ಮುಂಬೈ:ಮದುವೆ ಎಂದರೆ ಸಂಪ್ರದಾಯ, ಜಾತಿ,ಹುಡುಗ, ಹುಡುಗಿ ಹೀಗೆ ಹಲವು ವಿಚಾರಗಳು ಮುಖ್ಯವಾಗುತ್ತವೆ.  ವಾರದ ಹಿಂದಿನಿಂದಲೇ ಮದುವೆ ಆಚರಣೆಗಳು ಶುರುವಾಗುತ್ತವೆ. ಸಂಪ್ರದಾಯ, ಪೂಜೆ, ಪದ್ಧತಿಗಳನ್ನು ಪಾಲಿಸಿ ವಧು – ವರರು ಸುಸ್ತಾಗುತ್ತಾರೆ.  ಮದುವೆ ನಿಶ್ಚಯವಾದ್ಮೇಲೆ ಪಾಲಕರು ಹೇಳ್ತಿರುವ ಆಚರಣೆಯಿಂದ ಕಷ್ಟವಾಗುತ್ತಿದೆ  ಎಂದು ವಧು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.
ಯುವತಿ ಸೋಶಿಯಲ್​​ ಮೀಡಿಯಾದಲ್ಲಿ ಹೇಳಿದ್ದೇನು:ನನಗೆ ಮದುವೆ ನಿಶ್ಚಯವಾಗಿದೆ. ಮದುವೆಗೆ ಮೊದಲು ಮಣ್ಣಿನ ಮಡಿಕೆ ಜತೆ ಮದುವೆ ಆಗುವಂತೆ ಪಾಲಕರು ಒತ್ತಾಯ ಮಾಡ್ತಿದ್ದಾರೆ. ಮಡಿಕೆ ಜತೆ ಮೊದಲ ಮದುವೆ ನಡೆದ್ರೆ, ಮದುವೆಯಾಗುವ ಪತಿ ಆಯಸ್ಸು ಹೆಚ್ಚಾಗುತ್ತದೆ. ದಾಂಪತ್ಯದಲ್ಲಿ ಯಾವುದೇ ಬಿರುಕು ಕಾಣಿಸಿಕೊಳ್ಳುವುದಿಲ್ಲವೆಂದು  ಹೇಳ್ತಿದ್ದಾರೆ.ನಾನು ನಾಸ್ತಿಕಳಾಗಿದ್ದು, ಮಣ್ಣಿನ ಮಡಿಕೆ ಜತೆ ಮದುವೆಯಾಗಲು ನನಗೆ ಇಷ್ಟವಿಲ್ಲ. ನನ್ನ ಮನಸ್ಸಿಗೆ ವಿರುದ್ದವಾಗಿ ನಾನು ಈ ಕೆಲಸ ಮಾಡೋದಿಲ್ಲ. ಆದ್ರೆ ಮನೆಯಲ್ಲಿ ತಂದೆ – ತಾಯಿ ಇಡೀ ದಿನ ಇದೇ ವಿಷ್ಯವನ್ನು ಚರ್ಚಿಸುತ್ತಿದ್ದಾರೆ. ನನಗೆ ಒತ್ತಡ ಹೇರ್ತಿದ್ದಾರೆ. ಇದ್ರಿಂದ ಮಾನಸಿಕ ಕಿರಿಕಿರಿ ಆಗುತ್ತಿದೆ. ತಾಯಿ ಬಿ.ಕಾಮ್ ಪದವೀಧರೆ. ತಂದೆ ಇಂಜಿನಿಯರ್ ಮುಗಿಸಿದ್ದಾರೆ. ಆದ್ರೂ ಹಳೆ ಪದ್ಧತಿಯನ್ನು ಪಾಲಿಸುವಂತೆ ನನಗೆ ಹೇಳ್ತಿದ್ದಾರೆ. ನಾನೇನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಯುವತಿ  ಪ್ರಶ್ನೆ ಕೇಳಿದ್ದಾಳೆ.

ಈ ಪೋಸ್ಟ್​​ ಸೋಶಿಯಲ್​​  ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು  ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಮಣ್ಣಿನ ಮಡಿಕೆಗೆ ಈ ಸ್ಥಿತಿ ಬರಬಾರದಿತ್ತು ಕಾಮೆಂಟ್​​ ಮಾಡುತ್ತಿದ್ದಾರೆ.
ಮಡಿಕೆ ಮದುವೆ ಸಂಪ್ರದಾಯ:ಜಾತಕದಲ್ಲಿ ಕೆಲ ದೋಷವಿದ್ದಾಗ ಈ ಮಣ್ಣಿನ ಮಡಿಕೆಗೆ ವಿವಾಹ ನಡೆಯುತ್ತದೆ. ಮಂಗಳ ಗ್ರಹ ಸೌಮ್ಯ ಅಥವಾ ಪೂರ್ಣ ಪ್ರಭಾವದ ಅಡಿಯಲ್ಲಿ ಜನಿಸಿದ ಪುರುಷರು ಮತ್ತು ಮಹಿಳೆಯರನ್ನು ಮಾಂಗ್ಲಿಕ್ ಅಥವಾ ಮಂಗಳ ಶಾಪಗ್ರಸ್ತ  ಎಂದು ಕರೆಯುತ್ತಾರೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ:ಇವರ ಮದುವೆ ಮುರಿದು ಬೀಳುವ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ಮೊದಲು ಅವರಿಗೆ ಮಡಿಕೆ ಜೊತೆ ಮದುವೆ ಮಾಡಿಸಲಾಗುತ್ತದೆ. ಕೆಲವೊಮ್ಮೆ ಮರ ಅಥವಾ ಯಾವುದಾದ್ರೂ ಪ್ರಾಣಿ ಜತೆ ಮದುವೆ ಮಾಡುವ ಪದ್ಧತಿಯೂ ಜಾರಿಯಲ್ಲಿದೆ. ಹೀಗೆ ಮಾಡಿದ್ರೆ ಎರಡನೇ ಮದುವೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬುದು ಜನರ ನಂಬಿಕೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
