ಮುಂಬೈ:ಐಪಿಎಲ್​ ಕ್ರಿಕೆಟ್​ನ ಮುಂಬೈ ಇಂಡಿಯನ್ಸ್ ಟೀಂ ಬ್ಯಾಟ್ಸ್​ಮನ್​ ಸೂರ್ಯ ಕುಮಾರ್ ಯಾದವ್ ಅವರಿಗೂ ಲಾಕ್​ಡೌನ್​ ಬಿಸಿ ತಟ್ಟಿದೆ. ಅವರ ಪ್ರೀತಿಯ ನಾಯಿಮರಿ (ಪಪ್ಪಿ)ಗೆ ತುರ್ತಾಗಿ ಎಂಆರ್​ಐ ಸ್ಕ್ಯಾನಿಂಗ್​ ಮಾಡಿಸಬೇಕಿದ್ದು, ಯಾವ ಆಸ್ಪತ್ರೆ ಅಥವಾ ಕ್ಲಿನಿಕ್ ಗೆ ಹೋಗಬೇಕು ಎಂದು ದಯವಿಟ್ಟು ತಿಳಿಸಿ ಎಂದು ಟ್ವೀಟ್​ ಮೂಲಕ ಕೋರಿದ್ದಾರೆ.
“ಶುಭೋದಯ, ನನ್ನ ನಾಯಿಮರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಬೇಕು. ಮುಂಬೈನ ಯಾವ ಆಸ್ಪತ್ರೆ ಅಥವಾ ಕ್ಲಿನಿಕ್​​ಗೆ ಪಪ್ಪಿಯನ್ನು ಕರೆದೊಯ್ಯಬಹುದು ಎಂದು ತಿಳಿಸಿ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಿ ಹೋಗುವುದು ಎಂದೇ ತಿಳಿಯುತ್ತಿಲ್ಲ. ನಾಯಿಮರಿಗೆ ನಿಯಮಿತವಾಗಿ ಸೆಳೆತ ಕಾಣಿಸಿಕೊಂಡಿದೆ. ಸಹಾಯ ಮಾಡಿ” ಎಂದು ಆದಿತ್ಯ ಠಾಕ್ರೆ, ಮುಂಬೈ ಪೊಲೀಸರು ಮತ್ತು ಮುಂಬೈ ಮಹಾನಗರ ಪಾಲಿಕೆಗೆ ಅವರು ಭಾನುವಾರ ಟ್ವೀಟ್​ ಮಾಡಿದ್ದಾರೆ.
ಇದನ್ನೂ ಓದಿಅಪಾಯಕಾರಿ ಟೆಸ್ಟ್ ಪಂದ್ಯವಿದ್ದಂತೆ ಕರೊನಾ; ಗಂಗೂಲಿ
ಈ ಹಿಂದೆಯೂ ಅಂದರೆ ಏಪ್ರಿಲ್​ 27ರಂದು ಕೂಡ ನಾಯಿಮರಿಗೆ ಸಿರಪ್​ ಬೇಕೆಂದು ಟ್ವೀಟ್ ಮಾಡಿದ್ದ ಸೂರ್ಯ ಯಾದವ್​, ” ಹಲೋ, ಎಲ್ಲರೂ ಮನೆಯಲ್ಲೇ ಇದ್ದು ಸುರಕ್ಷಿತವಾಗಿದ್ದೀರಿ ಎಂದು ಭಾವಿಸುತ್ತೇನೆ. ನನ್ನ ನಾಯಿಮರಿ ಪಪ್ಪಿಗೆ ತುರ್ತಾಗಿ ‘NEUROPLUS’ ಮತ್ತು ‘Liva+’ ಸಿರಪ್ ಬೇಕು. ಹತ್ತಿರದ ಯಾವುದೇ ಮೆಡ್‌ಸ್ಟೋರ್‌ನಲ್ಲಿ ಈ ಸಿರಪ್​ ಸಿಗುತ್ತಿಲ್ಲ. ಪೆಟ್ ಮೆಡ್​ಸ್ಟೋರ್​ ಅಥವಾ ಯಾವುದೇ ಪಿಇಟಿ ಅಂಗಡಿಯಲ್ಲಿ ಈ ಸಿರಪ್​ ಇದ್ದರೆ ಯಾರಾದರೂ ತಿಳಿಸಿ. ನಿಮ್ಮಿಂದ ಬಹಳ ಸಹಾಯವಾಗುತ್ತದೆ. ಧನ್ಯವಾದಗಳು. ನಿಮ್ಮ ಆರೋಗ್ಯದ ಕಡೆ ಗಮನ ಇರಲಿ” ಎಂದಿದ್ದರು.
ವಿಶ್ವದಾದ್ಯಂತ ದುಸ್ವಪ್ನವಾಗಿ ಕಾಡುತ್ತಿರುವ ಕರೊನಾ ವೈರಸ್ ನಿಂದಾಗಿ ಈಗಾಗಲೇ ಕ್ರೀಡಾಕೂಟಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಕ್ರಿಕೆಟ್​ ಕೂಡ ಹೊರತಾಗಿಲ್ಲ. 29 ವರ್ಷದ ​ ಸೂರ್ಯ ಕುಮಾರ್ ಯಾದವ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಬೇಕಿತ್ತು. ಈಗ ಅವರು ತನ್ನ ನಾಯಿಮರಿಯ ಆರೋಗ್ಯ ಕಾಪಾಡುವಲ್ಲಿ ಬಿಜಿಯಾಗಿದ್ದಾರೆ.(ಏಜೆನ್ಸೀಸ್​)
ಇದನ್ನೂ ಓದಿನನ್ನ ಸಾವಿನ ಘೋಷಣೆಯೊಂದೇ ಬಾಕಿ ಇತ್ತು, ನಡೆಯಿತು ಪವಾಡ ಎಂದ ಪ್ರಧಾನಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − nine =
Remember me
