ಮುಂಬೈ:ಕರೊನಾ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಮದ್ಯವನ್ನು ಆನ್​ಲೈನ್​ನಲಷ್ಟೇ ಆರ್ಡರ್​ ಮಾಡಲು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ. ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ಕೊಟ್ಟ ಬೆನ್ನಲ್ಲೇ ಸಾಮಾಜಿಕ ಅಂತರ ಮರೆತು ಅಂಗಡಿಗಳ ಮುಂದೆ ನೂಕು ನುಗ್ಗುಲು ಮಾಡಿದ್ದರ ಪರಿಣಾಮವಾಗಿ, ವೈರಸ್​ ಭೀತಿಯಿಂದ ಕೇವಲ ಆನ್​ಲೈನ್​ ವ್ಯವಹಾರಕ್ಕೆ ಸರ್ಕಾರ ಅನುಮತಿ ನೀಡಿದೆ.
ಇದು ತುಂಬಾ ಒಳ್ಳೆಯ ನಡೆ ಎನಿಸಿಕೊಂಡರೂ, ಇದೀಗ ಎಣ್ಣೆ ಪ್ರಿಯರಿಗೆ ಆನ್​ಲೈನ್​ ಆರ್ಡರ್​ ಶಾಕ್​ ಕೊಟ್ಟಿದೆ. ದುಬಾರಿ ಬೆಲೆಯ ಮದ್ಯಗಳನ್ನು ಆರ್ಡರ್​ ಮಾಡಿ ಬಾಯಿ ಚಪ್ಪರಿಸುತ್ತಾ ಮನೆಯಲ್ಲಿ ಕೂತ ನೂರಾರು ಮಂದಿ ಈಗ ಬಾಯಿಬಾಯಿ ಬಡಿದುಕೊಳ್ಳುವಂತಾಗಿದೆ. ಅದರಲ್ಲಿಯೂ ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವವರಿಗೆ ಇಂಥ ಸ್ಥಿತಿ ಬಂದಿದೆ.
ಇದನ್ನೂ ಓದಿ:ಸ್ಮಾರ್ಟ್​ಫೋನ್​ನಲ್ಲಿ ಕರೊನಾ ಕುರಿತ ಸಂದೇಶ ಕ್ಲಿಕ್​ ಮಾಡುವ ಮುನ್ನ ಎಚ್ಚರ… ಎಚ್ಚರ… ಸಿಬಿಐ ವಾರ್ನಿಂಗ್​!
ಕಾರಣ ಇಷ್ಟೇ. ಆನ್​ಲೈನ್​ ಮಾರಾಟವನ್ನೇ ಬಂಡವಾಳವಾಗಿಸಿಕೊಂಡಿರುವ ಕೆಲವರು ಎಣ್ಣೆ ಪ್ರಿಯರಿಗೆ ಗಾಳ ಹಾಕಲು ಶುರು ಮಾಡಿದ್ದಾರೆ. ತಾವು ಮದ್ಯ ಪೂರೈಕೆದಾರರು ಎಂದುಕೊಂಡು ನಕಲಿ ಹೆಸರಿನಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಮೋಸ ಮಾಡುತ್ತಿದ್ದಾರೆ. ಮದ್ಯದ ಅಂಗಡಿಗಳ ಹೆಸರಿನಲ್ಲಿ ಈ ಖಾತೆಗಳನ್ನು ತೆರೆಯಲಾಗಿದೆ.
ತಮ್ಮೂರಲ್ಲಿಯೇ ಯಾವ ಮದ್ಯದ ಅಂಗಡಿಗಳು ಆನ್​ಲೈನ್​ ಮೂಲಕ ಪೂರೈಕೆ ಮಾಡುತ್ತವೆ ಎಂಬುದನ್ನು ಆನ್​ಲೈನ್​ ಆರ್ಡರ್​ ಮಾಡುವವರು ಹುಡುಕಾಟ ನಡೆಸಿದಾಗ ಅವರಿಗೆ ಮೊದಲಿಗೆ ಕಾಣಿಸುವುದು ಇದೇ ಮೋಸದ ಅಂಗಡಿಗಳು. ಅದರ ಮೇಲೆ ಕ್ಲಿಕ್​ ಮಾಡಿ ತಮ್ಮಿಷ್ಟದ ಮದ್ಯಕ್ಕೆ ಆರ್ಡರ್​ ಮಾಡುತ್ತಾರೆ. ನಂತರ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿ ಮಾಡುವಂತೆ ಜನರಿಗೆ ಸೂಚನೆ ನೀಡಲಾಗುತ್ತದೆ. ಮುಂಗಡ ಹಣವನ್ನೋ ಅಥವಾ ಸಂಪೂರ್ಣ ಹಣವನ್ನೋ ಆ ಖಾತೆಗೆ ಇವರು ನೀಡುತ್ತಾರೆ, ಅಷ್ಟೇ…
fಇದನ್ನೂ ಓದಿ:ಮುಸ್ಲಿಮರ ದುಡ್ಡು ಮುಸ್ಲಿಮರಿಗಷ್ಟೇ, ಕರೊನಾ ನಿಧಿಗೆ ಅಲ್ಲ ಎಂದ ಶಾಸಕ ಜಮೀರ್​ ಅಹ್ಮದ್​- ಹಣ ಕೊಡುವವರಿಗೂ ಅಡ್ಡಗಾಲು!
ಇನ್ನು ಇಷ್ಟು ಗಂಟೆಯ ಒಳಗೆ ನಿಮ್ಮ ಮನೆಗೆ ಮದ್ಯಪೂರೈಕೆ ಮಾಡಲಾಗುತ್ತದೆ ಎಂಬ ಮೆಸೇಜ್​ ನಂಬಿಕೊಂಡು, ಅದರದ್ದೇ ಕನಸು ಕಾಣುವವರಿಗೆ ಎಷ್ಟು ಹೊತ್ತಾದರೂ ಮದ್ಯ ಬರುವುದೇ ಇಲ್ಲ. ಗಂಟೆ ಬಿಟ್ಟು ದಿನಗಳಾದರೂ ಅದರ ಪತ್ತೆಯೇ ಇರುವುದಿಲ್ಲ. ಆಗಲೇ ತಾವು ಮೋಸ ಹೋಗಿರುವ ವಿಷಯ ತಿಳಿಯುತ್ತದೆ. ಸಹಸ್ರಾರು ರೂಪಾಯಿ ಕಳೆದುಕೊಂಡು ಕುಡಿಯುವ ಮೊದಲೇ ನಶೆ ಏರುವ ಸ್ಥಿತಿ ಉಂಟಾಗುತ್ತದೆ.
ತಮ್ಮ ಗುಟ್ಟು ರಟ್ಟಾಗುವ ಭಯದಿಂದ ಕೆಲವರು ಮಾನಕ್ಕೆ ಅಂಜಿ ಕಂಪ್ಲೇಂಟ್​ ಕೂಡ ಕೊಡಲು ಅನೇಕರು ಹೋಗುತ್ತಿಲ್ಲ. ಆದರೆ ಇದೀಗ ಕೆಲವರು ಪೊಲೀಸ್​ ಕಂಪ್ಲೇಂಟ್​ ಕೊಟ್ಟಿದ್ದರಿಂದ ವಿಷಯ ಬಹಿರಂಗಗೊಂಡಿದೆ. ನೌಕಾ ಪಡೆಯ ನಿವೃತ್ತ ಅಧಿಕಾರಿ, ಸಿನಿಮಾ ನಿರ್ಮಾಪಕ, ಮಾಜಿ ಶಾಸಕರೊಬ್ಬರ ಸ್ನೇಹಿತರೂ ಸೇರಿದಂತೆ ಗಣ್ಯ ವ್ಯಕ್ತಿಗಳು ಎನಿಸಿಕೊಂಡವರೇ ಹೆಚ್ಚಿನ ರೀತಿಯಲ್ಲಿ ಮೋಸ ಹೋಗಿರುವುದಾಗಿ ಪೊಲೀಸ್​ ಇಲಾಖೆ ಹೇಳಿದೆ.
ಇದನ್ನೂ ಓದಿ:ಕರೊನಾ ಹೋರಾಟದ ಮುಂಚೂಣಿಯಲ್ಲಿರುವ ಡಾ. ಹರ್ಷ್​ ವರ್ಧನ್ ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ಮಂಡಳಿಗೆ ಅಧ್ಯಕ್ಷಮುಂಬೈನ ಜುಹೂನಲ್ಲಿರುವ ಜನಪ್ರಿಯ ಮದ್ಯದಂಗಡಿಯ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಖಾತೆ ತೆರೆಯಲಾಗಿತ್ತು. ಅದನ್ನು ನಂಬಿದ್ದ ನಾನು 40 ಸಾವಿರ ರೂ. ಮೌಲ್ಯದ ಮದ್ಯ ಖರೀದಿಸಿದ್ದೆ,. 5 ಸಾವಿರ ರೂ. ಮುಂಗಡ ಹಣ ಪಾವತಿಸಿದ್ದೆ. ಮದ್ಯ ಮನೆಗೆ ಬಾರದೇ ಇದ್ದಾಗಲೇ ಮೋಸ ಹೋಗಿರುವುದು ತಿಳಿದಿದೆ ಎಂದು ಚಿತ್ರ ನಿರ್ಮಾಪಕ ಒಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪೊಲೀಸ್​ ಕಂಪ್ಲೇಂಟ್​ ಕೊಟ್ಟ ನಂತರ ತನಿಖೆ ಕೈಗೊಂಡಾಗ ಬಿಹಾರದ ಕೆಲ ಸ್ಥಳಗಳಿಂದ ಕೆಲ ಕಿಡಿಗೇಡಿಗಳು ಈ ರೀತಿ ಮಾಡುತ್ತಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 × two =
Remember me
