ಬೆಂಗಳೂರು:ಯುವತಿಯೊಬ್ಬಳು ಪಾನಮತ್ತಳಾಗಿ ಮುಂಬೈನಲ್ಲಿ ಕುಳಿತು ಬೆಂಗಳೂರಿನ ಬಿರಿಯಾನಿ ಆರ್ಡರ್ ಮಾಡಿದ್ಲಾ?– ಹೀಗೆನ್ನಬಹುದಾದ ಸಂಗತಿಯೊಂದು ಟ್ವಿಟರ್​ನಲ್ಲಿ ಚರ್ಚೆಯಾಗಿ ಗಮನ ಸೆಳೆದಿದ್ದಲ್ಲದೆ, ಅದಕ್ಕೆ ಜೊಮ್ಯಾಟೊ ಕೂಡ ಪ್ರತಿಕ್ರಿಯೆ ನೀಡಿದೆ.
@_subiii_ ಎಂಬ ಹ್ಯಾಂಡಲ್ ಹೊಂದಿರುವ ಯುವತಿ ಜೊಮ್ಯಾಟೊದಲ್ಲಿ ತಾನು ಬಿರಿಯಾನಿ ಬುಕ್ ಮಾಡಿದ್ದ ಬಗ್ಗೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಳು. ಆರ್ಡರ್​ನ ಸ್ಕ್ರೀನ್​ಶಾಟ್ ಹಾಕಿದ್ದ ಆಕೆ, ‘ನಾನು ಕುಡಿದು 2,500 ರೂ. ಮೌಲ್ಯದ ಬಿರಿಯಾನಿ ಬೆಂಗಳೂರಿನಿಂದ ಆರ್ಡರ್ ಮಾಡಿದ್ನಾ?’ ಎಂಬುದಾಗಿ ಕೇಳಿಕೊಂಡಿದ್ದಳು.
ಆಕೆಯ ಈ ಟ್ವೀಟ್​ಗೆ ಭಾರಿ ಪ್ರತಿಕ್ರಿಯೆ ಬಂದಿದೆ ಎನ್ನಲಾಗಿದ್ದು, ಜೊಮ್ಯಾಟೊದ ಅಧಿಕೃತ ಹ್ಯಾಂಡಲ್​ಗಳಲ್ಲಿ ಒಂದಾದ ಜೊಮ್ಯಾಟೊ ಕೇರ್​ ಕೂಡ ಅದಕ್ಕೆ ಪ್ರತಿಕ್ರಿಯಿಸಿದೆ. ಆರ್ಡರ್​ ನಿಮ್ಮಲ್ಲಿಗೆ ಬಂದ ಬಳಿಕ ನಿಮಗೆ ಹ್ಯಾಪಿ ಹ್ಯಾಂಗೋವರ್ ಆಗಿರಲಿದೆ. ನಿಮ್ಮ ಅನುಭವ ಆಮೇಲೆ ಹಂಚಿಕೊಳ್ಳಿ ಎಂಬುದಾಗಿ ಈ ಖಾತೆಯಿಂದ ಪ್ರತಿಕ್ರಿಯೆ ನೀಡಲಾಗಿತ್ತು. ಬಹುಶಃ ಆ ಯುವತಿ ಅದಾಗಲೇ ಹ್ಯಾಂಗೋವರ್​ನಿಂದ ಹೊರಬಂದಿರಬಹುದೇನೋ ಎಂಬಂತೆ ಆಕೆ ಈತ ತನ್ನ ಟ್ವಿಟರ್​ ಖಾತೆ ಡಿಲೀಟ್ ಮಾಡಿದಂತಿದೆ. –ಏಜೆನ್ಸೀಸ್
Subii, you'll have a happy hangover once the order is at your doorstep. Do let us know about the experience 🫶 🤗
— zomato care (@zomatocare)January 21, 2023

ದೇವರ ಹುಂಡಿಯಲ್ಲಿ ಸಿಕ್ಕಿತು ವಿಕೃತ ಕೋರಿಕೆಯ ಹರಕೆ ಚೀಟಿ; ನರಳಿ ನರಳಿ ಸಾಯಲಿ ಎಂದು ಬೇಡಿಕೆ!

ಅದೇ ಕೊನೇ ಊಟ, ಕೊನೆಯ ಕೂಟ; ತಹಸೀಲ್ದಾರ್​ ಕಚೇರಿ ಆಯೋಜಿಸಿದ್ದ ಪಾರ್ಟಿಯಲ್ಲಿ ನೌಕರನ ಸಾವು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × five =
Remember me
