯಾಗ್​ ಮಾತ್ರ  ತನ್ನೊಂದಿಗೆ ಉಚಿತವಾಗಿ ಒಯ್ಯಬಹುದಾಗಿದೆ.
ಇದನ್ನೂ ಓದಿ:ಒಡಿಶಾ ರೈಲು ದುರಂತ: ಏರುತ್ತಲೇ ಇದೆ ಸಾವಿನ ಸಂಖ್ಯೆ, 238 ಮಂದಿ ಮೃತ, 900ಕ್ಕೂ ಹೆಚ್ಚು ಮಂದಿಗೆ ಗಾಯ
ಆದರೆ ಈ ವೇಳೆ ಮಹಿಳೆಯ ಬ್ಯಾಗ್​ 22.ಕೆಜಿ ಇದ್ದ ಕಾರಣ ಏರ್​ಪೋರ್ಟ್ ಸಿಬ್ಬಂದಿ ಹೆಚ್ಚುವರಿ ತೂಕಕ್ಕೆ ಹಣ ಪಾವತಿಸುವಂತೆ ಹೇಳಿದ್ದಾರೆ. ಆದರೆ ಇದಕ್ಕೆ ನಿರಾಕರಿಸಿದ ಮಹಿಳೆಯು, ಸಿಬ್ಬಂದಿಯೊಡನೆ ವಾಗ್ವಾದಕ್ಕೆ ಇಳಿದು ತನ್ನ ಬ್ಯಾಗ್​​ನಲ್ಲಿ ಬಾಂಬ್​ ಇದೆ ಎಂದಿದ್ದಾಳೆ. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿ ಇತರ ಪ್ರಯಾಣಿಕರಿಗೂ ಗಾಬರಿಯನ್ನುಂಟು ಮಾಡಿತು.
ಕೂಡಲೇ ಕರ್ತವ್ಯನಿರತ ಭದ್ರತಾ ಪಡೆ ಸಿಬ್ಬಂದಿ ಆಕೆಯ ಬ್ಯಾಗ್​​ನ್ನು ಪರಿಶೀಲಿಸಿದ್ದು, ಅದರಲ್ಲಿ ಅನುಮಾನಾಸ್ಪದವಾಗಿ ಯಾವ ವಸ್ತುಗಳು ಕಂಡುಬಂದಿಲ್ಲ. ನಂತರ ಮಹಿಳೆಯನ್ನು ಸಹಾರ್ ಪೊಲೀಸರಿಗೆ ಹಸ್ತಾಂತರಿಸಿ ಆಕೆಯ ವಿರುದ್ಧ ಜೀವ ಮತ್ತು ಇತರರ ಸುರಕ್ಷತೆಗೆ ಧಕ್ಕೆ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಿದ್ದು, ಗೌಪ್ಯತೆಯ ಕಾರಣದಿಂದಾಗಿ ಪೊಲೀಸರು ಮಹಿಳೆಯ ಗುರುತನ್ನು ಬಿಡುಗಡೆ ಮಾಡಿಲ್ಲ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
