ಮುಂಬೈ:ಕೊರೊನಾ ಸೋಂಕಿತರು ಹಾಗೂ ಶಂಕಿತರಿಗೆ ಚಿಕಿತ್ಸೆ ನೀಡಲೆಂದು ಕರೆ ತಂದಿದ್ದೇ ಈ ಆಸ್ಪತ್ರೆಗೆ ಮುಳುವಾಗಿದೆ. ಇದೀಗ ಆಸ್ಪತ್ರೆಗೆ ದಿಗ್ಬಂಧನ ವಿಧಿಸಲಾಗಿದ್ದು, ಕರೊನಾ ಪರೀಕ್ಷೆಯಲ್ಲಿ ನೆಗೆಟಿವ್​ ಫಲಿತಾಂಶ ಬರದ ಹೊರತು ಯಾರನ್ನೂ ಇಲ್ಲಿಂದ ಹೊರ ಬಿಡುವಂತಿಲ್ಲ, ಜತೆಗೆ ಬೇರಾರಿಗೂ ಈ ಆಸ್ಪತ್ರೆಗೆ ಪ್ರವೇಶ ನೀಡಲಾಗುತ್ತಿಲ್ಲ. ಏಕೆಂದರೆ, ಇಲ್ಲಿನ 26 ನರ್ಸ್​ಗಳು ಹಾಗೂ ಮೂರು ವೈದ್ಯರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ.
ಮುಂಬೈನಲ್ಲಿರುವ ವೋಕಾರ್ಡ್​ ಆಸ್ಪತ್ರೆಗೆ ಕಳೆದ ಮಾರ್ಚ್​ 20ರಂದು ಕಸ್ತೂರಬಾ ಆಸ್ಪತ್ರೆಯಿಂದ ಕೋವಿಡ್​-19 ಪೀಡಿತರನ್ನು ಚಿಕಿತ್ಸೆಗೆಂದು ಕರೆತರಲಾಗಿತ್ತು. ಈ ಪೈಕಿ ಇಬ್ಬರು ರೋಗಿಗಳಿಗೆ ಐಸೋಲೇಷನ್​ ವಾರ್ಡ್​ನಲ್ಲಿ ಇರಿಸಲಾಗಿತ್ತು. ಇನ್ನಿಬ್ಬರು ಶಂಕಿತರನ್ನು ಇತರ ರೋಗಿಗಳಿರುವ ಸಾಮಾನ್ಯ ತುರ್ತು ನಿಗಾ ಘಟಕದಲ್ಲಿಟ್ಟು (ಐಸಿಯು) ಆರೈಕೆ ಮಾಡಲಾಗುತ್ತಿತ್ತು.
ಇವರಿಗೆ ಚಿಕಿತ್ಸೆ ನೀಡುತ್ತಿದ್ದ ಸಾಮಾನ್ಯ ತುರ್ತು ನಿಗಾ ಘಟಕದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ನರ್ಸ್​ಗಳಿಗೆ ಮಾರ್ಚ್​ 28ರಂದು ಕರೊನಾ ಸೋಂಕು ತಗುಲಿರುವುದು ಖಚಿತವಾಗಿತ್ತು. ಇದಾದ ಬಳಿಕ ಹಲವರಿಗೆ ಸೋಂಕು ವ್ಯಾಪಿಸಿದೆ ಎಂದು ಹೇಳಲಾಗಿದೆ. ಇದೀಗ 26 ನರ್ಸ್​ಗಳು ಹಾಗೂ ಮೂವರು ವೈದ್ಯರಿಗೆ ಸೋಂಕು ವ್ಯಾಪಿಸಿರುವುದು ದೃಢಪಟ್ಟಿದೆ.
ಹೀಗಾಗಿ ಇಡೀ ಆಸ್ಪತ್ರೆಯನ್ನೇ ಕರೊನಾ ಸೋಂಕಿತ ಪ್ರದೇಶ ಎಂದು ಬೃಹತ್​ ಮುಂಬೈ ಮಹಾನಗರ ಪಾಲಿಕೆ ಘೋಷಣೆ ಮಾಡಿದೆ. ಆಸ್ಪತ್ರೆಯಲ್ಲಿರುವ ಎಲ್ಲರನ್ನೂ ಕರೊನಾ ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ನೆಗೆಟಿವ್​ ಬಂದವರನ್ನಷ್ಟೇ ಹೊರಗೆ ಬಿಡಲಾಗುತ್ತಿದೆ. ಆಸ್ಪತ್ರೆಗೆ ಬೇರಾವ ರೋಗಿಗಳು ಹಾಗೂ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪಾಲಿಕೆ ಆದೇಶ ಹೊರಡಿಸಿದೆ.
ಆಸ್ಪತ್ರೆಯ ನಿರ್ಲಕ್ಷ್ಯದ ಕಾರಣದಿಂದಾಗಿ ಅಲ್ಲಿದ್ದ 300 ಸಿಬ್ಬಂದಿಯನ್ನು ಕ್ವಾರಂಟೈನ್​ಗೆ ಗುರಿಪಡಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
VIDEO: ಲಾಕ್​ಡೌನ್​ ಮೀರಿ ಈಸ್ಟರ್​ ಸಂಡೇ ಪ್ರಾರ್ಥನೆಗೆ ಚರ್ಚ್​ಗೆ ಬರಲು ಅವಕಾಶ ನೀಡದ ಪಾದ್ರಿ; ಬದಲಿಗೆ ಭಕ್ತರ ಫೋಟೋ ತರಿಸಿಕೊಂಡ್ರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eighteen =
Remember me
