ಮುಂಬೈ:ತೃತೀಯಲಿಂಗಿಗಳು ಇಂದಿಗೂ ಸಾಕಷ್ಟು ತಾರತಮ್ಯವನ್ನು ಎದುರಿಸುತ್ತಿದ್ದಾರೆ. ತಮ್ಮ ಅಸ್ತಿತ್ವ ಮತ್ತು ಸಮಾನ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. ಮಂಗಳಮುಖಿಯರ ಸಮುದಾಯದ ಜನರನ್ನು ಸಬಲರನ್ನಾಗಿಸಲು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮುಂಬೈನಲ್ಲಿ ಟ್ರಾನ್ಸ್‌ಜೆಂಡರ್ ಸಲೂನ್ ಪ್ರಾರಂಭಿಸಲಾಗಿದೆ. ಈ ಸಲೂನ್​​ ಅನ್ನು 7 ಜನ ತೃತೀಯಲಿಂಗಿಗಳು ಸೇರಿ ನಡೆಸಲಿದ್ದಾರೆ.
ಮುಂಬೈನಲ್ಲಿ ಸಲೂನ್ ಒಂದನ್ನು ತೆರೆಯಲಾಗಿದ್ದು, ಇದನ್ನು ಮಂಗಳಮುಖಿಯರೇ ಆರಂಭಿಸಿ ಅವರೇ ನಡೆಸಿಕೊಂಡು ಹೋಗುತ್ತಿದ್ದಾರೆ. ಸಮುದಾಯಕ್ಕೆ ಹಣಕಾಸಿನ ಸ್ವಾತಂತ್ರ‍್ಯದ ದಾರಿ ತೋರಿ, ಸಬಲೀಕರಣಗೊಳಿಸಲು ಮಂಗಳಮುಖಿಯರು ಮುಂದಾಗಿದ್ದಾರೆ. ಜ಼ೈನಾಬ್ ಎಂಬ ಮಂಗಳಮುಖಿ ಈ ಸಲೂನ್‌ನ ಮಾಲೀಕರಾಗಿದ್ದಾರೆ.
ಇದನ್ನೂ ಓದಿ:‘ಕಥಕ್ಕಳಿ’ ನೃತ್ಯದ ಪ್ರಕಾರ ಮಾತ್ರವಲ್ಲ ಊರಿನ ಹೆಸರು ಹೌದು..!; ಈ ಸುದ್ದಿ ಓದಿ..ಜ಼ೈನಾಬ್ ಮಾತನಾಡಿ, “ತಮ್ಮ ಸಮುದಾಯದ ಮಂದಿಗೆ ಇನ್ನಷ್ಟು ಬಲ ತುಂಬುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ತಮ್ಮ ಸಲೂನ್‌ನಲ್ಲಿ ಮಂಗಳಮುಖಿಯರಿಗೆ ಕೆಲಸದ ತರಬೇತಿ ಕೊಟ್ಟು ವೃತ್ತಿಯ ಅವಕಾಶಗಳನ್ನು ಸೃಷ್ಟಿಸಲಾಗುವುದು. ಡಾಯಿಟ್ಶೆ ಬ್ಯಾಂಕ್ ಹಾಗೂ ಬಾಂಬೆ ರೋಟರಿ ಕ್ಲಬ್ ಸಹಯೋಗದಲ್ಲಿ ಈ ಸಲೂನ್ ಆರಂಭಿಸಲಾಗಿದೆ” ಎಂದು ಹೇಳಿದ್ದಾರೆ.
ತೃತೀಯಲಿಂಗಿ ಸಮುದಾಯ ಜನರು ಸಾಮಾಜದಲ್ಲಿ ಗುರುತಿಸಿಕೊಂಡು ಸ್ವಂತ ಉದ್ಯೋಗವನ್ನು ಪಡೆದುಕೊಳ್ಳಲು ಇದು ದೈತ್ಯ ಜಿಗಿತವಾಗಿದೆ ಎಂದು ಹೇಳಲಾಗುತ್ತಿದೆ.
ತಂದೆ ಮೃತ್ಯು: 5 ವರ್ಷದ ಮಗನ ಕೈ ಹಿಡಿದ ಪೊಲೀಸ್‌ ಹುದ್ದೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six + 12 =
Remember me
