ಮುಂಬೈ:ಮರದಲ್ಲಿ ಸಿಲುಕಿದ್ದ ಹಾಸಿಗೆ ತೆಗೆಯಲು ಹೋಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಮಂಬೈನ ಸಾಂತಾಕ್ರೂಜ್‌ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:ಕೊಪ್ಪಳ | ಹಣಕ್ಕಾಗಿ ಕಾರು ಮಾಲೀಕನ ಮಗನನ್ನೇ ಕೊಂದ‌ ಪಾಪಿ ಡ್ರೈವರ್!ಮೃತನನ್ನು ವಿಜಯ್​ ಗುಪ್ತಾ(35) ಎಂದು ಗುರುತಿಸಲಾಗಿದ್ದು, ಆತ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಪಕ್ಕದ ಕಟ್ಟಡದ ಮರದಲ್ಲಿ ಹಾಸಿಗೆ ಸಿಲುಕಿಕೊಂಡಿದ್ದನ್ನು ಗಮನಿಸಿದ ವಿಜಯ್​, ಹಾಸಿಗೆಯನ್ನು ತೆಗೆಯಬೇಕೆಂಬ ಉದ್ದೇಶದಿಂದ ತಮ್ಮ ಕಟ್ಟಡದ ಮೇಲೆ ಹತ್ತಿದ್ದ. ಎರಡನೇ ಮಹಡಿಯಿಂದ ಹಾಸಿಗೆಯನ್ನು ತೆಗೆಯಲು ಯತ್ನಿಸಿದ ವಿಜಯ್​ ಸಮತೋಲನ ಕಳೆದುಕೊಂಡು ಕಟ್ಟಡದಿಂದ ಬಿದ್ದಿದ್ದಾನೆ.ಕೂಡಲೇ ಈತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.ಪ್ರತ್ಯಕ್ಷದರ್ಶಿಯೊಬ್ಬರು ಈ ಕುರಿತು ಮಾತನಾಡಿದ್ದು, ಗಾಳಿ ಬೀಸಿದ್ದರಿಂದ ಹಾಸಿಗೆ ಮರದಲ್ಲಿ ಸಿಲುಕಿಕೊಂಡಿರಬಹುದು. ಹಾಸಿಗೆ ತೆಗೆಯಬೇಡಿ ಎಂದು ಗುಪ್ತಾಗೆ, ಆತನ ಕುಟುಂಬಸ್ಥರು ಹೇಳಿದರೂ ಅವರ ಮಾತಿಗೆ ಬೆಲೆ ಕೊಡದೇ ಛಾವಣಿ ಏರಿದ್ದ. ಹೀಗಾಗಿ ಈ ದುರ್ಘಟನೆ ನಡೆದಿದೆ ಎಂದಿದ್ದಾರೆ.ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + four =
Remember me
