ಸೋಷಿಯಲ್ ಮೀಡಿಯಾದಲ್ಲಿಯಾವುದಾದರೂ ಒಂದು ಫೋಟೋ ಹರಿದಾಡಿದರೆ, ಅದು ಯಾವ ವಿಷಯವನ್ನು ಹೇಳುತ್ತಿದೆ? ಏನನ್ನು ಹೋಲುತ್ತದೆ ಎಂಬ ಹಲವಾರು ಪ್ರಶ್ನೆಗಳು ಭಾರೀ ಚರ್ಚೆಗೆ ಕಾರಣವಾಗುತ್ತದೆ. ಕೆಲವರು ಫೋಟೋ ಶೇರ್​ ಮಾಡಿ, ವ್ಯಾಪಕ ಟೀಕೆ ಮಾಡಿದ್ರೆ, ಇನ್ನೂ ಕೆಲವರು ಅದರಿಂದ ಜನರಿಗೆ ಏನಾದರೂ ಉಪಯೋಗವಾಗುತ್ತದೆಯೇ ಎಂಬ ಅಂಶವನ್ನು ಕೆದಕುತ್ತಾರೆ. ಸದ್ಯ ಇಲ್ಲೊಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 1970ರಲ್ಲಿನ ಮುಂಬೈ ರೈಲು ಮತ್ತು ಇಂದಿನ ಮುಂಬೈ ರೈಲಿನ ಛಾಯಚಿತ್ರವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಪ್ಲೇಆಫ್​​ಗೂ ಮುನ್ನ ಕೆಕೆಆರ್​ ತಂಡಕ್ಕೆ ಆಘಾತ; ಟೂರ್ನಿಯಿಂದ ಹೊರನಡೆದ ಸ್ಟಾರ್​ ಆಟಗಾರ
1970ರ ಹಳೆಯ ಫೋಟೋದಲ್ಲಿ ಮುಂಬೈ ನಿವಾಸಿಗಳು ತಮ್ಮ ದಿನನಿತ್ಯದ ಕೆಲಸಗಳಿಗಾಗಿ ಲೋಕಲ್ ಟ್ರೈನ್​ ಹಿಡಿದು ಹೇಗೆಲ್ಲಾ ಪ್ರಯಾಣಿಸುತ್ತಿದ್ದರು ಎಂಬುದನ್ನು ತೋರಿಸಲಾಗಿದೆ. ಮತ್ತೊಂದು ಫೋಟೋದಲ್ಲಿಯೂ ವಾಣಿಜ್ಯ ನಗರಿಯ ಜನರು ಇಂದು ಹೇಗೆ ಪ್ರಯಾಣ ಮಾಡುತ್ತಿದ್ದಾರೆ ಎಂಬುದನ್ನೇ ತೋರಿಸಿದೆ. ಹಾಗಾದ್ರೆ, ಇದರಲ್ಲಿ ಏನಿದೆ ವಿಶೇಷತೆ? ಎಂಬ ಪ್ರಶ್ನೆಗೆ ನೆಟ್ಟಿಗರು ಕೊಟ್ಟ ಉತ್ತರ ಹೀಗಿದೆ.
ಎರಡು ಸಹ ಮುಂಬೈ ಲೋಕಲ್ ಟ್ರೈನ್​ ಅನ್ನೇ ಒಳಗೊಂಡಿದೆ ಹಾಗೂ ಸ್ಥಳೀಯ ಪ್ರಯಾಣಿಕರು ಇರುವುದು ಕಂಡುಬಂದಿದೆ. ಎರಡರಲ್ಲೂ ಕಿಂಚಿತ್ತಾದರೂ ಬದಲಾವಣೆ ಇದ್ಯಾ? ಖಂಡಿತ ಇಲ್ಲ. 1970ಕ್ಕೂ 2024ಕ್ಕೂ ಏನೂ ವ್ಯತ್ಯಾಸ ಇಲ್ಲ! ಆಗಲೂ ಸಹ ಜನರು ಡೋರಿನ ಹೊರಗೆಯೇ ನಿಂತಿದ್ದಾರೆ. ಈಗಲೂ ಬಾಗಿಲ ಹೊರಗೆ ನಿಂತುಕೊಂಡೆ ಪ್ರಯಾಣಿಸುತ್ತಿದ್ದಾರೆ. ಇದು ಯಾವ ಕರ್ಮ? ಅಭಿವೃದ್ಧಿ ಏನಾಯ್ತು? ಎಂದೆಲ್ಲಾ ಕಮೆಂಟ್ ಮಾಡಿ ಬೇಸರ ಹೊರಹಾಕಿದ್ದಾರೆ,(ಏಜೆನ್ಸೀಸ್).
ತನ್ನ ಪತಿ​ ರಾಹುಲ್​ಗೆ ಬೈದ LSG ಮಾಲೀಕನಿಗೆ ಅತಿಯಾ ಶೆಟ್ಟಿ ಕೊಟ್ರಾ ತಿರುಗೇಟು? ಫೋಟೋ ವೈರಲ್

ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
