ಮುಂಬೈ:ಮುಂಬೈ ಇಂಡಿಯನ್ಸ್‌ನ ಇಎಸ್‌ಎ(ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ) ದಿನದಂದು ತಂಡದ ಮಾಲೀಕರಾದ ನೀತಾ ಅಂಬಾನಿ 18 ಸಾವಿರ ಮಕ್ಕಳೊಂದಿಗೆ  ವಾಂಖೆಡೆ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯವನ್ನು ವೀಕ್ಷಿಸಿದರು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 17ನೇ ಸೀಸನ್‌ನ 20ನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾದವು. ಇಂದು ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ವೇಳೆ ಮುಂಬೈ ಜೆರ್ಸಿಯಲ್ಲಿ 18 ಸಾವಿರ ಮಕ್ಕಳು ವಾಂಖೆಡೆ ಸ್ಟೇಡಿಯಂನಲ್ಲಿ ಕುಳಿತು ನೇರವಾಗಿ ಪಂದ್ಯ ವೀಕ್ಷಿಸಿದರು.
ಈ ಪಂದ್ಯಕ್ಕೆ ಅಂಬಾನಿ ಸಮೂಹದ ಕಂಪನಿಗಳ ಪರವಾಗಿ ಸಾವಿರಾರು ಶಾಲಾ ವಿದ್ಯಾರ್ಥಿಗಳನ್ನು ಕರೆತರಲಾಗುತ್ತದೆ. ಐಪಿಎಲ್ ಟಿಕೆಟ್‌ಗಳು ಮಾರಾಟವಾಗುವ ಮೊದಲು, ಮಕ್ಕಳನ್ನು ಯಾವ ಪಂದ್ಯಕ್ಕೆ ಕರೆತರಬೇಕೆಂದು ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ನಿರ್ಧರಿಸುತ್ತದೆ. ಈ ಕ್ರಮದಲ್ಲಿ ರಿಲಯನ್ಸ್ ಫೌಂಡೇಶನ್ ಮುಂಬೈ ಇಂಡಿಯನ್ಸ್ ಆಡಿದ ಪಂದ್ಯವನ್ನು ಲೈವ್ ವೀಕ್ಷಿಸಲು ಮುಂಬೈನ ವಿವಿಧ ಎನ್‌ಜಿಒಗಳಿಂದ ಸಾವಿರಾರು ಮಕ್ಕಳನ್ನು ಕರೆತಂದಿತು.
A post shared by JioCinema (@officialjiocinema)

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ವಿಭಾಗವಾದ ರಿಲಯನ್ಸ್ ಟ್ರಸ್ಟ್‌ನಿಂದ ಇಎಸ್‌ಎ ದಿನವನ್ನು ಆಯೋಜಿಸಲಾಗಿದೆ, ಇದು ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ(ಇಎಸ್‌ಎ ದಿನ)ಎಂಬ ವಿಷಯದಡಿಯಲ್ಲಿ. 2010 ರಲ್ಲಿ ಪ್ರಾರಂಭವಾದಾಗಿನಿಂದ, ಇದು ಸಾವಿರಾರು ಮಕ್ಕಳಿಗೆ ಜೀವನವನ್ನು ಬದಲಾಯಿಸುವ ಅವಕಾಶಗಳನ್ನು ಒದಗಿಸುತ್ತಿದೆ.
ಮುಂಬೈನ ವಿವಿಧ ಎನ್‌ಜಿಒಗಳ 18,000 ಮಕ್ಕಳ ಸಮ್ಮುಖದಲ್ಲಿ ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್ ವಿರುದ್ಧ  ಜಯವನ್ನು ಗಳಿಸಿದ ಸಂದರ್ಭದಲ್ಲಿ, ಮುಂಬೈ ಇಂಡಿಯನ್ಸ್‌ನ ಮಾಲೀಕರಾದ ಶ್ರೀಮತಿ ನೀತಾ ಅಂಬಾನಿ ಮತ್ತು ಮುಂಬೈ ಇಂಡಿಯನ್ಸ್ ಐಕಾನ್ ಸಚಿನ್ ತೆಂಡೂಲ್ಕರ್ ಇಎಸ್ಎ ದಿನದ ವಿಶೇಷತೆಯನ್ನು ಕುರಿತು ಮಾತನಾಡಿ ಸಂತಸವ್ಯಕ್ತಪಡಿಸಿದ್ದಾರೆ.
ವಾಂಖೆಡೆ ಸ್ಟೇಡಿಯಂನಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯಕ್ಕೆ 18,000 ಹುಡುಗಿಯರು ಮತ್ತು ಹುಡುಗರು ಸಾಕ್ಷಿಯಾದರು. ಮುಂಬೈ ಇಂಡಿಯನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ CSR ಆರ್ಮ್, ರಿಲಯನ್ಸ್ ಫೌಂಡೇಶನ್ ಸಹಭಾಗಿತ್ವದಲ್ಲಿ, ನೀತಾ ಅಂಬಾನಿಯವರ ದೂರದೃಷ್ಟಿಯ ತಂಡದ ಅಚ್ಚುಮೆಚ್ಚಿನ ಸಂಪ್ರದಾಯವಾಗಿ ಮಾರ್ಪಟ್ಟಿರುವ ಇಎಸ್‌ಎ ದಿನವನ್ನು ಆಚರಿಸಲು, ಮುಂಬೈ ನಗರದಾದ್ಯಂತದ ವಿವಿಧ ಎನ್​ಜಿಒಗಳಿಂದ ಬಂದಿದ್ದ ವಿಶೇಷ ಅಗತ್ಯವುಳ್ಳ 200 ಮಕ್ಕಳು ಸೇರಿದಂತೆ 18,000ಕ್ಕೂ ಹೆಚ್ಚುಮಕ್ಕಳು ಪಂದ್ಯ ವೀಕ್ಷಿಸಿ ಸಂಭ್ರಮಿಸಿದ್ದಾರೆ.
Mumbai Indians' owner Mrs. Nita Ambani and Sachin Tendulkar express their elation as 18,000 kids paint the Wankhede blue on#ESADay💙#IPLonJioCinema#TATAIPL#MIvDCpic.twitter.com/W05qbHb0YI
— JioCinema (@JioCinema)April 7, 2024

ಯುವ ಮನಸ್ಸುಗಳನ್ನು ಪ್ರೇರೇಪಿಸಲು ಮತ್ತು ವಿನಮ್ರ ಹಿನ್ನೆಲೆಯ ಮಕ್ಕಳಲ್ಲಿ ಶಿಕ್ಷಣ ಮತ್ತು ಕ್ರೀಡೆಗಳ ಮೌಲ್ಯಗಳನ್ನು ಉತ್ತೇಜಿಸುವ ಗುರಿಯನ್ನು ರಿಲಯನ್ಸ್ ಹೊಂದಿದೆ. ಈ ವರ್ಷ ಮಕ್ಕಳೆಲ್ಲರೂ ಮುಂಬೈ ಇಂಡಿಯನ್ಸ್ ನ ತನ್ನ ನೆಚ್ಚಿನ ಕ್ರಿಕೆಟಿಗರನ್ನು ಕ್ರೀಡಾಂಗಣದಲ್ಲೇ ಹುರಿದುಂಬಿಸಿದರು.
ನೀತಾ ಅಂಬಾನಿ ಮಾತನಾಡಿ, “ಮಕ್ಕಳು ಕ್ರೀಡಾಂಗಣಕ್ಕೆ ತುಂಬಾ ಸಂತೋಷವನ್ನು ತರುತ್ತಾರೆ. ಕ್ರೀಡೆಗೆ ತಾರತಮ್ಯವಿಲ್ಲ ಮತ್ತು ಪ್ರತಿಭೆ ಎಲ್ಲಿಂದಲಾದರೂ ಬರಬಹುದು ಎಂದು ನಾನು ನಂಬುತ್ತೇನೆ. ಬಹುಶಃ ಮಕ್ಕಳು ಕ್ರೀಡೆಯಲ್ಲಿನ ಅನುಭವದ ಉತ್ತಮ ನೆನಪುಗಳನ್ನು ಹೊಂದಿರುತ್ತಾರೆ” ಎಂದು ಅವರು ಹೇಳಿದ್ದಾರೆ.
ನಾವು 14 ವರ್ಷಗಳ ಹಿಂದೆ ಇಎಸ್‌ಎ ಪ್ರಾರಂಭಿಸಿದ್ದೇವೆ. ಭಾರತದಾದ್ಯಂತ 22 ಮಿಲಿಯನ್ ಮಕ್ಕಳನ್ನು ತಲುಪುತ್ತಿದೆ. ಪ್ರತಿಯೊಂದು ಮಗುವಿಗೂ ಆಡುವ ಹಕ್ಕು ಮತ್ತು ಓದುವ ಹಕ್ಕು ಇರಬೇಕು ಎಂದು ನಾನು ನಂಬುತ್ತೇನೆ. ಮಕ್ಕಳು ತರಗತಿಗಳಲ್ಲಿ ಕಲಿಯುವಷ್ಟು ಆಟದ ಮೈದಾನದಲ್ಲಿ ಕಲಿಯುತ್ತಾರೆ. ಕ್ರೀಡೆಗಳು ಅವರಿಗೆ ಶಿಸ್ತು ಮತ್ತು ಕಠಿಣ ಪರಿಶ್ರಮದಂತಹ ಅನೇಕ ವಿಷಯಗಳನ್ನು ಕಲಿಸುತ್ತವೆ.ಎಲ್ಲಕ್ಕಿಂತ ಹೆಚ್ಚಾಗಿ,  ಸೋಲುಗಳನ್ನು ಹೇಗೆ ತೆಗೆದುಕೊಳ್ಳಬೇಕೆಂದು ಕಲಿಸುತ್ತವೆ. ESA ಭಾರತದ ದೂರದ ಹಳ್ಳಿಗಳು ಮತ್ತು ಪಟ್ಟಣಗಳಿಂದ ಈ ಚಿಕ್ಕ ಮಕ್ಕಳಿಗೆ ಲಕ್ಷಾಂತರ ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ ಎಂದು ಹೇಳಿದರು.
ವಾರ್ಷಿಕ ಇಎಸ್‌ಎ ದಿನದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್  ಗೆಲುವು ಎಲ್ಲಾ ಆಟಗಾರರು, ಸಿಬ್ಬಂದಿ ಮತ್ತು ತರಬೇತುದಾರರ ನೆಚ್ಚಿನ ಆಟವಾಗಿ ಪರಿಣಮಿಸಿತು ಎಂದು ತಂಡದ ಮಾಲಕಿ ನೀತಾ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಮಾತನಾಡಿ, ಮೊದಲ ಬಾರಿಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಮೊದಲ ನೆನಪುಗಳನ್ನು ನೆನಪಿಸಿಕೊಂಡಿದ್ದಾರೆ. ಮಕ್ಕಳಿಗೆ ಜೀವನವನ್ನು ಬದಲಾಯಿಸುವ ಅನುಭವಗಳನ್ನು ನೀಡುವ ನೀತಾ ಅಂಬಾನಿ ಅವರ ದೃಷ್ಟಿ ಒಳ್ಳೆಯದಾಗಿದೆ. ಅಂಬಾನಿ ಅವರ ಮಾರ್ಗದರ್ಶನದಲ್ಲಿ ವಿಶ್ವದಾದ್ಯಂತ ಅನೇಕ ಮಕ್ಕಳಿಗೆ ಅವಕಾಶಗಳನ್ನು ಒದಗಿಸಲಾಗಿದೆ. ಮಕ್ಕಳ ಶಿಕ್ಷಣದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ಅದೇ ಅವಕಾಶಗಳನ್ನು ಒದಗಿಸುತ್ತಿದ್ದಾರೆ ಎಂದಿದ್ದಾರೆ.
ರವಿವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 29 ರನ್‌ ಗಳ ಜಯ ಸಾಧಿಸಿತು. ಸತತ ಮೂರು ಸೋಲಿನ ಬಳಿಕ ಗೆಲುವಿಗಾಗಿ ಪಣ ತೊಟ್ಟ ಮುಂಬೈ ಇಂಡಿಯನ್ಸ್ ಜಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.235 ರನ್‌ಗಳ ದೊಡ್ಡ ಮೊತ್ತ ಕಲೆ ಹಾಕಿದರು. ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 25 ಎಸೆತಗಳಲ್ಲಿ ಔಟಾಗದೆ 71 ರನ್ ಗಳಿಸಿದರು. ಆದರೆ ಇನ್ನೊಂದು ಬದಿಯಲ್ಲಿ ಅವರಿಗೆ ಬೆಂಬಲದ ಕೊರತೆ ಎದುರಾಯಿತು. 20 ಓವ‌ರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಲಷ್ಟೇ ಶಕ್ತವಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 9 =
Remember me
