ಮುಂಬೈ:ಮಹಾರಾಷ್ಟ್ರ ದೇಶದಲ್ಲೇ ಕರೊನಾ ವೈರಸ್​ನಿಂದ ಹೆಚ್ಚು ಬಾಧಿತವಾಗಿರುವ ರಾಜ್ಯ. ಅದರಲ್ಲೂ ಮುಂಬೈನಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು, ವೈರಸ್​ ತಡೆಗಟ್ಟುವ ಸಲುವಾಗಿ ಸರ್ಕಾರ ಸಾಮೂಹಿಕ ಪರೀಕ್ಷೆಗೆ ನಿರ್ಧರಿಸಿದೆ. ಅದಕ್ಕಾಗಿ ಮುಂಬೈ ಮೊದಲ ಮೊಬೈಲ್​ ಕರೊನಾ ವೈರಸ್​ ಟೆಸ್ಟಿಂಗ್​ ಬಸ್​ ಅನ್ನು ಪಡೆದುಕೊಂಡಿದೆ.
ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ತೊಪೆ ಹಾಗೂ ಪರಿಸರ ಸಚಿವ ಆದಿತ್ಯ ಠಾಕ್ರೆ ಅವರು ಬೃಹನ್​ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಆಯುಕ್ತರಾದ ಪ್ರವೀಣ್​ ಪರ್ದೇಸಿ ಜತೆಗೂಡಿ ಶುಕ್ರವಾರ ಮೊಬೈಲ್​ ಕರೊನಾ ಟೆಸ್ಟಿಂಗ್​ ಬಸ್​ ಅನ್ನು ಉದ್ಘಾಟಿಸಿದರು. ವರ್ಲಿಯಲ್ಲಿರುವ ನ್ಯಾಶನಲ್​ ಸ್ಪೋರ್ಟ್ಸ್​ ಕ್ಲಬ್​ ಆಫ್​ ಇಂಡಿಯಾ ಮೈದಾನದಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಬಸ್​ ಉದ್ಘಾಟಿಸಿದರು.

ಸರ್ವಸಾಧನ ಸಲಕರಣೆಗಳನ್ನು ಹೊಂದಿರುವ ಕರೊನಾ ಟೆಸ್ಟಿಂಗ್​ ಲ್ಯಾಬ್ ಅನ್ನು ಬಸ್​ ಹೊಂದಿದೆ. ಎಕ್ಸ್​ ರೇ ಪರೀಕ್ಷಾ ಸೌಲಭ್ಯ ಸಹ ಇದೆ. ಇನ್ನಿತರ ಸೌಲಭ್ಯಗಳನ್ನು ಶೀಘ್ರದಲ್ಲಿ ಅಳವಡಿಸಲಾಗುತ್ತದೆ. ಬಸ್​ ಒಳಗೆ ಚಿಕ್ಕದಾದ ಛೇಂಬರ್​ ಇದ್ದು, ಅಲ್ಲಿ ಕರೊನಾ ಟೆಸ್ಟಿಂಗ್​ ನಡೆಯುತ್ತದೆ.
ಇದನ್ನೂ ಓದಿ:ತನ್ನ ಕುಟುಂಬವನ್ನೇ ಸರ್ವನಾಶ ಮಾಡಿದ ಪಾಪಿ: ತಂದೆ, ತಾಯಿ, ಅಣ್ಣ, ಅತ್ತಿಗೆ, ಮಕ್ಕಳಿಬ್ಬರನ್ನು ಕೊಂದು ಪೊಲೀಸರಿಗೆ ಶರಣು
ಸಾಮೂಹಿಕ ಪರೀಕ್ಷೆಗೆ ಬಳಸಲಾಗುತ್ತಿರುವ ಮೊದಲ ಮೊಬೈಲ್​ ಕೋವಿಡ್​-19 ಟೆಸ್ಟಿಂಗ್​ ಬಸ್​ ಇದಾಗಿದೆ. ಇದರಲ್ಲಿ O2 ಸ್ಯಾಚುರೇಶನ್ ಸಂಯೋಜನೆಯನ್ನು ಬಳಸಲಾಗುತ್ತದೆ. ಕರೊನಾ ವೈರಸ್​ ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ಆಧಾರಿತ ಎಕ್ಸ್​ರೇಯಂತಹ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ.
ಬಸ್​ನಲ್ಲಿ ಆರ್​ಟಿ-ಪಿಸಿಆರ್​ ಸ್ವ್ಯಾಬ್​ ಸಂಗ್ರಹ ಸೌಲಭ್ಯವು ಇದೆ. ಇದು ವಿವಿಧ ಸ್ಲಂಗಳಿಗೆ ತೆರಳಿ ಪರೀಕ್ಷಿಸಿ ಹೆಚ್ಚು ತೊಂದರೆಯಲ್ಲಿರುವ ಸೋಂಕಿತನನ್ನು ಪ್ರತ್ಯೇಕಿಸುತ್ತದೆ ಎಂದು ಬಿಎಂಸಿ ಹೇಳಿದೆ.

ಕೋವಿಡ್​-19 ಟೆಸ್ಟಿಂಗ್​ ಬಸ್​ ಅನ್ನು ಕೆಆರ್​ಎಸ್​ಎನ್​ಎಎ ಡಯಾಗ್ನೋಸ್ಟಿಕ್​ ಮತ್ತು ಐಐಟಿ ಹಳೇ ವಿದ್ಯಾರ್ಥಿ ಮಂಡಳಿ ಸಹಕಾರದಿಂದ ತಯಾರಿಸಲಾಗಿದ್ದು, ಕ್ಲೌಡ್​ ಟ್ರಾನ್ಸ್​ಫಾರ್ಮ್​, ವಿಕಿರಣ ವಿಭಾಗದ ಪರಿಣಿತರು ಮತ್ತು ವೈದ್ಯರ ಸಹಾಯದಿಂದ ಕರೊನಾ ಟೆಸ್ಟಿಂಗ್​ ಬಸ್​ ರೋಗಿಗಳನ್ನು ಸುಲಭವಾಗಿ ಪತ್ತೆಹಚ್ಚಲಿದೆ.
ಇದನ್ನೂ ಓದಿ:ಸುಳ್ಳು ಹೇಳಿ ಬಾಯ್​ಫ್ರೆಂಡ್​ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?​
ಈ ರೀತಿಯ ಮತ್ತಷ್ಟು ಬಸ್​ಗಳನ್ನು ವಿನ್ಯಾಸಗೊಳಿಸಲು ಬಿಎಂಸಿ ಯೋಜನೆ ರೂಪಿಸಿದೆ.(ಏಜೆನ್ಸೀಸ್​)
ವಿದ್ಯುತ್ ಬಿಲ್ ನೀಡಲು ತೆರಳಿದ ಮನೆ ಮಾಲೀಕರು ನವ ದಂಪತಿಯ ಸ್ಥಿತಿ ಕಂಡು ಕಂಗಾಲಾಗಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eleven =
Remember me
