ಮುಂಬೈ:ಸೋಶಿಯಲ್​ ಮೀಡಿಯಾ ಖಾತೆಯ ಪ್ರೊಫೈಲ್‌ನಲ್ಲಿ ಮೊಘಲ್​​ ವಂಶಸ್ಥ ಔರಂಗಜೇಬ್​ನ ಚಿತ್ರವನ್ನು ಹಾಕಿದ್ದ ಮುಂಬೈ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಶಿ ಬಂಧಿತ ವ್ಯಕ್ತಿ. ವಾಟ್ಸ್​ಆ್ಯಪ್​ ಪ್ರೊಫೈಲ್​​ಗೆ ಮೊಘಲ್ ವಂಶಸ್ಥ ಔರಂಗಜೇಬ್​ನ ಫೋಟೋವನ್ನು ಅಪ್​ಲೋಡ್​​ ಮಾಡಿದ್ದನು. ಇದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ಸಂಘಟನೆಗಳು ದೂರನ್ನೂ ದಾಖಲಿಸಿದ್ದವು. ದೂರಿನ ಆಧಾರದಲ್ಲಿ ವಶಿ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆತನಿಗೆ ನೊಟೀಸ್  ಜಾರಿಗೊಳಿಸಲಾಗಿದೆ.
ಇದನ್ನೂ ಓದಿ:ಮಾವನ 3 ಷರತ್ತುಗಳನ್ನು ಕೇಳಿ ಮದುವೆ ದಿನವೇ ಹೆಂಡತಿಯನ್ನು ಬಿಟ್ಟು ಹೋದ ಗಂಡ!
ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ) 153-A (ಧರ್ಮ, ಜನಾಂಗ, ಜನ್ಮ ಸ್ಥಳ, ನಿವಾಸದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.
ಈ ಹಿಂದೆ ಔರಂಗಜೇಬ್ ಹಾಗೂ ಟಿಪ್ಪು ಸುಲ್ತಾನ್ ನ್ನು ವೈಭವಿಕರಿಸಿದ್ದರ ಪರಿಣಾಮ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಕೋಮು ಘರ್ಷಣೆಯ ಪರಿಸ್ಥಿತಿಯ ಘಟನೆಗಳು ವರದಿಯಾಗಿದ್ದವು. ಕೊಲ್ಹಾಪುರ ನಗರದಲ್ಲಿ ಕೆಲವು ಸ್ಥಳೀಯರು ಟಿಪ್ಪು ಸುಲ್ತಾನ್ ಚಿತ್ರವನ್ನು ಆಕ್ಷೇಪಾರ್ಹ ಆಡಿಯೋ ಮೆಸೇಜ್ ನೊಂದಿಗೆ ಪ್ರಕಟಿಸಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆದಿತ್ತು. ಹೀಗಾಗಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
4 ತಿಂಗಳ ಮಗುವಿನ ಪಕ್ಕ ಹೆಡೆ ಬಿಚ್ಚಿದ ವಿಷ ಸರ್ಪ; ಕಂದಮ್ಮನ ಪ್ರಾಣ ಉಳಿಸಲು ತಾಯಿ ಮಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 10 =
Remember me
